ಫ್ಯಾನ್ಸ್ಗೆ ಅಂತೂ ಗುಡ್ ನ್ಯೂಸ್ ಕೊಟ್ಟಿರುವ ಚಾಲೆಂಜಿAಗ್ ಸ್ಟಾರ್ ದರ್ಶನ್. ಡೆವಿಲ್ ಚಿತ್ರದ ಅಲೊಹೊಮೊರಾ ಹಾಡು ಔಟ್ ಆಗಿದೆ. ಈ ಹಾಡಿನಲ್ಲಿ ಈ ಹಾಡಿನಲ್ಲಿ ದರ್ಶನ್ ಮಾಸ್ ಅವತಾರ ಕಾಣಿಸಿದೆ. ಕಿಂಗ್, ಡಾನ್, ರಿಯಲ್ ಡೆವಿಲ್ ಲುಕ್ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದು, ಬಾಸ್ ಅವತಾರ ತೋರಿಸಿದ್ದಾರೆ. ಸ್ಮೋಕ್ ಮಾಡುತ್ತಾ, ಸ್ಲೋ ಸ್ಟೆಪ್ಸ್ ಹಾಕುತ್ತಾ ಕಾಣಿಸಿಕೊಂಡಿದ್ದಾರೆ. ಈ ಒಂದು ಹಾಡಿನಲ್ಲಿ ದರ್ಶನ್ ಸಿಕ್ಕಾಪಟ್ಟೆ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಈ ಹಾಡು ನನ್ನ ಪರ್ಸನಲ್ ಫೇವರಿಟ್ ಅಂತ ವಿಜಯಲಕ್ಷ್ಮಿ ಹೇಳಿದ ಹಾಗೆ ಇಲ್ಲಿ ದರ್ಶನ್ ಡ್ಯಾಶಿಂಗ್ ಆಗಿ ಕಾಣಿಸಿದ್ದಾರೆ. ವಿಶೇಷ ಅಂದರೆ ಅನಿರುದ್ಧ್ ಶಾಸ್ತ್ರಿ ಈ ಗೀತೆಯನ್ನ ಬರೆದು ಅವರೇ ಇದನ್ನ ಹಾಡಿದ್ದಾರೆ.
ದರ್ಶನ್ ಖದರ್ಗೆ ಫ್ಯಾನ್ಸ್ ಅಂತೂ ಫಿದಾ ಆಗಿದ್ದಾರೆ. ಈ ಹಾಡಿನಲ್ಲಿ ಹಲವು ಡ್ಯಾನ್ಸರ್ಸ್ ಜೊತೆಗೆ ದರ್ಶನ್ ಡ್ಯಾನ್ಸ್ ಮಾಡಿದ್ದಾರೆ. ಡೆವಿಲ್ ಚಿತ್ರದ ಎರಡು ಹಾಡು ರಿಲೀಸ್ ಆಗಿವೆ. ಇದ್ರೇ ನೆಮ್ದಿಯಾಗ್ ಇರ್ಬೇಕ್ ಅನ್ನೋ ಹಾಡು ಮೊದಲು ರಿಲೀಸ್ ಆಗಿದೆ. ಒಂದೆ ಒಂದು ಸಲ ಅನ್ನೋದು ಎರಡನೇ ಸಾಂಗ್ ಆಗಿದೆ.
ವಿಜಯಲಕ್ಷ್ಮೀ ಪೋಸ್ಟ್
ಸಾಂಗ್ ಔಟ್ ಆಗಿರೋ ಬಗ್ಗೆ ವಿಜಯಲಕ್ಷ್ಮೀ ದರ್ಶನ್ ಪೋಸ್ಟರ್ ಜೊತೆ ಹಂಚಿಕೊಂಡಿದ್ದಾರೆ ಬಹು ದಿನಗಳಿಂದ ಫ್ಯಾನ್ಸ್ ಬಹಳ ಕಾತರದಿಂದ ಕಾಯುತ್ತಿದ್ದ ಡೆವಿಲ್ ಸಿನಿಮಾದ ಇದ್ರೆ ನೆಮ್ದಿಯಾಗಿರ್ಬೇಕು ಹಾಡು ರಿಲೀಸ್ ಆದ ಕೇವಲ ಅರ್ಧಗಂಟೆಯಲ್ಲಿ 5ಲಕ್ಷ ವ್ಯೂವ್ಸ್ ಪಡೆದುಕೊಂಡಿತ್ತು, ಇನ್ನು ದಿ ಡೆವಿಲ್ ನ ಹೊಸ ಹಾಡು ಭಾರೀ ವೀಕ್ಷಣೆ ಕಾಣೋದು ಅಂತೂ ಖಚಿತ ಎನ್ನಲಾಗುತ್ತಿದೆ.
