ಪ್ರತಿ ದಿನ ಒಂದೇ ತರಹದ ಸಾಂಬಾರ್ ತಿಂದು ಬೇಜಾರ್ ಆಗಿದೆಯಾ? ಹಾಗಾದರೆ ಒಮ್ಮೆ ಈ ಎಗ್ ಕರಿ ಟ್ರೈ ಮಾಡಿ ನೋಡಿ. ಒಮ್ಮೆ ತಿಂದರೆ ಮತ್ತೆ ಮತ್ತೆ ತಿಂತಾನೆ ಇರಬೇಕು ಅನ್ಸತ್ತೆ. ಮೊಟ್ಟೆ ಎಂದರೆ ಯಾರಿಗೆ ಎಲ್ಲರಿಗೂ ಇಷ್ಟ. ಆದ್ದರಿಂದ ಮೊಟ್ಟೆಯಲ್ಲಿ ಬೇರೆ ಬೇರೆ ವಿಧದ ಅಡುಗೆ ಮಾಡಬಹುದು. ಹೀಗಾಗಿ ಸಿಂಪಲ್ ಆಗಿ ಬೇಗ ಸಿದ್ಧವಾಗುವ ಎಗ್ ಕರಿ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
1. ಮೊಟ್ಟೆ – 4 (ಬೇಯಿಸಿರಬೇಕು)
2. ಈರುಳ್ಳಿ – 2
3. ಎಣ್ಣೆ – 3 ಚಮಚ
4. ಹಸಿ ಮೆಣಸಿಕಾಯಿ – 2-3
5. ಟೊಮೊಟೋ – 1
6. ಖಾರದ ಪುಡಿ – 1 ಚಮಚ
7. ಕೊತ್ತಂಬರಿ ಪುಡಿ – 1 ಚಮಚ
8. ಅರಿಶಿಣ – ಚಿಟಿಕೆ
9. ಗರಂ ಮಸಾಲಾ – 1 ಚಮಚ
10. ಉಪ್ಪು – ರುಚಿಗೆ ತಕ್ಕಷ್ಟು
11. ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು 2 ಚಮಚ ಎಣ್ಣೆ ಹಾಕಿ ಕಾಯಲು ಬಿಡಿ.
ಎಣ್ಣೆ ಕಾದ ಬಳಿಕ ಅದಕ್ಕೆ ಸಣ್ಣಗೆ ಕತ್ತರಿಸಿದ್ದ ಈರಳ್ಳಿ ಹಾಕಿ ಫ್ರೈ ಮಾಡಿ. ಈಗ ಹಸಿರು ಮೆಣಸಿಕಾಯಿ, ಸಣ್ಣಗೆ ಕತ್ತರಿಸಿದ ಟೊಮೆಟೋ ಹಾಕಿ ಮುಚ್ಚಳ ಮುಚ್ಚಿ 2-3 ನಿಮಿಷ ಬೇಯಿಸಿ.
ನಂತರ ಅದಕ್ಕೆ ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ, ಗರಂ ಮಸಾಲಾ ಹಾಕಿ 3 ನಿಮಿಷ ಮಿಕ್ಸ್ ಮಾಡಿ.
ಒಂದು ಸಣ್ಣ ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ 5 ನಿಮಿಷ ಕುದಿಸಿರಿ.
ಈಗ ಅರ್ಧ ಭಾಗ ಕಟ್ ಮಾಡಿ ಬೇಯಿಸಿರುವ ಮೊಟ್ಟೆ ಹಾಕಿ, ಬಳಿಕ ಅಲ್ಲೇ ಗ್ರೇವಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 2-3 ನಿಮಿಷ ಬೇಯಿಸಿರಿ.
ಈಗ ಮುಚ್ಚಳ ಓಪನ್ ಮಾಡಿ ಅದರ ಮೇಲೆ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಎಗ್ ಕರಿ ಸಿದ್ಧ.
ಇದನ್ನು ಚಪಾತಿ ಅಥವಾ ರೋಟಿ ಜೊತೆ ಸವಿಯಬಹುದು ಅಷ್ಟೇ ಅಲ್ಲದೇ ರೈಸಿಗೂ ಮಿಕ್ಸ್ ಮಾಡಿಕೊಂಡು ತಿನ್ನಬಹುದು.

Leave a Comment