ಮಿಲನಾ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಸಿನಿಮಾ ತೆರೆಗಪ್ಪಳಿಸಲು 10 ದಿನಗಳು ಮಾತ್ರ ಬಾಕಿಯಿದೆ. ಈಗಾಗಲೇ ಅಭಿಮಾನಿಗಳು ಸಂಭ್ರಮಾಚರಣೆ ಶುರುವಾಗಿದೆ. ಟ್ರೈಲರ್ ರಿಲೀಸ್ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಅಪ್‌ಡೇಟ್ ಸಿಕ್ಕಿದೆ. ಕೊಂಚ ತಡವಾಗಿದ್ದರೂ ಜಬರ್ದಸ್ತ್ ಆಕ್ಷನ್ ಪ್ಯಾಕ್ಡ್ ಝಲಕ್ ಸಿದ್ಧವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದಾರೆ. ಹಾಗಾಗಿ ಅವರ ಅನುಪಸ್ಥಿತಿಯಲ್ಲೇ ‘ಡೆವಿಲ್’ ಸಿನಿಮಾ ತೆರೆಗೆ ಬರ್ತಿದೆ. ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ಚಿತ್ರತಂಡದ ಪರ ನಿಂತಿದ್ದಾರೆ. ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ದರ್ಶನ್ ಸೋಶಿಯಲ್ ಮೀಡಿಯಾ ಖಾತೆಗಳನ್ನು ಅವರ ಸಲಹೆ ಮೇರೆಗೆ ಪತ್ನಿ ವಿಜಯಲಕ್ಷ್ಮಿ ಹ್ಯಾಂಡಲ್ ಮಾಡುತ್ತಿದ್ದಾರೆ. ಟ್ರೈಲರ್ ರಿಲೀಸ್ ಅಪ್‌ಡೇಟ್ ಕೂಡ ದರ್ಶನ್ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿದೆ.
ಟ್ರೈಲರ್ ಘೋಷಣೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಎಕ್ಸ್ ಖಾತೆಯಿಂದ ‘ದಿ ಡೆವಿಲ್’ ಚಿತ್ರದ ಟ್ರೈಲರ್ ಘೋಷಣೆ ಆಗಿದೆ. ಡಿಸೆಂಬರ್ 5ರಂದು ಬೆಳಗ್ಗೆ 10:05ಕ್ಕೆ ‘ದಿ ಡೆವಿಲ್ ಟ್ರೈಲರ್ ರಿಲೀಸ್ ಆಗುತ್ತಿದೆ. ಡಿಸೆಂಬರ್ 11 ರಂದು ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ.
ಸ್ವತಃ ದರ್ಶನ್ ಇನ್‌ಸ್ಟಾ ಮೂಲಕ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ದರ್ಶನ್ ತಮ್ಮ ಸೂಪರ್ ಹಿಟ್ ಕಾಟೇರ ಚಿತ್ರದ ಬಳಿಕ ನಟಿಸುತ್ತಿರುವ ಹೈ ವೋಲ್ಟೇಜ್ ಸಿನಿಮಾ ಇದಾಗಿದೆ. ಈ ಸಿನಿಮಾ ಬಿಡುಗಡೆಗೆ ಕೆಲವೇ ಕೆಲ ದಿನಗಳು ಬಾಕಿ ಇದ್ದು, ಕ್ರೇಜ್ ಹೆಚ್ಚಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡುಗಳಿಂದಲೇ ಡೆವಿಲ್ ಸಿನಿಮಾ ಸದ್ದು ಮಾಡಿದೆ. ಹೀಗಿರುವಾಗ ದರ್ಶನ್ ಅವರ ಈ ಪೋಸ್ಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟಿಸಿದೆ.
ಪ್ರಚಾರ ಹೊಣೆ ಹೊತ್ತುಕೊಂಡ ಪತ್ನಿ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ, ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರೇ ಪ್ರಚಾರ ಹೊಣೆ ಹೊತ್ತುಕೊಂಡು ಈಗಾಗಲೇ ದರ್ಶನ್ ಅವರ ಅಭಿಮಾನಿಗಳ ಜೊತೆಗೆ ಸಭೆ ಮಾಡಿದ್ದಾರೆ. “ನನ್ನ ಅಭಿಮಾನಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ.. ನನ್ನ ಉಳಿದ ಸಿನಿಮಾಗಳಿಗೆ ಅಪಾರ ಪ್ರೀತಿ ನೀಡಿದ್ದೀರಿ. ಆದರೆ, ಡೆವಿಲ್‌ಗೆ ಹೆಚ್ಚು ಪ್ರೀತಿ ಕೊಡಿ ಅಂತ ಅಭಿಮಾನಿಗಳಲ್ಲಿ ದರ್ಶನ್ ಕೇಳಿಕೊಂಡಿದ್ದಾರೆ” ಎಂದು ವಿಜಯಲಕ್ಷ್ಮಿ ಹೇಳಿದ್ದರು.

Leave a Comment