ರಾಜ್ಯಾದ್ಯಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದೇ ಹವಾ. ಹೌದು ಡೆವಿಲ್ ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಸಿನಿ ಪ್ರಿಯರು ಸೇರಿದಂತೆ ದರ್ಶನ್ ಫ್ಯಾನ್ಸ್ , ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರೇ ಪ್ರಚಾರ ಹೊಣೆ ಹೊತ್ತುಕೊಂಡು ಅಂತೂ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ಅಷ್ಟೇ ಅಲ್ಲ ಫ್ಯಾನ್ಸ್ ಅಂತೂ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡೆವಿಲ್ ಸಿನಿಮಾ ರಿಲೀಸ್ ದಿನವೇ ಸುಮಲತಾ ಅಂಬರೀಶ್ ಅವರು ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಹಿಂದೆ ಒಮ್ಮೆ ಅವರು ಡೆವಿಲ್ ಬಗ್ಗೆ ಕೇಳಿದಾಗ ಶುಭಾಶಯ ತಿಳಿಸಿದ್ದರು.
ಸುಮಲತಾ ಅಂಬರೀಶ್ ಪೋಸ್ಟ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡೆವಿಲ್ ತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು! ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮತ್ತು ಅಭಿಮಾನಿಗಳ ಹೃದಯಗಳಲ್ಲಿ ಗರ್ಜಿಸಲಿ! ಬ್ಲಾಕ್ಬಸ್ಟರ್ ಯಶಸ್ಸು ಇಲ್ಲಿದೆ! ಎಂದು ಡೆವಿಲ್ ಪೋಸ್ಟರ್ ಜೊತೆ ವಿಶ್ ಮಾಡಿದ್ದಾರೆ.
ರಿಲೀಸ್ ಗೂ ಮುನ್ನ ಡೆವಿಲ್ ಸಿನಿಮಾ ತಂಡದವರು ಪ್ರಚಾರ ಸರಿಯಾಗಿಯೇ ಮಾಡುತ್ತಿದ್ದಾರೆ ಎನಿಸುತ್ತದೆ. ಯಾವತ್ತೂ ನಾನು ಸಿನಿಮಾ ಪ್ರಚಾರಕ್ಕೆ ನೇರವಾಗಿ ಪಾಲ್ಗೊಂಡಿರಲ್ಲ. ಸತ್ಯ ಎನ್ನೋದು ಶಾಶ್ವತವಾಗಿ ಮುಚ್ಚಿಡಲು ಆಗಲ್ಲ. ಚಿತ್ರ ಕೂಡ ಗೆಲ್ಲಲಿ. ಅಭಿಮಾನಿಗಳು ಸಿನಿಮಾ ನೋಡೋಕೆ ಕಾತುರದಿಂದ ಕಾಯುತ್ತಿದ್ದಾರೆ. ಆ ಸಿನಿಮಾ ಖಂಡಿತವಾಗಿಯೂ ಯಶಸ್ವಿ ಆಗಬೇಕು ಎಂಬುದು ನನ್ನ ಹಾರೈಕೆ’ ಎಂದಿದ್ದರು.
ಅನ್‌ಫಾಲೋ ಮಾಡಿದ್ದ ದಾಸ
ಸುಮಲತಾ ಅಂಬರೀಷ್ ಹಾಗೂ ದರ್ಶನ್ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ದರ್ಶನ್ನ ಮಗ ಎಂದು ಸುಮಲತಾ ಪರಿಗಣಿಸಿದ್ದರು.ದರ್ಶನ್ ಜೈಲಿಗೆ ಹೋದಾಗ ಮೌನ ಕಾಯ್ದುಕೊಂಡಿದ್ದ ಸುಮಲತಾ, ದರ್ಶನ್ ಅವರು ಹೊರ ಬರುತ್ತಿದ್ದಂತೆ ಅವನು ಯಾವಾಗಲೂ ನನ್ನ ಮಗ ಎಂದಿದ್ದರು.
ನಟ ದರ್ಶನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಇಷ್ಟು ದಿನ ಕೆಲವೇ ಕೆಲವರನ್ನು ಫಾಲೋ ಮಾಡುತ್ತಾ ಇದ್ದರು. ಆ ಪೈಕಿ ಸುಮಲತಾ, ಅಭಿಷೇಕ್ ಅಂಬರೀಷ್, ಅಭಿ ಪತ್ನಿ ಅವಿವಾ, ಪುತ್ರ ವಿನೀಶ್, ಡಿ ಕಂಪನಿ ಇದ್ದವು. ಆದರೆ, ನಂತರದಲ್ಲಿ ಎಲ್ಲರನ್ನೂ ಅನ್ಫಾಲೋ ಮಾಡಿದ್ದರು. ದರ್ಶನ್ ಜೈಲಿನಲ್ಲಿ ಇದ್ದಾಗ ಸುಮಲತಾ ಅವರನ್ನು ನೋಡಲು ಹೋಗಿಲ್ಲ. ಈ ಎಲ್ಲ ಚರ್ಚೆಗಳ ಮಧ್ಯೆ ಈಗ ಸುಮಲತಾ ದಾಸ ದರ್ಶನ್‌ಗೆ ವಿಶ್ ಮಾಡಿದ್ದಾರೆ.
ಕೃಷ್ಣ – ರುಕ್ಮಿಣಿಯಾಗಿ ದರ್ಶನ್ ಮತ್ತು ರಚನಾ ರೈ ಅಭಿನಯಿಸಿದ್ದಾರೆ. ಪೊಲಿಟಿಕಲ್ ಕಹಾನಿ ನಡುವೆ ಲವ್ ಸ್ಟೋರಿ ಕೂಡ ಈ ಚಿತ್ರದಲ್ಲಿ ಇದೆ.ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ದರ್ಶನ್. ಒಬ್ಬ ಸಿಂಪಲ್ ಮ್ಯಾನ್. ಇನ್ನೊಬ್ಬ ಮನುಷ್ಯ ರೂಪದ ರಾಕ್ಷಸ. ದ್ವಿಪಾತ್ರದ ಕಾರಣದಿಂದ ಕಥೆಗೆ ಟ್ವಿಸ್ಟ್ ಇದೆ ಅಂತ ಹಂಚಿಕೊಂಡಿದ್ದಾರೆ ಫ್ಯಾನ್ಸ್.

Leave a Comment