HOME

stories

STORIES

google-news

FOLLOW

FOLLOW

JOIN

ನಿಮ್ಮ ಹಲ್ಲು ಮತ್ತು ಒಸಡುಗಳು ಆರೋಗ್ಯವಾಗಿರಬೇಕೆ ಹಾಗಾದರೆ ಈ 8 ಮನೆಮದ್ದುಗಳನ್ನು ಬಳಸಿ

Updated: 15-11-2025, 04.12 PM

Follow us:

ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮೌಖಿಕ ಆರೋಗ್ಯ ಅಂದರೆ ಬಾಯಿಯ ಆರೋಗ್ಯವೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಅದರಲ್ಲೂ ಬಾಯಿಯೊಳಗಿನ ಹಲ್ಲುಗಳು ಹಾಗೂ ವಸಡುಗಳ ಆರೋಗ್ಯದ ಕಡೆಗೆ ಅಷ್ಟೇ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ.
ಕೆಲವೊಮ್ಮೆ ಅಪೌಷ್ಟಿಕರ ಆಹಾರ ಸೇವನೆಯ ಕಾರಣದಿಂದಾಗಿ ದೇಹದಲ್ಲಿನ ವಿಟಮಿನ್ಸ್, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮುಂತಾದ ಪ್ರಮುಖ ಖನಿಜಾಂಶ ಹಾಗೂ ಪೌಷ್ಟಿಕಾಂಶಗಳ ಕೊರತೆ ಕಾಣಿಸಿಕೊಳ್ಳುತ್ತದೆ, ಇದರ ಜೊತೆೆ ಸರಿಯಾಗಿ ಬಾಯಿಯ ಸ್ವಚ್ಛತೆ ಮಾಡದಿರುವುದು, ಅತಿಯಾದ ಕಾಫಿ-ಟೀ ಕುಡಿಯುವ ಅಭ್ಯಾಸ, ಅತಿಯಾದ ತಂಬಾಕು ಸೇವನೆ, ಹೀಗೆ ಹಲವಾರು ಕಾರಣದಿಂದಾಗಿ ಬಾಯಿ ಆರೋಗ್ಯವು ಹಾಳಾಗುತ್ತವೆ.
ಹಲ್ಲು ಮತ್ತು ಒಸಡುಗಳನ್ನು ಆರೋಗ್ಯವಾಗಿಡಲು ಮನೆಮದ್ದುಗಳು
ಇತ್ತೀಚಿನ ದಿನಗಳಲ್ಲಿ, ಹಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ವಿವಿಧ ಟೂತ್‌ಪೇಸ್ಟ್ಗಳನ್ನು ಬಳಸಲಾಗುತ್ತದೆ. ಆದಾಗ್ಯೂ, ಹಿಂದಿನ ಕಾಲದಲ್ಲಿ, ಹಲ್ಲಿನ ಸಮಸ್ಯೆಗಳಿಗೆ ಅನೇಕ ಮನೆಮದ್ದುಗಳನ್ನು ಶಿಫಾರಸು ಮಾಡಲಾಗುತ್ತಿತ್ತು, ಇವುಗಳನ್ನು ಇಂದಿಗೂ ಅಷ್ಟೇ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತಿದೆ. ನೈಸರ್ಗಿಕವಾಗಿ ಸಿಗುವ ಇಂತಹ ಮನೆಮದ್ದುಗಳು, ಹಲ್ಲಿನ ಕುಳಿಗಳು, ಹಲ್ಲುನೋವು ಮತ್ತು ದುರ್ಬಲ ಒಸಡುಗಳಂತಹ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಾ ಬರುತ್ತಿವೆ. ಅದಕ್ಕೂ ಮುನ್ನ ನೆನಪಿಡಬೇಕಾದ ಸಂಗತಿ ಏನೆಂದ್ರೆ ದೀರ್ಘಕಾಲದಿಂದ ವಸಡಿನ ಹಾಗೂ ಹಲ್ಲಿನ ಸಮಸ್ಯೆಗಳಿದ್ದರೆ ಆರಂಭದಲ್ಲಿಯೇ ದಂತ ವೈದ್ಯರ ಹತ್ತಿರ ತಪಾಸಣೆ ನಡೆಸಿ ಗುಣಪಡಿಸಿಕೊಳ್ಳಬೇಕು. ಇಲ್ಲವಾದರೆ ಬಾಯಿಯಲ್ಲಿ ಸೋಂಕಿನ ಸಮಸ್ಯೆ ಕಾಣಿಸಿಕೊಂಡು ಹಲ್ಲುಗಳ ತಳದ ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ.

