ನಟಿ ಪ್ರಿಯಾಂಕಾ ಉಪೇಂದ್ರ ಪೋನ್ ಹ್ಯಾಕ್ ಮಾಡಿದ್ದ ವಂಚಕನನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿಹಾರ ಮೂಲದ ವಿಕಾಸ್ ಕುಮಾರ್ ಎಂದು ಗುರುತಿಸಲಾಗಿದ್ದು, ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿ, ಅದರಲ್ಲಿದ್ದ ನಂಬರ್‌ಗಳಿಗೆ ಮೆಸೇಜ್ ಮಾಡಿ ದುಡ್ಡು ಕೇಳಿದ್ದ.
ನಟಿ ದೂರಿನ ಬಳಿಕ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯನ್ನು ಬಿಹಾರದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದಾರೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಪ್ರಿಯಾಂಕಾ ಅವರ ಮಗನಿಂದ ಹಾಕಿಸಿಕೊಂಡಿದ್ದ 50 ಸಾವಿರ ರೂ. ಹಣವನ್ನು ಕುಡಿದು ಖಾಲಿ ಮಾಡಿರುವುದಾಗಿ ತಿಳಿಸಿದ್ದಾನೆ.
ನಡೆದಿದ್ದೇನು?:
ಸೆ.15ರಂದು ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಆಗಿತ್ತು. ಈ ವೇಳೆ ಉಪೇಂದ್ರ ಅವರು ವಿಡಿಯೋ ಮಾಡಿ.. ನನ್ನ ಪತ್ನಿ ಪ್ರಿಯಾಂಕಾಗೆ ಒಂದು ನಂಬರ್ ಇಂದ ಎನೋ ಸಂದೇಶ ಬಂದಿತ್ತು. ಪ್ರಿಯಾಂಕ ಅವರು ಒಂದು ವಸ್ತು ಆರ್ಡರ್ ಮಾಡಿದ್ದರು ಅದು ಬರುತ್ತದೆ ನಾವು ಹೇಳಿದಂತೆ ಮಾಡಿ ಎಂದು ಹೇಳಿದ್ದಾರೆ. ಆದರೆ ಆ ನಂಬರ್ ಹ್ಯಾಕರ್ ನಂಬರ್ ಆಗಿತ್ತು. ನಮಗೆ ಇದು ತಿಳಿಯದೆ ಹ್ಯಾಕರ್ ನಂಬರ್‌ಗೆ ಕರೆ ಮಾಡಿದ್ದೇವೆ. ನಮ್ಮಿಬ್ಬರ ನಂಬರ್ ಹ್ಯಾಕ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆಗ ಪ್ರಿಯಾಂಕಾ ಅವರು ಸದಾಶಿವ ಪೊಲೀಸ್ ಠಾಣೆ ಮೆಟ್ಟಿಲೇರಿ ಸೈಬರ್ ಕ್ರೈಮ್ ಗೆ ದೂರು ನೀಡಿದ್ದರು. ಕಾಂಟಾಕ್ಟ್ ಲಿಸ್ಟ್ ನಲ್ಲಿರುವ ಎಲ್ಲರಿಗೂ ಹಣ ನೀಡುವಂತೆ ಮೆಸೇಜ್ ಮಾಡಲಾಗಿದ್ದು, ಎಮರ್ಜೆನ್ಸಿ ಇದೆ, ಹಣ ನೀಡಿ ಎಂದು ಪ್ರಿಯಾಂಕ ಉಪೇಂದ್ರ ನಂಬರ್ ನಿಂದ ಮೆಸೇಜ್ ಹೋಗಿದೆ ಎಂದು ತಿಳಿದು ಬಂದಿತ್ತು. ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Leave a Comment