HOME

stories

STORIES

google-news

FOLLOW

FOLLOW

JOIN

ಚಳಿಗಾಲದಲ್ಲಿ ಸೀತಾಫಲ ಹಣ್ಣು ಸೇವಿಸೋದ್ರಿಂದ ತ್ವಚೆಯು ಕಾಂತಿಯುತವಾಗಿ ಹೊಳೆಯುತ್ತದೆಯಂತೆ!

Updated: 11-11-2025, 06.53 AM

Follow us:


ನೈಸರ್ಗಿಕವಾಗಿ ಸಿಗುವ ಪ್ರತಿಯೊಂದು ಹಣ್ಣುಗಳು ಕೂಡ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದಕ್ಕೆ ಮುಖ್ಯ ಕಾರಣ, ಹಣ್ಣುಗಳಲ್ಲಿ ಸಿಗುವ ನೈಸರ್ಗಿಕ ಸಿಹಿ ಅಂಶಗಳು, ವಿವಿಧ ಬಗೆಯ ವಿಟಮಿನ್ಸ್ ಗಳು, ಪ್ರಬಲ ಆ್ಯಂಟಿಆಕ್ಸಿಡೆಂಟ್ ಅಂಶಗಳು, ವಿವಿಧ ರೋಗಗಳ ವಿರುದ್ಧ ಹೋರಾಡಿ, ನಮ್ಮನ್ನು ಆರೋಗ್ಯವಾಗಿರಿಸುತ್ತವೆ. ನೈಸರ್ಗಿಕವಾಗಿ ಸಿಗುವ ತಾಜಾ ಹಣ್ಣುಗಳನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಂಡರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದಕ್ಕೆ ಸೀತಾಫಲ ಹಣ್ಣು ಕೂಡ ಹೊರತಲ್ಲ!
ಚಳಿಗಾಲ ಬಂತೆಂದರೆ ಅದರ ಹಿಂದೆಯೇ ಹಲವಾರು ರೋಗ ರುಜಿನಗಳು ಬರುತ್ತವೆ. ಧೋ ಎಂದು ಸುರಿದ ಮಳೆಯಿಂದ ಸುಧಾರಿಸಿಕೊಳ್ಳುವಷ್ಟರೊಳಗೆ ಈ ಚಳಿ ಪ್ರಾರಂಭವಾಗಿ ಸೋಂಕುಗಳ ಕಾಟದ ಜೊತೆ, ಈ ಶೀತ ಕೆಮ್ಮುವಿನ ಭಯವೂ ಆರಂಭವಾಗುತ್ತದೆ. ಇಂತಹ ಸಮಯದಲ್ಲಿ ಆರೋಗ್ಯದ ನಿಗಾ ಇಡುವುದರ ಜೊತೆ ನಾವು ಸೇವಿಸುವ ಆಹಾರ ಪದಾರ್ಥಗಳ ಮೇಲೆಯೂ ಜಾಗರೂಕತೆ ವಹಿಸಬೇಕಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ವಿಟಮಿನ್ ಅಂಶ ಇರುವ ಹಣ್ಣುಗಳನ್ನು ಸೇವಿಸುವುದು ಅತ್ಯವಶ್ಯವಾಗಿದ್ದು, ದೇಹಕ್ಕೆ ಈ ಕಾಲದಲ್ಲಿ ಹೆಚ್ಚುವರಿ ವಿಟಮಿನ್ ಜೊತೆ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ.
ಹಾಗಾಗಿ ಚಳಿಗಾಲದಲ್ಲಿ ಯಥೇಚ್ಛವಾಗಿ ಸಿಗುವ ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಲಿದ್ದು, ಅಂತಹ ಹಣ್ಣುಗಳ ಪೈಕಿ ಸೀತಾಫಲ ಕೂಡ ಒಂದಾಗಿದೆ.. ಹಾಗಿದ್ರೆ ಚಳಿಗಾಲದಲ್ಲಿ ನಮ್ಮ ಮನೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿರುವ ಸೀತಾಫಲ ಸೇವಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಜೀರ್ಣಕ್ರಿಯೆ ಸರಿಯಾಗುತ್ತದೆ
ಸೀತಾಫಲದಲ್ಲಿ ನಾರಿನ ಪ್ರಮಾಣವು ಹೇರಳವಾಗಿದೆ, ಇದರಿಂದಾಗಿ ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಚಳಿಗಾಲದಲ್ಲಿ ಸೀತಾಫಲವನ್ನು ತಪ್ಪದೇ ಸೇವಿಸಿ. ಈ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಸೀತಾಫಲದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇವು ಬಹು ಸೋಂಕುಗಳು ಮತ್ತು ರೋಗಗಳನ್ನು ತಡೆಯುತ್ತವೆ. ಇದಲ್ಲದೆ, ಅದರ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಯಾವುದೇ ಸೋಂಕಿಗೆ ಚಿಕಿತ್ಸೆ ನೀಡುವಾಗ ದೇಹದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ತ್ವಚೆಯ ಆರೋಗ್ಯಕ್ಕೆ ಸಹಕಾರಿ:
ಸೀತಾಫಲದಲ್ಲಿರುವ ಹಲವಾರು ಆ್ಯಂಟಿಆಕ್ಸಿಡೆಂಟ್‌ಗಳು ನಯವಾದ ತ್ವಚೆಯನ್ನು ಪಡೆಯಲು ತುಂಬಾ ಸಹಕಾರಿಯಾಗಿದ್ದು, ಹಾನಿಕಾರಕ ಸ್ವತಂತ್ರ ರಾಡಿಕಲ್ಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಜೊತೆಗೆ ತ್ವಚೆಯ ಕೋಮಲತೆಯನ್ನು ಹೆಚ್ಚಿಸಲಿದ್ದು, ಇದು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಇದು ಚರ್ಮವನ್ನು ಮೊಡವೆಗಳಿಂದ ರಕ್ಷಿಸುತ್ತದೆ.