ಲವಂಗದ ಬಳಕೆ:
ಲವಂಗವನ್ನು ಹಲ್ಲುನೋವು ಮತ್ತು ಹಲ್ಲು ಕುಳಿಗಳಿಗೆ ಬಹಳ ಹಿಂದಿನಿAದಲೂ ಬಳಸಲಾಗುವ ಮನೆಮದ್ದು ಎಂದು ಪರಿಗಣಿಸಲಾಗುತ್ತದೆ. ಲವಂಗದ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪ್ರತಿದಿನ ಮೂರರಿಂದ ನಾಲ್ಕು ಲವಂಗಗಳನ್ನು ಒಂದು ಲೋಟ ನೀರಿನಲ್ಲಿ ಸರಿಯಾಗಿ ಕುದಿಸಿಕೊಂಡು ಡಿಕಾಕ್ಷನ್ ತಯಾರಿಸಿಕೊಂಡು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಈ ಲವಂಗದಲ್ಲಿ ಕಂಡುಬರುವ ಕ್ಯಾಲ್ಸಿಯಂ, ಮೆಗ್ನೀಷಿಯಂ ಅಂಶವು ನಮ್ಮ ಹಲ್ಲುಗಳನ್ನು ಹಾಗೂ ವಸಡುಗಳನ್ನು ಆರೋಗ್ಯದಿಂದಿರುವ ಹಾಗೆ ಮಾಡುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಹಲ್ಲುಗಳ ಮೇಲಿನ ಎನಾಮಲ್ ಕೂಡ ಹಾಳಾಗದಂತೆ ನೋಡಿಕೊಳ್ಳುತ್ತದೆ. ಇಲ್ಲಾಂದ್ರೆ ಲವಂಗದ ಎಣ್ಣೆಗೆ ಒಂದು ಹತ್ತಿಯ ಉಂಡೆಯನ್ನು ಅದ್ದಿ ನೋವಿರುವ ವಸಡು ಅಥವಾ ಹಲ್ಲುಗಳ ಜಾಗಕ್ಕೆ ನಿಧಾನವಾಗಿ ಸವರಿ ಅಥವಾ ಸ್ವಲ್ಪ ಹೊತ್ತು ಹತ್ತಿ ಉಂಡೆಯನ್ನು ಅದೇ ಜಾಗದಲ್ಲಿ ಇರುವ ಹಾಗೆ ನೋಡಿಕೊಳ್ಳಿ.

ಅರಿಶಿನ ಮತ್ತು ಸಾಸಿವೆ ಎಣ್ಣೆ :
ಅರಿಶಿನವು ಉರಿಯೂತ ನಿವಾರಕ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದೆ, ಆದರೆ ಸಾಸಿವೆ ಎಣ್ಣೆ ಹಲ್ಲುಗಳನ್ನು ಬಲಪಡಿಸುತ್ತದೆ. ಪೇಸ್ಟ್ ಮಾಡಲು, ಅರ್ಧ ಟೀಚಮಚ ಅರಿಶಿನವನ್ನು ಕೆಲವು ಹನಿ ಸಾಸಿವೆ ಎಣ್ಣೆ ಮತ್ತು ಒಂದು ಚಿಟಿಕೆ ಉಪ್ಪಿನೊಂದಿಗೆ ಬೆರೆಸಿ. ಈ ಪೇಸ್ಟ್ ಅನ್ನು ನಿಮ್ಮ ಹಲ್ಲು ಮತ್ತು ಒಸಡುಗಳ ಮೇಲೆ ನಿಧಾನವಾಗಿ ಮಸಾಜ್ ಮಾಡಿ. 5 ರಿಂದ 10 ನಿಮಿಷಗಳ ನಂತರ ಚೆನ್ನಾಗಿ ತೊಳೆಯಿರಿ. ಈ ಪರಿಹಾರವು ಹಲ್ಲುಕುಳಿಗಳು, ಒಸಡು ಉರಿಯೂತ ಮತ್ತು ನೋವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.ಉಪ್ಪು ನೀರು:
ಉಪ್ಪು ನೀರು ನೈಸರ್ಗಿಕ ಸೋಂಕುನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ ಮತ್ತು ನೋವಿನಿಂದ ಪರಿಹಾರ ನೀಡುತ್ತದೆ. ಆದ್ದರಿಂದ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ಟೀ ಚಮಚ ಉಪ್ಪನ್ನು ಸೇರಿಸಿ ಮತ್ತು ದಿನಕ್ಕೆ ಎರಡರಿಂದ ಮೂರು ಬಾರಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ಕುಳಿಗಳಿಂದ ಪರಿಹಾರ ದೊರೆಯುವುದಲ್ಲದೆ, ಒಸಡುಗಳ ಉರಿಯೂತವೂ ಕಡಿಮೆಯಾಗುತ್ತದೆ.
ಅರಿಶಿನ ಮತ್ತು ಉಪ್ಪಿನ ಪೇಸ್ಟ್:
ಅರಿಶಿನ ಮತ್ತು ಉಪ್ಪಿನ ಪೇಸ್ಟ್ ಒಸಡುಗಳ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ, ಉದಾಹರಣೆಗೆ ಊದಿಕೊಂಡ ಮತ್ತು ಒಸಡುಗಳಲ್ಲಿ ರಕ್ತಸ್ರಾವವಾಗುವುದು. ನಿಮ್ಮ ಒಸಡುಗಳು ಉಬ್ಬಿದ್ದರೆ, ನೀವು ಈ ಪೇಸ್ಟ್ ಅನ್ನು ಹಚ್ಚಬಹುದು. ಇದು ಬೇಗನೆ ಪರಿಹಾರವನ್ನು ನೀಡುತ್ತದೆ.