ಡೆವಿಲ್ ಸಿನಿಮಾ ತೆರೆಗೆ ಯಾವಾಗ?
ಡಿಸೆಂಬರ್ 12ಕ್ಕೆ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ತೆರೆಗೆ ಬರಲಿದೆ. ನಟ ದರ್ಶನ್ ಸದ್ಯ ಜೈಲಿನಲ್ಲಿದ್ದರೂ ಸಿನಿಮಾ ರಿಲೀಸ್ ಆಗುವುದು ಪಕ್ಕಾ ಆಗಿದೆ. ಸಿನಿಮಾಕ್ಕೆ ಸಂಬಂಧಿಸಿದ ಕೆಲಸಗಳನ್ನು ದರ್ಶನ್ ಮುಗಿಸಿಕೊಟ್ಟಿದ್ದಾರೆ. ಸಿನಿಮಾದ ಮೊದಲ ಹಂತದ ಚಿತ್ರೀಕರಣದ ವಿಡಿಯೋವನ್ನು ಕೂಡ ಚಿತ್ರ ತಂಡ ಬಿಡುಗಡೆ ಮಾಡಿದೆ.
ಡೆವಿಲ್ ಚಿತ್ರಕ್ಕೆ ಸಂಗೀತ
ದಿ ಡೆವಿಲ್ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಇದು ದರ್ಶನ್ ಅವರೊಂದಿಗಿನ ಅವರ ಮೊದಲ ಸಹಯೋಗವನ್ನು ಗುರುತಿಸುತ್ತದೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವರ ಪ್ರಭಾವಶಾಲಿ ಸಂಗೀತಗಳಿಗೆ ಹೆಸರುವಾಸಿಯಾದ ಅಜನೀಶ್, ಇದೀಗ ಡೆವಿಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಫ್ಯಾನ್ಸ್ ಮೆಚ್ಚುಗೆ
ಚಿತ್ರದ ಆಡಿಯೋ ಹಕ್ಕುಗಳನ್ನು ಯೋಜನೆಯ ಪ್ರಾರಂಭದ ಸಮಯದಲ್ಲಿಯೇ ಸರಿಗಮ ಮ್ಯೂಸಿಕ್ ಲೇಬಲ್ ಪಡೆದುಕೊಂಡಿದೆ. ದರ್ಶನ್ ಜೊತೆ ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಡೆವಿಲ್ ಸಿನಿಮಾದಲ್ಲಿ ನಟಿ ರಚನಾ ರೈ ಜೊತೆ ಗೆ ಮೈ ಚಳಿ ಬಿಟ್ಟು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರೊ ದಾಸನ ಒಂದೇ ಒಂದು ಸಲ ಹಾಡಿನ ಬಗ್ಗೆಯೂ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಪ್ರಕಾಶ್ ನಿರ್ದೇಶನದ ‘ಡೆವಿಲ್’ ಸಿನಿಮಾ ಡಿಸೆಂಬರ್ 12ರಂದು ತೆರೆಗೆ ಬರಲಿದೆ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ಹಿಂದೆ ‘ತಾರಕ್’ ಚಿತ್ರದಲ್ಲಿ ದರ್ಶನ್- ಪ್ರಕಾಶ್ ಒಟ್ಟಿಗೆ ಕೆಲಸ ಮಾಡಿ ಗೆದ್ದಿದ್ದರು.
ಈ ವರ್ಷ ದಾಖಲೆಗಳಿಗೆ ಸಾಕ್ಷಿಯಾದ ರಿಷಬ್ ಶೆಟ್ಟರ ಸಿನಿಮಾ ಕಾಂತಾರ, ಪ್ರಪಂಚದಾದ್ಯಂತ 900 ಕೋಟಿ ಸನಿಹದಲ್ಲಿದ್ದು ಕನ್ನಡದಲ್ಲೇ 250 ಕೋಟಿ ಗೆದ್ದು ದಾಖಲೆ ಬರೆದಿದೆ. ಈಗ ಈ ಎಲ್ಲ ಸಿನಿಮಾಗಳು ಡಿಸೆಂಬರ್ ತಿಂಗಳ ಸಿನಿಮಾಗಳಿಗೆ ಸ್ಪೂರ್ತಿಯಾಗಿದ್ದು ಸ್ಟಾರ್ ನಟರ ಸಿನಿಮಾಗಳ ಕಲೆಕ್ಷನ್ ಮೇಲೆ ಸಿನಿ ಪಂಡಿತರ ಕಣ್ಣು ಅದರಲ್ಲೂ ಡೆವಿಲ್ ಸಿನಿಮಾ ಕಾಟೇರನ ದಾಖಲೆಯನ್ನ ಮುರಿಯುತ್ತಾ ಅನ್ನೋ ಲೆಕ್ಕಾಚಾರವು ಶುರುವಾಗಿದೆ.

Leave a Comment