ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಬಜಾಜ್ ಆಟೋ ತನ್ನ ಜನಪ್ರಿಯ ಚೇತಕ್ ಬ್ರ್ಯಾಂಡ್ ಅಡಿಯಲ್ಲಿ ಚೇತಕ್ C25 ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಇದನ್ನು ₹91,399 (ಎಕ್ಸ್-ಶೋರೂಂ) ಆರಂಭಿಕ ಬೆಲೆಗೆ ಪರಿಚಯಿಸಿದೆ. ಚೇತಕ್ ಕುಟುಂಬದಲ್ಲಿನ ಈ ಹೊಸ ಮಾದರಿಯು ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಶ್ರೇಣಿಯಲ್ಲಿ ಗಮನಾರ್ಹ ಸುಧಾರಣೆಗಳನ್ನು ನೀಡುತ್ತದೆ.
ಪ್ರಸ್ತುತ ದಿನಗಳಲ್ಲಿ ಪ್ಲಾಸ್ಟಿಕ್ ಮತ್ತು ಫೈಬರ್ ಮೆಟೀರಿಯಲ್ಗಳಿಂದ ನಿರ್ಮಾಣವಾಗಿರುವ ಸ್ಕೂಟರ್ಗಳಿಗಿಂತ ಇದು ಭಿನ್ನವಾಗಿದೆ, ಚೇತಕ್ ತನ್ನ ದೃಢವಾದ ಮೆಟಲ್ ಬಾಡಿಯೊಂದಿಗೆ ನಿರ್ಮಾಣವಾಗಿದೆ. ಗ್ರಾಹಕರು, ಯುವಕರು, ಮಹಿಳೆಯರು ಸೇರಿದಂತೆ ಭಾರತದಲ್ಲಿ ಪ್ರತಿಯೊಬ್ಬರಿಗೂ ಅಚ್ಚು ಮೆಚ್ಚಿದೆ. ಇಂಧನ ಚಾಲಿತ ಸ್ಕೂಟರ್ಗಳಿಂದ ಎಲೆಕ್ಟ್ರಿಕ್ ಸ್ಕೂಟರ್ಗಳ ಕಡೆಗೆ ವಾಲುತ್ತಿರುವವರಿಗೆ ಚೇತಕ್ C25 ಒಂದು ಒಳ್ಳೆಯ ಆಯ್ಕೆಯಾಗಲಿದೆ.
ಹೊಸ ಬಜಾಜ್ ಚೇತಕ್ C25 ನಯವಾದ, ರೆಟ್ರೋ-ಕ್ಲಾಸಿಕ್ ಡಿಸೈನ್ನೊಂದಿಗೆ ಪ್ರೀಮಿಯಂ ಮೆಟಲ್ ಬಾಡಿ, ಸಿಗ್ನೇಚರ್ DRL ಹೆಡ್ಲ್ಯಾಂಪ್, ಜಾಯಿಂಟ್ಗಳಿಲ್ಲದ ಮೊನೊ – ಬಾಡಿ ನಿರ್ಮಾಣ ಮತ್ತು ರೋಮಾಂಚಕ ಬಣ್ಣ ಆಯ್ಕೆಗಳು, ಸ್ಕೂಟರ್ಗೆ ಸ್ವಚ್ಛ ಮತ್ತು ವಿಶಿಷ್ಟವಾದ ಪ್ರೀಮಿಯಂ ಲುಕ್ ನೀಡುತ್ತವೆ. ವಿಶಿಷ್ಟವಾದ ಸ್ಟ್ರೀಟ್ ಆರ್ಟ್ನಿಂದ ಪ್ರೇರಿತವಾದ ಗ್ರಾಫಿಕ್ಸ್ನೊಂದಿಗೆ ಆರು ರೋಮಾಂಚಕ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.
