ಅಗತ್ಯಕ್ಕಿಂತ ಕಡಿಮೆ ಗಂಟೆಗಳ ನಿದ್ರೆ ಮಾಡಿದರೆ ದೇಹದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಸಮಸ್ಯೆಗೆ ಕೆಲವೊಮ್ಮೆ ನಮ್ಮ ಆಹಾರ ಪದ್ಧತಿಯೇ ಕಾರಣವಾಗಿರುತ್ತದೆ. ಆದ್ದರಿಂದ ಉತ್ತಮ ಹಾಗೂ ಗುಣಮಟ್ಟದ ನಿದ್ರೆ ಪಡೆಯಲು ಮಲಗುವ ಮುನ್ನ ಕೆಲವು ಆಹಾರಗಳನ್ನು ತ್ಯಜಿಸುವುದು ಮುಖ್ಯವಾಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಹಾಗಾದರೆ ಆ ಆಹಾರಗಳು ಯಾವುವು? ಯಾಕೆ ಅವನ್ನು ರಾತ್ರಿ ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಪ್ರತಿದಿನ ಪೌಷ್ಟಿಕ ಆಹಾರ ಸೇವಿಸುವುದಷ್ಟೇ ಅಲ್ಲ, ಸಮರ್ಪಕ ನಿದ್ರೆಯೂ ಉತ್ತಮ ಆರೋಗ್ಯಕ್ಕೆ ಅತಿ ಅಗತ್ಯ. ಆದರೆ ಇಂದಿನ ಜೀವನಶೈಲಿಯಲ್ಲಿ ಅನೇಕರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ನಾನಾ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದು, ನಿದ್ರೆ ಕಡಿಮೆಯಿಂದ ಒತ್ತಡಕ್ಕೆ ಒಳಗಾಗಿ ಡಿಪ್ರೆಶನ್ ಗೂ ತುತ್ತಾಗಬೇಕಾಗುತ್ತದೆ.
ಹೌದು ಅಗತ್ಯಕ್ಕಿಂತ ಕಡಿಮೆ ಗಂಟೆಗಳ ನಿದ್ರೆ ಮಾಡಿದರೆ ದೇಹದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಸಮಸ್ಯೆಗೆ ಕೆಲವೊಮ್ಮೆ ನಮ್ಮ ಆಹಾರ ಪದ್ಧತಿಯೇ ಕಾರಣವಾಗಿರುತ್ತದೆ. ಆದ್ದರಿಂದ ಉತ್ತಮ ಹಾಗೂ ಗುಣಮಟ್ಟದ ನಿದ್ರೆ ಪಡೆಯಲು ಮಲಗುವ ಮುನ್ನ ಕೆಲವು ಆಹಾರಗಳನ್ನು ತ್ಯಜಿಸುವುದು ಮುಖ್ಯವಾಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಹಾಗಾದರೆ ಆ ಆಹಾರಗಳು ಯಾವುವು? ಯಾಕೆ ಅವನ್ನು ರಾತ್ರಿ ಸೇವಿಸಬಾರದು..? ಎಂಬ ಆರೋಗ್ಯ ಸಲಹೆಗಳನ್ನು ತಿಳಿದುಕೊಳ್ಳೋಣ ಬನ್ನಿ.
ಮಾಂಸಾಹಾರ:
ಮಾಂಸಾಹಾರದಲ್ಲಿ ಕೊಬ್ಬು ಹಾಗೂ ಪ್ರೋಟೀನ್‌ಗಳು ಹೆಚ್ಚಾಗಿ ಇರುವುದರಿಂದ ಅವು ಜೀರ್ಣವಾಗಲು ಹೆಚ್ಚಿನ ಸಮಯ ಬೇಕಾಗುತ್ತದೆ. ಈ ಕಾರಣದಿಂದ ರಾತ್ರಿ ವೇಳೆಯಲ್ಲಿ ಮಾಂಸಾಹಾರ ಸೇವಿಸಿದರೆ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ ಮತ್ತು ನಿದ್ರೆಗೆ ಅಡ್ಡಿಯಾಗಬಹುದು. ಎಷ್ಟು ಇಷ್ಟವಾದರೂ ಮಲಗುವ ಮುನ್ನ ಇಂತಹ ಆಹಾರಗಳಿಂದ ದೂರವಿರುವುದು ಉತ್ತಮ.
ಖಾರ ಅಥವಾ ಮಸಾಲೆ ಹೆಚ್ಚಿರುವ ಆಹಾರ:
ಮಸಾಲೆ ಅಥವಾ ಖಾರಯುಕ್ತ ಆಹಾರವು ಹೊಟ್ಟೆಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಉರಿಯೂತ, ಅಜೀರ್ಣ ಹಾಗೂ ಹೊಟ್ಟೆ ಉಬ್ಬರ ಹೀಗೆ ಅನಾರೋಗ್ಯ ಉಂಟಾಗುತ್ತದೆ. ಅದರಲ್ಲೂ ವಿಶೇಷವಾಗಿ ರಾತ್ರಿ ಇಂತಹ ಆಹಾರ ಸೇವಿಸಿದರೆ ಜೀರ್ಣಕ್ರಿಯೆ ಮತ್ತಷ್ಟು ಕಷ್ಟಕರವಾಗಲಿದ್ದು, ಆಮ್ಲೀಯತೆ, ಹೊಟ್ಟೆ ಉರಿ ಹಾಗೂ ಅಸ್ವಸ್ಥತೆ ಉಂಟಾಗಿ ನಿದ್ರೆ ವ್ಯತ್ಯಯಗೊಳ್ಳಬಹುದು.
ಕಾಫಿ ಮತ್ತು ಚಹಾ:
ಬಹುತೇಕ ಜನರಿಗೆ ಊಟದ ನಂತರ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ ಕಾಫಿಯಲ್ಲಿರುವ ಕೆಫೀನ್ ಅಂಶ ನಿದ್ರೆಯನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಅದೇ ರೀತಿ ಚಹಾದಲ್ಲೂ ಕೆಫೀನ್ ಇರುವುದರಿಂದ ಮಲಗುವ ಮೊದಲು ಇದನ್ನು ಸೇವಿಸುವುದರಿಂದ ನಿದ್ರೆಯ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಸಂಜೆ ನಂತರ ಕಾಫಿ ಅಥವಾ ಚಹಾವನ್ನು ತಪ್ಪಿಸುವುದು ಒಳಿತು.
ಜಂಕ್ ಫುಡ್:
ಜಂಕ್ ಫುಡ್‌ಗಳಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚು ಇರುತ್ತದೆ. ಇವು ದೇಹದಲ್ಲಿ ಬೇಗ ಜೀರ್ಣವಾಗದೆ ಹೊಟ್ಟೆಗೆ ಭಾರವಾಗುತ್ತವೆ. ರಾತ್ರಿ ಸಮಯದಲ್ಲಿ ಇಂತಹ ಆಹಾರಗಳನ್ನು ಸೇವಿಸಿದರೆ ನಿದ್ರೆ ಸರಿಯಾಗಿ ಬರದಿರುವ ಸಾಧ್ಯತೆ ಇದೆ. ಜೊತೆಗೆ ಇವು ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು.
ಒಟ್ಟಿನಲ್ಲಿ, ಮಲಗುವ ಮೊದಲು ಸರಿಯಾದ ಆಹಾರ ಆಯ್ಕೆ ಮಾಡಿಕೊಂಡರೆ ಉತ್ತಮ ನಿದ್ರೆ ಪಡೆಯಲು ಮತ್ತು ದೇಹವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ..

Leave a Comment