HOME

stories

STORIES

google-news

FOLLOW

FOLLOW

JOIN

ಡಬಲ್ ರೋಲ್‌ನಲ್ಲಿ ‘ಡೆವಿಲ್’? ದರ್ಶನ್ ನಟಿಸಿರುವ ಆ ಎರಡು ಪಾತ್ರ ಯಾವುದು ಗೊತ್ತಾ?

Updated: 16-11-2025, 01.29 PM

Follow us:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿದ್ದಾರೆ. ಆ ಕೇಸ್ ಇನ್ನೂ ಟ್ರಯಲ್ ಹಂತದಲ್ಲಿದೆ. ಹೀಗಾಗಿ ‘ಡೆವಿಲ್’ ಸಿನಿಮಾ ಬಿಡುಗಡೆ ವೇಳೆಗೆ ದರ್ಶನ್‌ಗೆ ಜಾಮೀನು ಸಿಗೋದು ಅನುಮಾನ. ಹೀಗಾಗಿ ‘ಡೆವಿಲ್’ ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕ ಮಿಲನ ಪ್ರಕಾಶ್ ಡಿಸೆಂಬರ್ 12ರಂದು ಸಿನಿಮಾ ಬಿಡುಗಡೆ ಮುಂದಾಗಿದ್ದರು. ‘ಡೆವಿಲ್’ ಸಿನಿಮಾ ರಿಲೀಸ್ ಆಗುವುದಕ್ಕೆ ಹೆಚ್ಚು ಕಡಿಮೆ ಇನ್ನು ಒಂದು ತಿಂಗಳು ಉಳಿದಿವೆಯಷ್ಟೇ. ಚಿತ್ರತಂಡ ನಿಧಾನವಾಗಿ ಸಿನಿಮಾ ಪ್ರಚಾರ ಕೂಡ ಆರಂಭ ಮಾಡಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಲುಕ್, ಮ್ಯಾನರಿಸಂ ಅವರ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಸಿನಿಮಾದ ಹಾಡುಗಳು ಹಿಟ್ ಆಗಿವೆ. ದರ್ಶನ್ ಅನುಪಸ್ಥಿತಿಯಲ್ಲಿ ನಾಯಕಿ ರಚನಾ ರೈ ಪ್ರಚಾರಕ್ಕೆ ಮುಂದಾಗಿದ್ದಾರೆ.

ದರ್ಶನ್ ಜೈಲಿನಲ್ಲಿ ಇರೋದ್ರಿಂದ ಪತ್ನಿ ವಿಜಯಲಕ್ಷ್ಮಿ ಅವರೇ ‘ಡೆವಿಲ್’ ಸಿನಿಮಾ ಪ್ರಚಾರದ ರೂಪು-ರೇಷೆಗಳನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ‘ಡೆವಿಲ್’ ಸಿನಿಮಾದಲ್ಲಿ ದರ್ಶನ್ ಪಾತ್ರದ ಬಗ್ಗೆ ಇಂಟ್ರೆಸ್ಟಿಂಗ್ ಸುದ್ದಿಯೊಂದು ಓಡಾಡುತ್ತಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಮಂದಿ ದರ್ಶನ್ ಡಬಲ್ ರೋಲ್‌ನಲ್ಲಿ ನಟಿಸುತ್ತಿದ್ದಾರೆಂದು ಮಾತಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೆ, ‘ಡೆವಿಲ್’ ರೋಲ್‌ಗಳು ಯಾವುವು? ತಿಳಿಯುವುದಕ್ಕೆ ಮುಂದೆ ಓದಿ.

ಡೆವಿಲ್’ ಮೇಲೆ ಫ್ಯಾನ್ಸ್ ನಿರೀಕ್ಷೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿರೋದ್ರಿಂದ ಅವರ ಭವಿಷ್ಯದ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಚಿಂತೆ ಕಾಡುತ್ತಿದೆ. ಹೀಗಾಗಿ ‘ಡೆವಿಲ್’ ಸಿನಿಮಾ ಗೆಲ್ಲಿಸಲೇಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ‘ಕಾಟೇರ’ದಂತಹ ಮೆಗಾ ಹಿಟ್ ಸಿನಿಮಾದ ಬಳಿಕ ಅದೇ ಯಶಸ್ಸು ಮುಂದುವರೆಯುತ್ತೆ ಎಂಬ ನಿರೀಕ್ಷೆಯಿತ್ತು. ಅಷ್ಟರಲ್ಲಿ ದರ್ಶನ್ ಪರಿಸ್ಥಿತಿ ಹೀಗಾಯ್ತು. ಹೀಗಾಗಿ ‘ಡೆವಿಲ್’ ಸಿನಿಮಾವನ್ನು ಗೆಲ್ಲಿಸಲೇಬೇಕು ಅಂತ ನಿರ್ಧರಿಸಿ ನಿಂತಿದ್ದಾರೆ. ಅದಕ್ಕೆ ಸರಿಯಾಗಿ ದರ್ಶನ್ ಈ ಪಾತ್ರ ಇನ್ನಷ್ಟು ಕುತೂಹಲ ಕೆರಳಿಸಿವೆ.

