HOME

stories

STORIES

google-news

FOLLOW

FOLLOW

JOIN

ʻಬಿಗ್‌ ಬಾಸ್‌ʼಮನೆಯಲ್ಲಿ ಕ್ರೇಜಿಸ್ಟಾರ್ :  ದೊಡ್ಮನೆ ಈಗ ಸಖತ್‌ ಕಲರ್‌ಫುಲ್

Updated: 18-12-2025, 01.49 PM

Follow us:

ಬಿಗ್‌ ಬಾಸ್‌ ಮನೆ ಈಗ ಸಖತ್‌ ಕಲರ್‌ಫುಲ್‌ ಆಗಿದೆ. ಅದಕ್ಕೆ ಕಾರಣ, ನಮ್ಮ ಕ್ರೇಜಿ ಸ್ಟಾರ್‌ ರವಿಚಂದ್ರನ್.‌ ಹೌದು, ಕನುಸುಗಾರ ರವಿಮಾಮಾ ಈಗ ಬಿಗ್‌ ಬಾಸ್‌ ಮನೆಯೊಳಗೆ ಕಾಲಿಟ್ಟಿದ್ದಾರೆ. ಅವರೇನು ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟಿಲ್ಲ. ಬದಲಿಗೆ ರಾಶಿಕಾ ಶೆಟ್ಟಿ ಅವರಿಗಾಗಿ ಬಿಗ್‌ ಬಾಸ್‌ ಮನೆಯೊಳಗೆ ಹೋಗಿದ್ದಾರೆ. ಅರೇ, ರಾಶಿಕಾಗಾಗಿ ಯಾಕೆ ರವಿಚಂದ್ರನ್‌ ಯಾಕೆ ಮನೆಯೊಳಗೆ ಹೋದರು ಎಂಬ ಪ್ರಶ್ನೆಗೂ ಇಲ್ಲಿದೆ ಉತ್ತರ.

ಪ್ಯಾರ್‌ ಸಿನಿಮಾದಲ್ಲಿ ನಟನೆ
ಹೌದು, ಪ್ಯಾರ್‌ ಅನ್ನೋ ಹೊಸ ಸಿನಿಮಾ ರಿಲೀಸ್‌ಗೆ ರೆಡಿ ಇದೆ. ಇದರಲ್ಲಿ ರವಿಚಂದ್ರನ್ ಮುಖ್ಯ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼರ ಸ್ಪರ್ಧಿಯಾಗಿರುವ ರಾಶಿಕಾ ಶೆಟ್ಟಿ ಕೂಡ ನಟಿಸಿದ್ದಾರೆ, ಅದು ಕೂಡ ರವಿಚಂದ್ರನ್‌ ಅವರ ಮಗಳಾಗಿ! ಆದ್ದರಿಂದ ಈ ಸಿನಿಮಾದ ಪ್ರಚಾರಕ್ಕಾಗಿ ನಟ ಭರತ್‌ ಅವರ ಜೊತೆಗೆ ರವಿಚಂದ್ರನ್‌ ಅವರು ಬಿಗ್‌ ಬಾಸ್‌ ಮನೆಗೆ ಹೋಗಿದ್ದಾರೆ.

