HOME

stories

STORIES

google-news

FOLLOW

FOLLOW

JOIN

ಯಾವಾಗ ನಡೆಯಲಿದೆ ಬಿಗ್ ಬಾಸ್‌ ಫಿನಾಲೆ? ಫಿನಾಲೆಗೆ ಎಂಟ್ರಿ ಕೊಡೋ  ಸ್ಪರ್ಧಿಗಳು ಎಷ್ಟು?

Updated: 09-01-2026, 11.11 AM

Follow us:

ಬಿಗ್‌ ಬಾಸ್‌ ಕನ್ನಡ ಕೊನೆಯ ಹಂತದಲ್ಲಿ ಇದೆ. ಈಗಾಗಲೇ ಟಿಕೆಟ್‌ ಫಿನಾಲೆ ರೇಸ್‌ ಕೂಡ ಆರಂಭವಾಗಿದ್ದು, ಈ ಬಾರಿ ಕಪ್‌ ಗೆಲ್ಲೋದು ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಜನವರಿ 17 ಹಾಗೂ 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಅದಕ್ಕೂ ಮೊದಲು ಎಷ್ಟು ಎಲಿಮಿನೇಷನ್  ನಡೆಯುತ್ತದೆ? ಬಹುಮಾನ ಕೊಡೋದು ಏನು? ಫಿನಾಲೆ ಯಾವ ರೀತಿಯಲ್ಲಿ ನಡೆಯುತ್ತದೆ ಎಂಬ ಬಗ್ಗೆ ಚರ್ಚೆಗಳು ಆಗುತ್ತಿವೆ. ಈ ಬಾರಿ ಬಿಗ್‌ ಬಾಸ್‌ 100 ದಿನಗಳು ಮಾತ್ರವಲ್ಲ, 112 ದಿನಗಳ ಕಾಲ ಪ್ರಸಾರವಾಗುತ್ತಿರುವುದು ವಿಶೇಷ.

ಯಾವಾಗ ಫಿನಾಲೆ?
ಜನವರಿ 17 ಮತ್ತು 18ರಂದು ಅಂತಿಮ ಘಟ್ಟ ತಲುಪಲಿದ್ದು, ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ಪ್ರಸ್ತುತ 15 ನೇ ವಾರಕ್ಕೆ ಕಾಲಿಟ್ಟಿರುವ ಬಿಗ್‌ ಬಾಸ್‌ ಮನೆಯಲ್ಲಿ ರಾಶಿಕಾ ಶೆಟ್ಟಿ, ಅಶ್ವಿನಿ ಗೌಡ , ಗಿಲ್ಲಿ ನಟ , ಕಾವ್ಯಾ ಶೈವ, ರಕ್ಷಿತಾ ಶೆಟ್ಟಿ‌, ರಘು, ಧ್ರುವಂತ್ ಹಾಗೂ ಧನುಷ್ ಹೀಗೆ 8 ಮಂದಿ ಸ್ಪರ್ಧಿಗಳಿದ್ದಾರೆ. ಫಿನಾಲೆಗೆ ಉಳಿಯೋದು ಆರು ಅಥವಾ ಐದು ಮಂದಿ ಮಾತ್ರ. ಕಳೆದ ಸೀಸನ್‌ನಲ್ಲಿ ಫಿನಾಲೆಗೆ ಆರು ಜನರನ್ನು ಉಳಿಸಿಕೊಳ್ಳಲಾಗಿತ್ತು.

ಎಲಿಮಿನೇಶನ್‌ ಹೇಗೆ?
ಮುಂದಿನ ವಾರ ಮಧ್ಯವಾರದ ಎಲಿಮಿನೇಷನ್ ಇರಲಿದೆ. ಈ ವಾರಾಂತ್ಯದಲ್ಲಿ ಒಂದು ಎಲಿಮಿನೇಷನ್ ಆಗಲಿದೆ ಎನ್ನಲಾಗುತ್ತಿದೆ. ಈ ಟಾಪ್‌ 6 ಸ್ಪರ್ಧಿಗಳಲ್ಲಿ ಒಬ್ಬರನ್ನು ಜನವರಿ 17 ರಂದು ಎಲಿಮಿನೇಟ್‌ ಮಾಡುವ ಸಾಧ್ಯತೆಯಿದ್ದು, 18ರಂದು ಉಳಿದ 3 ಸದಸ್ಯರನ್ನು ಎಲಿಮಿನೇಟ್‌ ಮಾಡಬಹುದು. ಫಿನಾಲೆ ವೀಕ್‌ ನಲ್ಲಿ ಮಿಡ್ ವೀಕ್‌ ಎಲಿಮಿನೇಷನ್‌ ಮೂಲಕ ಇನ್ನೊಬ್ಬ ಸದಸ್ಯರನ್ನು ಮನೆಯಿಂದ ಹೊರಹಾಕಲಾಗುತ್ತದೆ. ಹೀಗೆ ಕೊನೆಗೆ ಫಿನಾಲೆ ಸಮಯದಲ್ಲಿ 6 ಮಂದಿ ಇರಬಹುದು ಎನ್ನಲಾಗಿದೆ.