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ:
ಸೀತಾಫಲ ಲೈಕೋಪೀನ್ ಉತ್ಕರ್ಷಣ ನಿರೋಧಕವಾಗಿದ್ದು ಅದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿದೆ. ಇದು ವಿನಾಶಕಾರಿ ಕೋಶಗಳಿಂದ ಸ್ವತಂತ್ರ ರಾಡಿಕಲ್ಗಳನ್ನು ರಕ್ಷಿಸುತ್ತದೆ. ಆದ್ದರಿಂದ ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಅಡ್ಡಿಪಡಿಸುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ:
ಈ ಸೀತಾಫಲ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿದ್ದು, ನಾರಿನಂಶದಿಂದ ತುಂಬಿದೆ. ಇವೆರಡೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ಕಡಿಮೆಯಾಗುತ್ತದೆ
ತೂಕವನ್ನು ಕಡಿಮೆ ಮಾಡಲು ಬಯಸುವವರು ಸೀತಾಫಲ ಅನ್ನು ಸೇವಿಸುವುದರಿಂದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಸೀತಾಫಲದಲ್ಲಿ ಕ್ಯಾಲೋರಿಗಳ ಪ್ರಮಾಣವು ತುಂಬಾ ಕಡಿಮೆ ಮತ್ತು ಫೈಬರ್ ತುಂಬಾ ಹೆಚ್ಚು. ಮತ್ತೊಂದೆಡೆ, ನೀವು ನಿಮ್ಮ ತೂಕವನ್ನು ಕಡಿಮೆ ಮಾಡಲು ಬಯಸಿದರೆ, ಪ್ರತಿದಿನ ಸೀತಾಫಲವನ್ನು ಸೇವಿಸಿ.

Leave a Comment

About Us

SandalwoodSuddi — ಕನ್ನಡದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ನಮ್ಮ ಧ್ಯೇಯ ಸ್ಪಷ್ಟವಾಗಿದೆ: ಕನ್ನಡ ಓದುಗರಿಗೆ ತಾಜಾ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವುದು. ಸಿನಿಮಾದಿಂದ ರಾಜಕೀಯ, ಕ್ರೀಡೆ, ತಂತ್ರಜ್ಞಾನ, ಶಿಕ್ಷಣ, ಜೀವನಶೈಲಿ ಮತ್ತು ಮನರಂಜನೆಯವರೆಗೆ — ನಾವು ನಿಮ್ಮ ಮೊಬೈಲ್ ಮತ್ತು ವೆಬ್‌ನಲ್ಲಿ ಎಲ್ಲಾ ಕ್ಷೇತ್ರಗಳ ಇತ್ತೀಚಿನ ನವೀಕರಣಗಳನ್ನು ತಲುಪಿಸುತ್ತೇವೆ.