ʻಬಿಗ್ ಬಾಸ್ ಕನ್ನಡ 12’ರ ಫಿನಾಲೆ ಹೊಸ್ತಿಲಲ್ಲೇ ರಾಶಿಕಾ ಶೆಟ್ಟಿ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಜ.11 ರಂದು ನಡೆದ ಕೊನೆಯ ವೀಕೆಂಡ್ನಲ್ಲಿ ಈ ಎಲಿಮಿನೇಷನ್ ಅನೌನ್ಸ್ ಆಗಿದೆ. ಭಾನುವಾರದ ಎಪಿಸೋಡ್ನಲ್ಲಿ ಒಬ್ಬ ಸ್ಪರ್ಧಿ ಮನೆಯಿಂದ ಹೊರಹೋಗಬೇಕೆಂಬ ನಿಯಮದಂತೆ ರಾಶಿಕಾ ಅವರನ್ನ ಎವಿಕ್ಟ್ ಮಾಡಲಾಗಿದೆ.
ʻಬಿಗ್ ಬಾಸ್ʼನಲ್ಲಿ ಈ ವಾರ ಒಟ್ಟು 8 ಮಂದಿ ಸ್ಪರ್ಧಿಗಳ ಪೈಕಿ, 7 ಮಂದಿ ಡೇಂಜರ್ ಝೋನ್ನಲ್ಲಿದ್ದರು. ಗಿಲ್ಲಿ ನಟ, ಕಾವ್ಯ ಶೈವ, ಅಶ್ವಿನಿ ಗೌಡ, ಧ್ರುವಂತ್, ರಾಶಿಕಾ ಶೆಟ್ಟಿ, ರಘು, ರಕ್ಷಿತಾ ಶೆಟ್ಟಿ. ಶನಿವಾರದ ಎಪಿಸೋಡ್ನಲ್ಲಿ ಅಶ್ವಿನಿ ಗೌಡ ಅವರು ಮೊದಲು ಸೇಫ್ ಆದರು. ಇನ್ನೂ, ಇಂದಿನ ಎಪಿಸೋಡ್ನಲ್ಲಿ ಮೊದಲು ಗಿಲ್ಲಿ, ನಂತರ ರಕ್ಷಿತಾ ಶೆಟ್ಟಿ, ಧ್ರುವಂತ್ ಮತ್ತು ಕಾವ್ಯ ಸೇಫ್ ಆದರು. ಕೊನೆಗೆ ರಘು ಹಾಗೂ ರಾಶಿಕಾ ಶೆಟ್ಟಿ ಡೇಂಜರ್ ಝೋನ್ನಲ್ಲಿದ್ದರು. ಇವರಿಬ್ಬರ ಪೈಕಿ ಕಡೆಗೆ ರಾಶಿಕಾ ಶೆಟ್ಟಿ ಔಟ್ ಆಗಿದ್ದಾರೆ. ಹೀಗಾಗಿ, ಫಿನಾಲೆಗೆ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದ ರಾಶಿಕಾ ಅವರು ಸ್ವಲ್ಪದರಲ್ಲಿ ಫೈನಲಿಸ್ಟ್ ಆಗುವ ಅವಕಾಶದಿಂದ ವಂಚಿತರಾದರು.
