ರೆಸ್ಟೋರೆಂಟ್ ಸ್ಟೈಲ್ ಸ್ಪೈಸಿ ಎಗ್ ಬಿರಿಯಾನಿ! ಮನೆಯಲ್ಲೇ ಸುಲಭವಾಗಿ ಮಾಡಬಹುದು. ಮನೆಮಂದಿಯಲ್ಲಾ ಇಷ್ಟಪಟ್ಟು ತಿನ್ನುವುದು ಗ್ಯಾರಂಟಿ. ಒಮ್ಮೆ ತಿಂದ್ರೆ ಪದೇ ಪದೇ ಕೇಳ್ತಾರೆ. ಹೌದು, ಸ್ಪೈಸಿ ಮಸಾಲಾ ಎಗ್ ಬಿರಿಯಾನಿ ರುಚಿಕರವಾದ ಮತ್ತು ಸುಲಭವಾಗಿ ತಯಾರಿಸಬಹುದಾದ ಖಾದ್ಯವಾಗಿದೆ. ಚಿಕನ್ (ಕೋಳಿ) ಅಥವಾ ಮಟನ್ ಬಿರಿಯಾನಿಗೆ ಇದು ಉತ್ತಮ ಪರ್ಯಾಯ ಎಂದು ಹೇಳಬಹುದು. ಇದನ್ನು ವಿಭಿನ್ನ ಶೈಲಿಗಳಲ್ಲಿ ತಯಾರಿಸಬಹುದು. ಕೆಲವು ಪ್ರದೇಶಗಳಲ್ಲಿ ತುಪ್ಪದಿಂದ ತಯಾರಿಸಿದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಎಣ್ಣೆಯನ್ನು ಬಳಸಲಾಗುತ್ತದೆ. ಈ ಖಾದ್ಯವು ಭಾರತದಾದ್ಯಂತ ವಿವಿಧ ಪ್ರಾದೇಶಿಕ ಅಡುಗೆಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಮೊಟ್ಟೆಯಲ್ಲಿರುವ ಪ್ರೋಟೀನ್ ಮತ್ತು ಬಿರಿಯಾನಿಯ ಮಸಾಲೆಗಳು ಇದನ್ನು ಪೌಷ್ಟಿಕಾಂಶದಿಂದ ಸಮೃದ್ಧವಾದ ಸಂಪೂರ್ಣ ಊಟವನ್ನಾಗಿ ಮಾಡುತ್ತದೆ. ರುಚಿ ಮತ್ತು ಆರೋಗ್ಯದ ಸಮತೋಲನವನ್ನು ಕಾಪಾಡುವ ಈ ಮಸಾಲಾ ಎಗ್ ಬಿರಿಯಾನಿಯನ್ನು ತಯಾರಿಸುವ ವಿಧಾನ ಇಲ್ಲಿದೆ.
ಎಗ್ ಬಿರಿಯಾನಿ ಮಾಡಲು ಬೇಕಾಗುವ ಪದಾರ್ಥಗಳು
• ಬಾಸ್ಮತಿ ಅಕ್ಕಿ
• ಕೋಳಿ ಮೊಟ್ಟೆಗಳು
• ಎಣ್ಣೆ
• ತುಪ್ಪ
• ಜೀರಿಗೆ ಪುಡಿ
• ಮೆಣಸಿನಕಾಯಿ
• ಅರಿಶಿನ
• ರುಚಿಗೆ ತಕ್ಕಷ್ಟು ಉಪ್ಪು
• ಈರುಳ್ಳಿ
• ಶುಂಠಿ-ಬೆಳ್ಳುಳ್ಳಿ ಪೇಸ್ಟ್
• ಕರಿಬೇವು
• ಏಲಕ್ಕಿ
• ಲವಂಗ
• ದಾಲ್ಚಿನ್ನಿ
• ಬಿರಿಯಾನಿ ಎಲೆಗಳು
• ಕೊತ್ತಂಬರಿ ಪುಡಿ
• ಗರಂ ಮಸಾಲಾ
• ಜೀರಿಗೆ
• ಮೊಸರು
• ಪುದೀನ ಎಲೆಗಳು
• ಕೊತ್ತಂಬರಿ ಸೊಪ್ಪು
• ನಿಂಬೆ ರಸ
ಎಗ್ ಬಿರಿಯಾನಿ ತಯಾರಿಸುವ ವಿಧಾನ ಮೊದಲಿಗೆ,
ಒಂದೂವರೆ ಕಪ್ ಬಾಸ್ಮತಿ ಅಕ್ಕಿಯನ್ನು ಒಂದು ಬಟ್ಟಲಿಗೆ ಹಾಕಿ, ಚೆನ್ನಾಗಿ ತೊಳೆದು, ನೀರು ಸೇರಿಸಿ ಕನಿಷ್ಠ ಒಂದು ಗಂಟೆ ನೆನೆಯಲು ಬಿಡಿ. ನಂತರ, ಒಲೆಯ ಮೇಲೆ ಕುಕ್ಕರ್ ಇಟ್ಟು, ಅದರಲ್ಲಿ 6 ಚಮಚ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಕಾದ ನಂತರ, 1 ಕಪ್ ಈರುಳ್ಳಿಯನ್ನು ಸೇರಿಸಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿಯಿರಿ ಅನಂತರ. ಇದನ್ನು ತೆಗೆದು ಪಕ್ಕಕ್ಕಿಡಿ. ಈ ಹುರಿದ ಈರುಳ್ಳಿಯನ್ನು ಬಿರಿಯಾನಿ ತಯಾರಾದ ನಂತರ ಅಲಂಕರಿಸಲು ಬಳಸಲಾಗುತ್ತದೆ. ಅದೇ ಕುಕ್ಕರ್‌ನಲ್ಲಿ ಉಳಿದ ಎಣ್ಣೆಗೆ, 4 ಬೇಯಿಸಿದ ಮೊಟ್ಟೆಗಳನ್ನು ಹಾಕಿ. ಒಂದು ಚಿಟಿಕೆ ಮೆಣಸಿನ ಪುಡಿ ಮತ್ತು ಒಂದು ಚಿಟಿಕೆ ಅರಿಶಿನ ಸೇರಿಸಿ, ಮೊಟ್ಟೆಗಳು ಎಲ್ಲಾ ಕಡೆ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ನಂತರ ಇವುಗಳನ್ನು ಒಂದು ತಟ್ಟೆಗೆ ತೆಗೆದು ಪಕ್ಕಕ್ಕಿಡಿ. ಇದೇ ಎಣ್ಣೆಗೆ 1 ಬಿರಿಯಾನಿ ಎಲೆ, 2 ಪಲಾವ್ ಎಲೆ, 2.5 ಇಂಚಿನ ದಾಲ್ಚಿನ್ನಿ ಕಡ್ಡಿ, 7 ಲವಂಗ, 5 ಏಲಕ್ಕಿ, ಅರ್ಧ ಚಮಚ ಜೀರಿಗೆ ಸೇರಿಸಿ ಚೆನ್ನಾಗಿ ಬಿಸಿ ಮಾಡಿ.
ನಂತರ, ಉಳಿದ ಅರ್ಧ ಈರುಳ್ಳಿಯನ್ನು ಸೇರಿಸಿ ಚಿನ್ನದ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಇದಕ್ಕೆ ಎರಡು ಕರಿಬೇವು ಎಲೆಗಳು ಮತ್ತು ಒಂದೂವರೆ ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಬಾಡಿಸಿ. ಅದರ ನಂತರ, 2 ಹಸಿ ಮೆಣಸಿನಕಾಯಿ ಮತ್ತು 2 ಕತ್ತರಿಸಿದ ಟೊಮೆಟೊಗಳನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ಟೊಮೆಟೊಗಳು ಮೃದುವಾದ ನಂತರ 1 ಚಮಚ ಮೆಣಸಿನ ಪುಡಿ, 1 ಚಮಚ ಹುರಿದ ಕೊತ್ತಂಬರಿ ಪುಡಿ, ಸ್ವಲ್ಪ ಅರಿಶಿನ, 1 ಚಮಚ ಹುರಿದ ಜೀರಿಗೆ ಪುಡಿ, 1 ಚಮಚ ಗರಂ ಮಸಾಲಾ ಮತ್ತುರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಹುರಿಯಿರಿ. ಮಸಾಲೆಗಳು ಸುಡದಂತೆ ತಡೆಯಲು ಈ ಹಂತದಲ್ಲಿ 2 ಚಮಚ ನೀರು ಸೇರಿಸಿ. ಮಸಾಲೆಗಳು ಹುರಿದು ಎಣ್ಣೆ ಮೇಲಕ್ಕೆ ಬಂದಾಗ, 1 ಕಪ್ ಸೋಸಿದ ಮೊಸರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡ. ನಂತರ ಅಕ್ಕಿಯನ್ನು ಹಾಕಿ ಕುಕ್ಕರ್ ವಿಷಲ್ ಹಾಕಿಸಿ.ಇಷ್ಟು ಮಾಡಿದರೆ ರೆಸ್ಟೋರೆಂಟ್ ಶೈಲಿಯ ಎಗ್ ಬಿರಿಯಾನಿ ಮನೆಯಲ್ಲೇ ಸುಲಭವಾಗಿ ತಯಾರಾಗುತ್ತದೆ.

Leave a Comment