‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ನಟಿಸಿ ಗೀತಾ ಭಾರತಿ ಭಟ್ ಗಮನ ಸೆಳೆದಿದ್ದರು. ಒಳ್ಳೆ ಗಾಯಕಿ ಸಹ ಆಗಿರುವ ಗೀತಾ ಬಿಗ್ಬಾಸ್ ಕನ್ನಡ ಸೀಸನ್-8ರ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ನಟಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಅಮೃತಧಾರೆ ಯಲ್ಲಿ ನಟಿಸುತ್ತಿದ್ದಾರೆ.
ನಟಿಯ ಮದುವೆ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೀಗ ಮೆಚ್ಚಿನ ನಟಿಗೆ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ಜೀವನದಲ್ಲಿ ಅನೇಕ ಬಾರಿ ಬಾಡಿ ಶೇಮಿಂಗ್ ಅನುಭವಿಸಿದ್ದಾರೆ ನಟಿ. ಅವರಿಗೆ ಸಿನಿಮಾದಲ್ಲೇ ಬಾಡಿ ಶೇಮಿಂಗ್ ಮಾಡಲಾಗಿದೆಯಂತೆ. ಈ ಬಗ್ಗೆ ಅವರು ಸಂದರ್ಶನದಲ್ಲಿ ಆರೋಪ ಹೊರಿಸಿದ್ದರು.
ಗುಂಡಮ್ಮ ಅಂತಲೇ ಫೇಮಸ್
ಗೀತಾ ಭಾರತಿ ಭಟ್ ಗುಂಡಮ್ಮ ಅಂತಲೇ ಕಿರುತೆರೆಯಲ್ಲಿ ಫೇಮಸ್ ಆದವರು. ಬಿಗ್ಬಾಸ್(Big boss)ನಲ್ಲೂ ಮಿಂಚಿದವರು. ಮಗುವಿನಂತೆ ಮುಗ್ಧ ಮುಗುಳ್ನಗು ಬೀರುತ್ತಾ ಎಲ್ಲರ ಪ್ರೀತಿಗೆ ಪಾತ್ರರಾದವರು. ಇತ್ತೀಚೆಗೆ ನಟಿಯ ರವಿಕೆ ಪ್ರಸಂಗ ಸಿನಿಮಾ ರಿಲೀಸ್ ಆಗಿತ್ತು ಫೆಬ್ರವರಿ-16 ರಂದು ಈ ಚಿತ್ರ ರಿಲೀಸ್ ಆಗಿತ್ತು.
ಗೀತಾ ಭಾರತಿ ಭಟ್ ಬಾಸ್ಕೆಟ್ ಬಾಲ್ ಆಡುತ್ತಿದ್ದದ್ದೇ ಹೆಚ್ಚಂತೆ. ಹೀಗೆ ಬಾಸ್ಕೆಟ್ ಬಾಲ್ ಆಡುವಾಗ ಬಿದ್ದು, ಪೆಟ್ಟಾಗಿ ಸರ್ಜರಿ ಮಾಡಿಸಿದ ಬಳಿಕ ನಡೆದಾಡಲು ಆಗುತ್ತಿರಲಿಲ್ಲವಂತೆ. ಆಗ ದಪ್ಪಗಾದ ಗೀತಾ ಅವರು ಥೈರಾಯ್ಡ್ ಸಮಸ್ಯೆಯಿಂದಲೂ ಬಳಲಿದ್ದಾರೆ.
ಮಿಡಲ್ ಕ್ಲಾಸ್ ಕುಟುಂಬದಲ್ಲಿ ಜನಿಸಿದ ಗೀತಾ ಅವರಿಗೆ ತಮ್ಮ ತಾಯಿ ಎಂದರೆ ಅಚ್ಚುಮೆಚ್ಚು. ತಮ್ಮ ಮನೆಯಲ್ಲಿ ಕಷ್ಟ ಬಂದಾಗ ತಾಯಿ ಕೆಲಸಕ್ಕೆ ಹೋಗಿ, ಮನೆ ಹಾಗೂ ಕೆಲಸ ಎರಡನ್ನೂ ನಿಭಾಯಿಸಿ ಕಷ್ಟಪಟ್ಟಿದ್ದಾರೆ ಎಂದು ರಿಯಾಲಿಟಿ ಶೋ ಒಂದರಲ್ಲಿ ಹೇಳಿಕೊಂಡಿದ್ದಾರೆ. ಅಮ್ಮನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.

Leave a Comment