ಸೆಪ್ಟಿ ಅನ್ನೋದು ಈಗ ಕಂಪನಿಗಳು ಕೊಡುವಂತಹ ಒಂದು ಔದಾರ್ಯ ಅಲ್ಲ. ಅದು ಗ್ರಾಹಕರಿಗೆ ಬೇಕಾಗುವಂತಹ ಒಂದು ಹಕ್ಕು ಅಂತಾನೆ ಹೇಳಬಹುದು. ಇದನ್ನ ಯಾವಾಗಲೂ ಅನುಸರಿಸಿಕೊಂಡು ಬಂದಂತಹ ಕಂಪನಿ ಅದು ಬೇರೆ ಯಾವ್ದು ಅಲ್ಲ ನಮ್ಮ ಹೆಮ್ಮೆಯ ಟಾಟಾ ಮೋಟಾರ್ಸ್.
ಭಾರತದ ಪ್ರಮುಖ ವಾಹನ ತಯಾರಕರಲ್ಲಿ ಒಂದಾದ ಟಾಟಾ ಮೋಟಾರ್ಸ್ ಬಹು ವಿಭಾಗಗಳಲ್ಲಿ ವಾಹನಗಳನ್ನು ಮಾರಾಟ ಮಾಡುತ್ತದೆ. ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಟಾಟಾ ಪಂಚ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಎಸ್‌ಯುವಿಯ ವೈಶಿಷ್ಟ್ಯಗಳು, ಪವರ್ಫುಲ್ ಎಂಜಿನ್ ಮತ್ತು ಬೆಲೆ ಸೇರಿದಂತೆ ಇತರೆ ಮಾಹಿತಿ, ವಿವರ ತಿಳಿಯೋಣ ಬನ್ನಿ.
2026 ಫೆಸ್‌ಲಿಫ್ಟ್‌ನಲ್ಲಿ ಹೊಸ ಫೀಚರ್ಸ್
ಹೊಸ ಟಾಟಾ ಪಂಚ್ 2026 ಫೆಸ್‌ಲಿಫ್ಟ್ ಕ್ಯಾಬಿನ್ ಒಳಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೋಲ್, ಹಿಂಭಾಗದ ಸೀಟ್‌ಗಳಿಗೆ ಎಸಿ ವೆಂಟ್‌ಗಳು, ಸ್ಟೀರಿಂಗ್ – ಮೌಂಟೆಡ್ ಕಂಟ್ರೋಲ್‌ಗಳು ಮತ್ತು ಎತ್ತರ – ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್‌ನಂತಹ ಅಪ್‌ಡೇಟ್‌ಗಳನ್ನು ನೀಡಿದ್ದಾರೆ.
ಜೊತೆಗೆ ಟಾಪ್ ವೇರಿಯೆಂಟ್‌ಗಳು ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, 360 – ಡಿಗ್ರಿ ಕ್ಯಾಮೆರಾ, ಪುಶ್ ಬಟನ್ ಸ್ಟಾರ್ಟ್ ಸ್ಟಾಪ್, ರೈನ್ – ಸೆನ್ಸಿಂಗ್ ವೈಪರ್‌ಗಳು, ಆಟೋ ಹೆಡ್‌ಲ್ಯಾಂಪ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕನೆಕ್ಟೆಡ್ ಕಾರ್ ಟೆಕ್, ವಾಯಿಸ್-ಅಸಿಸ್ಟ್ ಎಲೆಕ್ಟ್ರಿಕ್ ಸನ್‌ರೂಫ್ ಇರಲಿವೆ. ಎಲ್ಲಾ ವೇರಿಯೆಂಟ್‌ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಟೈರ್ ಪ್ರಷರ್ ಮಾನಿಟರಿಂಗ್ ಸಿಗಲಿವೆ.