ರಾಶಿಕಾ ಶೆಟ್ಟಿ ಅವರ ʻಬಿಗ್ ಬಾಸ್ʼ ಜರ್ನಿ ಅಷ್ಟು ಸುಲಭದ್ದಾಗಿರಲಿಲ್ಲ. ಕಾರಣ ಹಲವು ಟೀಕೆಗಳು, ಅಪವಾದಗಳು, ಅವಕಾಶ ಕೈಗೆ ಬಂದು ಕೊನೆಯ ಕ್ಷಣದಲ್ಲಿ ಮಿಸ್ ಆಗೋದು – ಇವೆಲ್ಲವನ್ನೂ ದಾಟಿ ರಾಶಿಕಾ ಶೆಟ್ಟಿ ಸಖತ್ ಸ್ಟ್ರಾಂಗ್ ಆಗಿ ಇಲ್ಲಿಯವರೆಗೂ ಬಂದಿದ್ದಾರೆ. ಇನ್ನೂ ಅಭಿಮಾನಿಗಳು ರಾಶಿಕಾ ಶೆಟ್ಟಿ ಈ ಸೀಸನ್ನ ಮಹಿಳಾ ಟಾಸ್ಕ್ ಮಾಸ್ಟರ್ ಅಂತಲೇ ಬಿರುದು ಕೊಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಟಾಸ್ಕ್ ಯಾವುದೇ ಇರ್ಲಿ, 100% ಎಫರ್ಟ್ ಹಾಕಿ ಟಾಸ್ಕ್ ಗೆಲ್ಲುತ್ತಿದ್ದವರು ರಾಶಿಕಾ ಶೆಟ್ಟಿ. ಇದೇ ಟಾಸ್ಕ್ನಿಂದಲೇ ಮಿನಿ ಫಿನಾಲೆಯಲ್ಲಿ ರಾಶಿಕಾ ಶೆಟ್ಟಿ ಫೈನಲಿಸ್ಟ್ ಕೂಡ ಆಗಿದ್ದರು.
ಇನ್ನೂ ಟಾಸ್ಕ್ ಗೆದ್ದು ಈ ಸೀಸನ್ನ ಮೊದಲ ಮಹಿಳಾ ಕ್ಯಾಪ್ಟನ್ ಪಟ್ಟಕ್ಕೇರಿದ್ದರು ರಾಶಿಕಾ ಶೆಟ್ಟಿ. ಆದರೆ, ಉಸ್ತುವಾರಿಯಲ್ಲಿ ಎಡವಿದ್ದರಿಂದ ಎಲ್ಲೋ ಒಂದ್ಕಡೆ ಆಟಕ್ಕೆ ಅದು ಕೂಡ ಮಿಸ್ಟೇಕ್ ಆಗಿರ್ಬಹುದು ಅನ್ನೋದು ವೀಕ್ಷಕರ ಅಭಿಪ್ರಾಯ. ರಾಶಿಕಾ ಶೆಟ್ಟಿ ಈ ವಾರ ಎಲಿಮಿನೇಟ್ ಆಗುತ್ತಾರೆ ಅನ್ನೋ ಸಣ್ಣ ಕ್ಲ್ಯೂ ಕೂಡ ʻಬಿಗ್ ಬಾಸ್ʼ ಮಂದಿಗೆ ಇರಲಿಲ್ಲ. ಆದರೆ, ರಾಶಿಕಾ ಶೆಟ್ಟಿ ಎಲಿಮಿನೇಟ್ ಆಗಿದ್ದು ಶಾಕಿಂಗ್ ಕೂಡ ಹೌದು.
ಮಿಡ್ ವೀಕ್ ಎಲಿಮಿನೇಷನ್ ಕೂಡ ಇದೆ. ಯಾರು? ಯಾವಾಗ? ಹೇಗೆ? ಔಟ್ ಆಗ್ತಾರೆ ಅನ್ನೋದು ಕೂಡ ಸರ್ಪ್ರೈಸಿಂಗ್ ಆಗಿರಲಿದೆ
ರಾಶಿಕಾ ಶೆಟ್ಟಿ ಒಬ್ಬ ಕನ್ನಡ ನಟಿ ಮತ್ತು ಮಾಡೆಲ್, ಇವರು ಯೋಗರಾಜ್ ಭಟ್ ನಿರ್ದೇಶನದ “ಮನದ ಕಡಲು” ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದರು. ರು “ದೊರೆಸಾನಿ” ಕನ್ನಡ ಸೀರಿಯಲ್ ಮತ್ತು ತೆಲುಗು ಸೀರಿಯಲ್ಗಳಲ್ಲೂ ನಟಿಸಿದ್ದಾರೆ.

Leave a Comment