
ನೀವು ನುಗ್ಗೀಕಾಯಿಯಿಂದ ಸಾಂಬರ್ ಮಾಡಿ, ಸೂಪ್ ಮಾಡಿ ಸವಿದಿರಬಹುದು. ಹಾಗಿದ್ರೆ ಇಂದು ತುಂಬಾ ಟೇಸ್ಟ್ ಆಗಿರೋ, ಎಲ್ಲರ ನಾಲಿಗೆಗೂ ರುಚಿಸುವಂತ ನುಗ್ಗೇಕಾಯಿ ಗ್ರೇವಿ ಮಾಡಿ ಟ್ರೈ ಮಾಡಿ. ಬನ್ನಿ, ನುಗ್ಗೇಕಾಯಿ ಗ್ರೇವಿ ಹೇಗೆ ಮಾಡೋದು ಅಂತ ಇಲ್ಲಿ ತಿಳಿಸಿಕೊಡ್ತೀನಿ.
ಬೇಕಾಗುವ ಪದಾರ್ಥಗಳು
1 ಈರುಳ್ಳಿ, ಸ್ವಲ್ಪ ಶೇಂಗಾ, ಕಾಯಿತುರಿ, 4 ಹಸಿಮೆಣಸು, ಚಿಕ್ಕದಾದ ಶುಂಠಿ, ಬೆಳ್ಳುಳ್ಳಿ, 5 ನುಗ್ಗೇಕಾಯಿ, ಉಪ್ಪು, ಅರಿಶಿಣ, ಎಣ್ಣೆ, ಸಾಸಿವೆ, ಜೀರಿಗೆ, ಖಾರದಪುಡಿ, ಗರಂಮಸಾಲಾ, ಸಾಂಬಾರ್ ಪುಡಿ.
ಮಾಡುವ ವಿಧಾನ
ಮೊದಲಿಗೆ ಬಾಣಲೆಗೆ ಎಣ್ಣೆ ಹಾಕಿ, ನಂತರ ಈರುಳ್ಳಿ, ಶೇಂಗಾ, ಕಾಯಿತುರಿ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ, ತಣ್ಣಗಾದ ಬಳಿಕ ರುಬ್ಬಿ ಇಟ್ಟುಕೊಳ್ಳಬೇಕು. ಬಳಿಕ ಬಾಣಲೆಗೆ ಎಣ್ಣೆ ಹಾಕಿ ನುಗ್ಗೆಕಾಯಿ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿಣ ಹಾಕಿ ಸ್ವಲ್ಪ ಬೇಯಿಸಬೇಕು.
ನಂತರ ಇದನ್ನು ತೆಗೆದು, ಮತ್ತೆ ಅದೇ ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ ರುಬ್ಬಿದ ಮಸಾಲೆ ಹಾಕಬೇಕು. ನಂತರ ಸಣ್ಣ ಉರಿಯಲ್ಲಿ ಬಾಡಿಸಿ, ಆಮೇಲೆ ಉಪ್ಪು, ಖಾರದಪುಡಿ, ಗರಂಮಸಾಲಾ, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಬೇಕು. ನಂತರ ಇದಕ್ಕೆ ನುಗ್ಗೇಕಾಯಿ ಹಾಕಿ ಚೆನ್ನಾಗಿ ತಿರುಗಿಸಿ ಹದಕ್ಕೆ ಬರುವಂತೆ ಬಾಡಿಸಬೇಕು. ಬಳಿಕ ಅನ್ನದೊಂದಿಗೆ ಅಥವಾ ಚಪಾತಿಯೊಂದಿಗೆ ಸವಿಯಲು ನುಗ್ಗೇಕಾಯಿ ಗ್ರೇವಿ ಸಿದ್ಧ.
Leave a Comment