ಹೊಸ ಬಣ್ಣಗಳು ಮತ್ತು ಡಿಸೈನ್
ಪಂಚ್ ಫೇಸ್‌ಲಿಫ್ಟ್‌ನೊಂದಿಗೆ, ಈಗ ಆರು ಬಣ್ಣಗಳಲ್ಲಿ ನೀಡಲಾಗುವುದು – ಸೈಂಟಾಫಿಕ್, ಕ್ಯಾರಮೆಲ್, ಬೆಂಗಾಲ್ ರೂಜ್, ಡೇಟೋನಾ ಗ್ರೇ, ಕೂರ್ಗ್ ಕ್ಲೌಡ್ಸ್ ಮತ್ತು ಪ್ರಿಸ್ಟೈನ್ ವೈಟ್ ಬಣ್ಣಗಳಲ್ಲಿ ಸಿಗಲಿದೆ. ಹೊರಭಾಗದಲ್ಲಿ, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್, 16-ಇಂಚಿನ ಅಲಾಯ್ ವೀಲ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್, ರಿಫ್ರೆಶ್ ಮಾಡಿದ ಒಟ್ಟಾರೆ ವಿನ್ಯಾಸವನ್ನು ಪರಿಚಯಿಸಲಾಗುತ್ತದೆ.
ಬೆಲೆ ಎಷ್ಟು?
ಟಾಟಾ ಪಂಚ್ ಫೇಸ್‌ಲಿಫ್ಟ್ ಅನ್ನು ₹5.59 ಲಕ್ಷ ಎಕ್ಸ್-ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಿತು. ಟಾಪ್-ಎಂಡ್ ಪೆಟ್ರೋಲ್ ರೂಪಾಂತರದ ಬೆಲೆ ₹8.99 ಲಕ್ಷ. CNG ರೂಪಾಂತರಗಳು ₹6.69 ಲಕ್ಷದಿಂದ ಪ್ರಾರಂಭವಾಗುತ್ತವೆ (ಎಕ್ಸ್-ಶೋರೂಂ). ಅದರ ಟಾಪ್ CNG ರೂಪಾಂತರಗಳ ಎಕ್ಸ್-ಶೋರೂಂ ಬೆಲೆ ರೂ. 9.69 ಲಕ್ಷ ಆಗಿದೆ.
ಟಾಟಾ ಪಂಚ್ ಫೇಸ್‌ಲಿಫ್ಟ್ ರೂಪಾಂತರ ಪ್ರಕಾರ ಬೆಲೆ
Persona /ರೂಪಾಂತರ Petrol MT ಬೆಲೆ CNG MT ಬೆಲೆ
Smart ₹5.59ಲಕ್ಷ ₹6.69 ಲಕ್ಷ
Pure ₹6.49 ಲಕ್ಷ ₹7.49 ಲಕ್ಷ
Pure+ ₹6.99 ಲಕ್ಷ ₹7.99 ಲಕ್ಷ
Adventure ₹7.59 ಲಕ್ಷ ₹8.59 ಲಕ್ಷ
Accomplished ₹8.29 ಲಕ್ಷ ₹9.29 ಲಕ್ಷ
Accomplished + S ₹8.99 ಲಕ್ಷ —
ಒಟ್ಟಾರೆ ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಪಂಚ್‌ನ ಹೊಸ ಫೇಸ್‌ಲಿಫ್ಟೆಡ್ ಆವೃತ್ತಿಯ ಬಿಡುಗಡೆಯೊಂದಿಗೆ ಪ್ರತಿಸ್ಪರ್ಧಿಗಳಿಗೆ ತೀವ್ರ ಪೈಪೋಟಿ ನೀಡಲು ಸಜ್ಜಾಗುತ್ತಿದೆ. ಮಾರುತಿ ಸುಜುಕಿ ಇಗ್ನಿಸ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕೈಗರ್, ಹ್ಯುಂಡೈ ಎಕ್ಸ್‌ಟರ್ ಮತ್ತು ಸಿಟ್ರನ್ ಸಿ3 ಕಾರುಗಳು ಪೈಪೋಟಿಯನ್ನು ಎದುರಿಸಲಿವೆ.

Leave a Comment