ಡಬಲ್ ರೋಲ್‌ನಲ್ಲಿ ‘ಡೆವಿಲ್’?

‘ಡೆವಿಲ್’ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ಹೀಗಾಗಿ ಇದು ಅಭಿಮಾನಿಗಳಿಗೆ ಡಬಲ್ ಧಮಾಕಾ ಎಂದು ಹೇಳಲಾಗುತ್ತಿದೆ.  ಪೊಲಿಟಿಕಲ್ ಹಿನ್ನೆಲೆಯುಳ್ಳ ಕಥೆ ಇದಾಗಿದ್ದು, ದರ್ಶನ್ ಇಲ್ಲಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ನೈಜ ಘಟನೆಗಳನ್ನು ಆಧರಿಸಿ ಮಾಡಿದ ಸಿನಿಮಾ ಎಂದೂ ಹೇಳಲಾಗುತ್ತಿದೆ. ಹಾಗೇನಾದರೂ ದರ್ಶನ್ ಡಬಲ್ ರೋಲ್‌ನಲ್ಲಿ ನಟಿಸಿದ್ದು ನಿಜವೇ ಆದರೆ, ಅಭಿಮಾನಿಗಳಿಗೆ ಡಬಲ್ ಧಮಾಕಾ ಗ್ಯಾರಂಟಿ ಎನ್ನಬಹುದು.


ರಾಜಕೀಯ ಹಿನ್ನೆಲೆಯುಳ್ಳ ಕಥೆ

‘ಡೆವಿಲ್’ ರಾಜಕೀಯ ಮುಖಂಡನೊಬ್ಬನ ಕಥೆಯನ್ನು ಮಿಲನ ಪ್ರಕಾಶ್ ಹೇಳುವುದಕ್ಕೆ ಹೊರಟಿದ್ದಾರೆ ಎಂಬ ಸುದ್ಧಿನೂ ಇದೆ. ರಿಯಲ್ ಲೈಫ್ ಸನ್ನಿವೇಶಗಳನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದ್ದು, ದರ್ಶನ್ ಅಭಿಮಾನಿಗಳಿಗೆ ಇದು ಸಿಕ್ಕಾಪಟ್ಟೆ ಇಷ್ಟ ಆಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ನಿರ್ದೇಶಕ ಮಿಲನ ಪ್ರಕಾಶ್ ಇದೂವರೆಗೂ ಅಧಿಕೃತವಾಗಿ ದರ್ಶನ್ ಪಾತ್ರವನ್ನು ರಿವೀಲ್ ಮಾಡಿಲ್ಲ. ಮೇಲ್ನೋಟಕ್ಕೆ ಈ ಸಿನಿಮಾ ಫ್ಯಾನ್ಸ್‌ಗೆ ಮಸ್ತ್ ಮನರಂಜನೆ ನೀಡೋದು ಪಕ್ಕಾ.

ಇನ್ನೊಂದು ತಿಂಗಳು ಬಾಕಿ

ದರ್ಶನ್ ಸಿನಿಮಾ ರಿಲೀಸ್‌ಗೆ ಇನ್ನೊಂದು ತಿಂಗಳು ಬಾಕಿಯಿದೆ. ತೆರೆಮರೆಯಲ್ಲಿ ಸಿನಿಮಾ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇದರ ಜೊತೆಗೆ ಸಿನಿಮಾದ ಪ್ರಚಾರದಲ್ಲಿಯೂ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ‘ಡೆವಿಲ್’ ಸಿನಿಮಾ ರಿಲೀಸ್ ಮಾಡುವುದಕ್ಕೆ ಮಿಲನ ಪ್ರಕಾಶ್ ಮುಂದಾಗಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

Leave a Comment

About Us

SandalwoodSuddi — ಕನ್ನಡದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ನಮ್ಮ ಧ್ಯೇಯ ಸ್ಪಷ್ಟವಾಗಿದೆ: ಕನ್ನಡ ಓದುಗರಿಗೆ ತಾಜಾ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವುದು. ಸಿನಿಮಾದಿಂದ ರಾಜಕೀಯ, ಕ್ರೀಡೆ, ತಂತ್ರಜ್ಞಾನ, ಶಿಕ್ಷಣ, ಜೀವನಶೈಲಿ ಮತ್ತು ಮನರಂಜನೆಯವರೆಗೆ — ನಾವು ನಿಮ್ಮ ಮೊಬೈಲ್ ಮತ್ತು ವೆಬ್‌ನಲ್ಲಿ ಎಲ್ಲಾ ಕ್ಷೇತ್ರಗಳ ಇತ್ತೀಚಿನ ನವೀಕರಣಗಳನ್ನು ತಲುಪಿಸುತ್ತೇವೆ.