ಚೇತಕ್ C25 ಭಾರತೀಯ ಮಾರುಕಟ್ಟೆಯಲ್ಲಿ ಸಂಪೂರ್ಣ ಮೆಟಲ್ ಬಾಡಿ ಹೊಂದಿರುವ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು 25 ಲೀಟರ್ ಬೂಟ್ ಸ್ಪೇಸ್ ಮತ್ತು 650 ಮಿಲಿಮೀಟರ್ ಉದ್ದದ ಫುಲ್-ಲೆಂಥ್ ಸೀಟನ್ನು ನೀಡುತ್ತದೆ. ಇದು ದೈನಂದಿನ ಬಳಕೆಗೆ ಸಾಕಷ್ಟು ಆರಾಮದಾಯಕವೆಂದು ಪರಿಗಣಿಸಲಾಗಿದೆ. ಈ ಸ್ಕೂಟರ್ ಆರು ಬಣ್ಣಗಳಲ್ಲಿ ಲಭ್ಯವಿದೆ. ಅವುಗಳೆಂದ್ರೆ ರೇಸಿಂಗ್ ರೆಡ್, ಮಿಸ್ಟಿ ಯೆಲ್ಲೋ, ಓಷನ್ ಟೀಲ್, ಆಕ್ಟಿವ್ ಬ್ಲ್ಯಾಕ್, ಓಪಲೆಸೆಂಟ್ ಸಿಲ್ವರ್ ಮತ್ತು ಕ್ಲಾಸಿಕ್ ವೈಟ್ ಆಗಿವೆ. 2.5 kWh ಬ್ಯಾಟರಿಯಿಂದ ನಡೆಸಲ್ಪಡುವ ಚೇತಕ್ C25′ ಸಿಂಗಲ್ ಚಾರ್ಜ್ನಲ್ಲಿ 113 ಕಿ.ಮೀ ವರೆಗೆ ರೇಂಜ್ ನೀಡುತ್ತದೆ. ಗಂಟೆಗೆ 55 ಕಿ.ಮೀ ಟಾಪ್ ಸ್ಪೀಡ್ ಮತ್ತು ಕೇವಲ 2.25 ಗಂಟೆಗಳಲ್ಲಿ ಶೇ80 ರಷ್ಟು ಚಾರ್ಜ್ ಆಗುತ್ತದೆ.
ದೈನಂದಿನ ನಗರ ಬಳಕೆಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಈ ಸ್ಕೂಟರ್ 25-ಲೀಟರ್ ಬೂಟ್ ಜಾಗವನ್ನು ನೀಡುವ ಮೂಲಕ ಹೆಚ್ಚುವರಿ ಸರಕುಗಳನ್ನು ಸಾಗಿಸಲು ಅನುಕೂಲತೆ ನೀಡುತ್ತದೆ. ದೈನಂದಿನ ಕೆಲಸಗಳಿಗೆ ಅಥವಾ ಒಂದು ಕುಟುಂಬಕ್ಕೆ ಒಂದು ವಾರದ ದಿನಸಿ ವಸ್ತುಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ನೀಡುತ್ತದೆ. ಹಿಲ್ ಹೋಲ್ಡ್ ಅಸಿಸ್ಟ್, ಗೈಡ್ ಮಿ ಹೋಮ್ ಮತ್ತು ಡಿಸ್ಕ್ ಬ್ರೇಕ್ಗಳಂತಹ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಚೇತಕ್ನ ಸಿಗ್ನೇಚರ್ ಮೆಟಲ್ ಬಾಡಿ ಹೊಂದಿರುವ ಸ್ಟೈಲಿಶ್, ಅಗೈಲ್ ಎಲೆಕ್ಟ್ರಿಕ್ ಸ್ಕೂಟರ್, 2.5 kWh ಬ್ಯಾಟರಿಯಿಂದ ಚಾಲಿತವಾಗಿದ್ದು, ಒಮ್ಮೆ ಫುಲ್ ಚಾರ್ಜ್ ಮಾಡಿ 113 ಕಿ.ಮೀವರೆಗೆ ಓಡಿಸಬಹುದು. ರೂ. 91,399 (ಎಕ್ಸ್-ಶೋರೂಂ) ಬೆಲೆಯ ಹೊಸ ಚೇತಕ್ C25 ಭಾರತದಾದ್ಯಂತ ಚೇತಕ್ನ ಎಲ್ಲಾ ಮಳಿಗೆಳಲ್ಲಿ ಈಗ ಖರೀದಿಗೆ ಲಭ್ಯವಿದೆ.
ಚೇತಕ್ನ ವ್ಯಾಪಕ ಸರ್ವಿಸ್ ನೆಟ್ವರ್ಕ್ನಿಂದ ಬೆಂಬಲಿತವಾದ C25, ಯಾವುದೇ ಸಮಸ್ಯೆ ಬಂದರೂ ತ್ವರಿತ ಪರಿಹಾರವನ್ನು ಪಡೆಯಬಹುದು. ಈ ಸ್ಕೂಟರ್ ಮೊದಲ ಬಾರಿಯ EV ಖರೀದಿದಾರರು ಮತ್ತು ದೈನಂದಿನ ನಗರ ಪ್ರಯಾಣಕ್ಕಾಗಿ ತಮ್ಮ ಮನೆಗಳಿಗೆ ಎರಡನೇ ಸ್ಕೂಟರ್ ಅನ್ನು ಖರೀದಿಸಲು ನೋಡುತ್ತಿರುವವರಿಗೆ ಬಲವಾದ ಆಯ್ಕೆಯಾಗಿದೆ.

Leave a Comment