ಪ್ರೀತಿ – ಪ್ರೇಮದ ಕಥೆಯ ಜತೆಗೆ ತಂದೆ-ಮಗಳ ನಡುವಿನ ಭಾವನಾತ್ಮಕ ಸಂಬಂಧವನ್ನೂ ತೆರೆದಿಡುವಂಥ ವಿಭಿನ್ನ ಪರಿಕಲ್ಪನೆಯನ್ನು ಹೊಂದಿರುವ ಪ್ಯಾರ್‌ ಸಿನಿಮಾವನ್ನು ಕಾಶ್ಮೀರ, ರಾಜಸ್ಥಾನ, ಅಂಡಮಾನ್ ದ್ವೀಪ, ಮಂಗಳೂರು, ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಸುತ್ತಮುತ್ತ 70ಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ರಾಶಿಕಾ ಶೆಟ್ಟಿ ಎದುರು ಭರತ್ ಹೀರೋ ಆಗಿದ್ದಾರೆ. ಎಸ್ ಎಂ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಚ್ ಎಸ್ ನಾಗಶ್ರೀ ನಿರ್ಮಾಣ ಮಾಡಿರುವ ಈ ಸಿನಿಮಾಗೆ ಸುಪ್ರೀತ್ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಬಗ್ಗೆ ರವಿಚಂದ್ರನ್‌ ಹೇಳಿದ್ದೇನು?
ಈ ಹಿಂದೊಮ್ಮೆ ಪ್ಯಾರ್‌ ಚಿತ್ರದ ಬಗ್ಗೆ ಮಾತನಾಡಿದ್ದ ರವಿಚಂದ್ರನ್‌, “ನಾನು ಈ ಸಿನಿಮಾದಲ್ಲಿ ನಟಿಸಬೇಕು ಎಂಬುದು ಚಿತ್ರತಂಡದ ಆಸೆ ಆಗಿತ್ತು. ಈ ತಂಡದ ಹಠ, ಪ್ರೀತಿಗೆ ಸೋತು ಪ್ಯಾರ್‌ ಸಿನಿಮಾದಲ್ಲಿ ನಟಿಸಿದ್ದೇನೆ. ಪ್ರೀತಿಗೆ ಇರುವ ಬೆಲೆಯನ್ನು ಇಲ್ಲಿ ಬೇರೆ ರೀತಿಯಲ್ಲಿ ಹೇಳುವುದಕ್ಕೆ ಹೊರಟಿದ್ದಾರೆ. ನಾನು ಇಲ್ಲಿ ಬರೀ ಕಲಾವಿದನಾಗಿ ಕಾಣಿಸಿಕೊಂಡಿದ್ದೇನೆ. ನನ್ನನ್ನು ಹೇಗೆ ತೋರಿಸಬೇಕು ಎಂಬುದು ನಿರ್ದೇಶಕರಿಗೆ ಬಿಟ್ಟಿದ್ದು” ಎಂದಿದ್ದರು.

ದೊಡ್ಮನೆಯಲ್ಲಿ ಸಾಂಗ್‌ ರಿಲೀಸ್‌
ಲವ್‌ ಕಾಲೇಜ್‌ಗೆ ಪ್ರಿನ್ಸಿಪಾಲ್‌ ಎನಿಸಿಕೊಂಡಿರುವ ರವಿಚಂದ್ರನ್‌ ಅವರು ಪ್ಯಾರ್‌ ಚಿತ್ರದಲ್ಲಿ ಯಾವ ರೀತಿಯ ಪ್ರೇಮಕಥೆಯನ್ನು ಹೇಳಲಿದ್ದಾರೋ ಗೊತ್ತಿಲ್ಲ. ಚಿತ್ರದ ನಾಯಕಿ ರಾಶಿಕಾ ಶೆಟ್ಟಿ ಬಿಗ್‌ ಬಾಸ್‌ ಮನೆಯೊಳಗೆ ಇರುವುದರಿಂದ, ಹೀರೋ ಭರತ್‌ ಜೊತೆಗೆ ಬಿಗ್‌ ಬಾಸ್‌ ಮನೆಗೆ ಹೋಗಿ ಹಾಡನ್ನು ರಿಲೀಸ್‌ ಮಾಡಿದ್ದಾರೆ. ಒಂದೇ ಮಾತಲಿ ಹೇಳೋದಾದರೆ ಎಂದು ಶುರುವಾಗುವ ಈ ಗೀತೆಯನ್ನು ಸೋನು ನಿಗಮ್‌ ಮತ್ತು ಶ್ರೇಯಾ ಘೋಷಾಲ್‌ ಅವರು ಹಾಡಿರುವುದು ವಿಶೇಷ. ಪಳನಿ ಡಿ ಸೇನಾಪತಿ ಇದರ ಸಂಗೀತ ಸಂಯೋಜಕರು.

Leave a Comment

About Us

SandalwoodSuddi — ಕನ್ನಡದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ನಮ್ಮ ಧ್ಯೇಯ ಸ್ಪಷ್ಟವಾಗಿದೆ: ಕನ್ನಡ ಓದುಗರಿಗೆ ತಾಜಾ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವುದು. ಸಿನಿಮಾದಿಂದ ರಾಜಕೀಯ, ಕ್ರೀಡೆ, ತಂತ್ರಜ್ಞಾನ, ಶಿಕ್ಷಣ, ಜೀವನಶೈಲಿ ಮತ್ತು ಮನರಂಜನೆಯವರೆಗೆ — ನಾವು ನಿಮ್ಮ ಮೊಬೈಲ್ ಮತ್ತು ವೆಬ್‌ನಲ್ಲಿ ಎಲ್ಲಾ ಕ್ಷೇತ್ರಗಳ ಇತ್ತೀಚಿನ ನವೀಕರಣಗಳನ್ನು ತಲುಪಿಸುತ್ತೇವೆ.