ಉಪ್ಪು ನೀರು:
ಉಪ್ಪು ನೀರು ನೈಸರ್ಗಿಕ ಸೋಂಕುನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ ಮತ್ತು ನೋವಿನಿಂದ ಪರಿಹಾರ ನೀಡುತ್ತದೆ. ಆದ್ದರಿಂದ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ಟೀ ಚಮಚ ಉಪ್ಪನ್ನು ಸೇರಿಸಿ ಮತ್ತು ದಿನಕ್ಕೆ ಎರಡರಿಂದ ಮೂರು ಬಾರಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ಕುಳಿಗಳಿಂದ ಪರಿಹಾರ ದೊರೆಯುವುದಲ್ಲದೆ, ಒಸಡುಗಳ ಉರಿಯೂತವೂ ಕಡಿಮೆಯಾಗುತ್ತದೆ.

ಅರಿಶಿನ ಮತ್ತು ಉಪ್ಪಿನ ಪೇಸ್ಟ್:
ಅರಿಶಿನ ಮತ್ತು ಉಪ್ಪಿನ ಪೇಸ್ಟ್ ಒಸಡುಗಳ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ, ಉದಾಹರಣೆಗೆ ಊದಿಕೊಂಡ ಮತ್ತು ಒಸಡುಗಳಲ್ಲಿ ರಕ್ತಸ್ರಾವವಾಗುವುದು. ನಿಮ್ಮ ಒಸಡುಗಳು ಉಬ್ಬಿದ್ದರೆ, ನೀವು ಈ ಪೇಸ್ಟ್ ಅನ್ನು ಹಚ್ಚಬಹುದು. ಇದು ಬೇಗನೆ ಪರಿಹಾರವನ್ನು ನೀಡುತ್ತದೆ.

Leave a Comment

About Us

SandalwoodSuddi — ಕನ್ನಡದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ನಮ್ಮ ಧ್ಯೇಯ ಸ್ಪಷ್ಟವಾಗಿದೆ: ಕನ್ನಡ ಓದುಗರಿಗೆ ತಾಜಾ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವುದು. ಸಿನಿಮಾದಿಂದ ರಾಜಕೀಯ, ಕ್ರೀಡೆ, ತಂತ್ರಜ್ಞಾನ, ಶಿಕ್ಷಣ, ಜೀವನಶೈಲಿ ಮತ್ತು ಮನರಂಜನೆಯವರೆಗೆ — ನಾವು ನಿಮ್ಮ ಮೊಬೈಲ್ ಮತ್ತು ವೆಬ್‌ನಲ್ಲಿ ಎಲ್ಲಾ ಕ್ಷೇತ್ರಗಳ ಇತ್ತೀಚಿನ ನವೀಕರಣಗಳನ್ನು ತಲುಪಿಸುತ್ತೇವೆ.