ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಅಮೃತ ವರ್ಷಿಣಿ ಮೂಲಕ ನಟನೆಗೆ ಕಾಲಿಟ್ಟ ನಟಿ ರಜಿನಿ ಅವರು, ಜಿಮ್ ಟ್ರೈನರ್ ಅರುಣ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಜಿನಿ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕೆಲಸ ಮಾಡಿದ್ದು, ‘ಅಮೃತವರ್ಷಿಣಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಇಂದಿಗೂ ರಜಿನಿ ಅವರನ್ನು ಜನರು ಅಮೃತ ಎಂದೇ ಗುರುತಿಸುವುದುಂಟು.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ರಜಿನಿ ಅವರು, ಜಿಮ್ ಟ್ರೈನರ್ ಅರುಣ್ ಅವರೊಂದಿಗೆ ಸಾಕಷ್ಟು ರೀಲ್ಸ್ ಗಳನ್ನು ಮಾಡುತ್ತಿದ್ದರು. ರೀಲ್ಸ್ ನೋಡಿದ ಅಭಿಮಾನಿಗಳು ಇಬ್ಬರು ಡೇಟಿಂಗ್ ನಲ್ಲಿದ್ದಾರೆಂದು ಹೇಳುತ್ತಿದ್ದರು, ಈ ಬಗ್ಗೆ ಹಲವು ಪ್ರಶ್ನೆಗಳನ್ನು ಮಾಡಿದ್ದರೂ, ರಜಿನಿಯವರು “ನಾವು ಸ್ನೇಹಿತರು” ಎಂದು ಹೇಳಿದ್ದಾರೆ. ಪ್ರವಾಸ ಇರಲೀ, ದೇವಸ್ಥಾನಕ್ಕೆ ಹೋಗಲಿ ರಜಿನಿ ಅವರ ಜೊತೆಗೆ ಅರುಣ್ ಗೌಡ ಇರುತ್ತಿದ್ದರು. ಆಗಲೇ ಈ ಜೋಡಿ ಬಗ್ಗೆ ಅನುಮಾನ ಮೂಡಿತ್ತು. ಈಗ ಕುಟುಂಬಸ್ಥರ ಒಪ್ಪಿಗೆ ಪಡೆದು ಈ ಜೋಡಿ ಸಪ್ತಪದಿ ತುಳಿದಿದೆ. ಅಂದಹಾಗೆ ಅರುಣ್ ಗೌಡ ಅವರು ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಖ್ಯಾತ ಸೀರಿಯಲ್
ಅಮೃತವರ್ಷಿಣಿ ಧಾರಾವಾಹಿ ಪ್ರಸಾರ ಆಗಿ ಹನ್ನೆರಡು ವರ್ಷಗಳಾಯ್ತು. ಈ ಸೀರಿಯಲ್‌ನಲ್ಲಿ ಅಮೃತಾ ಆಗಿ ನಟಿಸಿದ್ದ ರಜಿನಿ ಈಗ ‘ನೀ ಇರಲು ಜೊತೆಯಲಿ’ ಧಾರಾವಾಹಿಯಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ‘ನೀ ಇರಲು ಜೊತೆಯಲಿ’ ಧಾರಾವಾಹಿಯಲ್ಲಿ ಹೀರೋ ಅತ್ತಿಗೆ ವಿಲನ್ ಊರ್ಮಿಳಾ ದಿವಾನ್ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಅಂದಹಾಗೆ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಕೆಲ ದಿನಗಳ ಕಾಲ ಅತಿಥಿ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದರು.
ಜಿಮ್ ಟ್ರೈನರ್ ಅರುಣ್-ರಜನಿ ಮ್ಯಾರೇಜ್
ಜಿಮ್ ಟ್ರೈನರ್ ಅರುಣ್ ಹಾಗೂ ರಜನಿ ಮದುವೆ ಆಗಿದ್ದಾರೆ. ಸದ್ದು ಗದ್ದಲ ಇಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ನೇಹಿತರ ಸಮ್ಮುಖದಲ್ಲಿಯೇ ಇವರು ಮದುವೆ ಆಗಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದಲೂ ಈ ಜೋಡಿ ರೀಲ್ಸ್ ಮಾಡ್ತಾನೇ ಇದೆ. ರೀಲ್ಸ್ ವಿಡಿಯೋ ಮೂಲಕವೇ ಹೆಚ್ಚು ಗಮನ ಸೆಳೆದಿರೋದು ಇದೆ. ಆದರೆ, ನಾವು ಲವರ್ಸ್ ಅಲ್ಲ ಸ್ನೇಹಿತರು ಅಂತಲೇ ಹೇಳಿಕೊಂಡಿರೋದು ಇದೆ.
ಬೆಂಗಳೂರಿನಲ್ಲಿ ಮದ್ವೆ
ಬೆಂಗಳೂರಿನಲ್ಲಿಯೇ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಂಪ್ರದಾಯಿವಾಗಿಯೇ ಇವರ ವಿವಾಹ ಆಗಿದೆ. ಅದ್ದೂರಿಯಾಗದೆ ಸಿಂಪಲ್ ಆಗಿಯೇ ಮದುವೆ ಆಗಿದೆ. ಸೋಷಿಯಲ್ ಮೀಡಿಯಾದಲ್ಲೂ ಇವರು ಮದುವೆಯ ಫೋಟೋ ಹಾಗೂ ವಿಡಿಯೋ ಶೇರ್ ಆಗಿವೆ. ಈ ಮೂಲಕ ರಜಿನಿ ಮತ್ತು ಅರುಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಅನ್ನೋದು ತಿಳಿದಿದೆ.
ಜಿಮ್ ಟ್ರೈನರ ಅರುಣ್ ಜೊತೆ ಹಸೆಮಣೆ ಏರಿದ ನಟಿ ರಜನಿ
by

Leave a Comment