ಬಹುಮಾನ ಏನು?
ಫಿನಾಲೆ ಸಂಜೆ 6 ಗಂಟೆಗೆ ಆರಂಭ ಆಗುವ ಸಾಧ್ಯತೆ ಇದೆ. ಎಲಿಮಿನೇಟ್‌ ಆಗಿರುವ ಸ್ಪರ್ಧಿಗಳು ಡ್ಯಾನ್ಸ್ ಕೂಡ ಮಾಡುತ್ತಾರೆ. ಈ ಬಾರಿ ಎಲಿಮಿನೇಟ್ ಆದ ಸ್ಪರ್ಧಿಗಳು ಫಿನಾಲೆಯಲ್ಲಿ ಇರಲಿದ್ದಾರೆ. ಗೆದ್ದ ಸ್ಪರ್ಧಿಗೆ 50 ಲಕ್ಷ ಕ್ಯಾಶ್ ಹಾಗೂ ಟ್ರೋಫಿ ಸಿಗಲಿದೆ.
ಇನ್ನು, ಈ ವಾರ ಅಚ್ಚರಿಯ ನಾಮಿನೇಷನ್‌ ನಡೆದಿದೆ. ಕ್ಯಾಪ್ಟನ್‌ ಧನುಷ್‌ ಅವರನ್ನು ಹೊರುತಪಡಿಸಿ, ಗಿಲ್ಲಿ ನಟ, ಅಶ್ವಿನಿ, ಕಾವ್ಯ, ರಕ್ಷಿತಾ, ರಾಶಿಕಾ, ರಘು ಮತ್ತು ಧ್ರುವಂತ್‌ ಸೇರಿ ಎಲ್ಲರೂ ನಾಮಿನೇಟ್‌ ಆಗಿದ್ದಾರೆ.

ಹಾಗಾಗಿ, ಈ ವಾರ ಯಾರೇ ಎಲಿಮಿನೇಟ್‌ ಆದರೂ, ಬಿಗ್‌ ಬಾಸ್‌ ಆಟದಕ್ಕೆ ದೊಡ್ಡ ತಿರುವು ಸಿಗಲಿದೆ. ಬಿಗ್ ಬಾಸ್‌ ಮನೆಯಲ್ಲಿ 99 ದಿನಗಳ ಕಾಲ ಇದ್ದ ಸ್ಪಂದನಾ ಅವರು ಕಳೆದ ವಾರ ಎಲಿಮಿನೇಟ್‌ ಆಗಿದ್ದಾರೆ.

Leave a Comment

About Us

SandalwoodSuddi — ಕನ್ನಡದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ನಮ್ಮ ಧ್ಯೇಯ ಸ್ಪಷ್ಟವಾಗಿದೆ: ಕನ್ನಡ ಓದುಗರಿಗೆ ತಾಜಾ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವುದು. ಸಿನಿಮಾದಿಂದ ರಾಜಕೀಯ, ಕ್ರೀಡೆ, ತಂತ್ರಜ್ಞಾನ, ಶಿಕ್ಷಣ, ಜೀವನಶೈಲಿ ಮತ್ತು ಮನರಂಜನೆಯವರೆಗೆ — ನಾವು ನಿಮ್ಮ ಮೊಬೈಲ್ ಮತ್ತು ವೆಬ್‌ನಲ್ಲಿ ಎಲ್ಲಾ ಕ್ಷೇತ್ರಗಳ ಇತ್ತೀಚಿನ ನವೀಕರಣಗಳನ್ನು ತಲುಪಿಸುತ್ತೇವೆ.