ಕಿಚ್ಚ ಸುದೀಪ್ ಅಭಿನಯದ ʻಮಾರ್ಕ್ʼ ಸಿನಿಮಾದಿಂದ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ ವರ್ಷ ತೆರೆಕಂಡ ʼಮ್ಯಾಕ್ಸ್ʼ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆದ ವಿಜಯ್ ಕಾರ್ತಿಕೇಯ ಅವರೇ ʼಮಾರ್ಕ್ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ರಿಲೀಸ್ ಆಗಿರುವ ʼಮಾರ್ಕ್ʼ ಸಿನಿಮಾದ ಫಸ್ಟ್ ಲುಕ್ ಟೀಸರ್‌ನಲ್ಲಿ ಸುದೀಪ್ ಮತ್ತೊಮ್ಮೆ ಪವರ್‌ಫುಲ್ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಕಿಚ್ಚ.
‘ಮಾರ್ಕ್’ಸಿನಿಮಾದ ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಸುದೀಪ್ ಅವರು ಕಪ್ಪು ಬಣ್ಣದ ಹುಡಿ ಧರಿಸಿ ಸಿಗರೇಟು ಹಿಡಿದಿರುವ ಪೋಸ್ಟರ್ ಅನ್ನು ಪೋಸ್ಟ್ನ ಜೊತೆಗೆ ಹಂಚಿಕೊಂಡಿದೆ ಚಿತ್ರತಂಡ.
ಚಿತ್ರತಂಡದಿಂದ ಟ್ವೀಟ್
‘ಮಾರ್ಕ್’ ಸಿನಿಮಾದ ಟ್ರೈಲರ್ ನಾಳೆ ಅಂದರೆ ಡಿಸೆಂಬರ್ 07ರಂದು ಬೆಳಿಗ್ಗೆ 11:58ಕ್ಕೆ ಟ್ರೈಲರ್ ಬಿಡುಗಡೆ ಆಗಲಿದೆ. ಈ ಬಗ್ಗೆ ಚಿತ್ರತಂಡ ಟ್ವೀಟ್ ಮಾಡಿದ್ದು, ‘ನಿರೀಕ್ಷೆಯ ಅವಧಿ ಕಿರಿದಾಗಿದೆ, ಇನ್ನೊಂದು ಸೂರ್ಯೋದಕ್ಕೆ ನಿರೀಕ್ಷೆಗಳು ಅಂತ್ಯವಾಗಲಿವೆ. ಮಾರ್ಕ್’ ಸಿನಿಮಾದ ಟ್ರೈಲರ್, ಆಕ್ಷನ್ ಮತ್ತು ಭಾವನೆಗಳ ಸ್ಪೋಟಕ ಅಲೆಯನ್ನೇ ತರಲಿದೆ ಎಂದಿದೆ.
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಡುಗಡೆ
. ”ಪ್ಯಾನ್ ಇಂಡಿಯಾ” ಲೆವಲ್‌ನಲ್ಲಿ ಇದೇ ಡಿಸೆಂಬರ್ 25ಕ್ಕೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಸುದೀಪ್ ಅವರ ಜೊತೆ ನವೀನ್ ಚಂದ್ರ.. ದೀಪ್ಶಿಕಾ.. ಅರ್ಚನಾ ಕೊಟ್ಟಿಗೆ.. ರೋಶಿನಿ ಪ್ರಕಾಶ್ ಹಾಗೂ ನಿಶ್ವಿಕಾ ನಾಯ್ಡು ”ಮಾರ್ಕ್” ಚಿತ್ರದ ತಾರಾಗಣದಲ್ಲಿದ್ದಾರೆ.
ಡ್ರ್ಯಾಗನ್ ಮಂಜು ಕೂಡ ಚಿತ್ರದಲ್ಲಿದ್ದಾರೆ. ಕಾಲಿವುಡ್‌ನ ಪ್ರಖ್ಯಾತ ನಿರ್ಮಾಣ ಸಂಸ್ಥೆಯಲ್ಲೊಂದಾದ ಸತ್ಯಜ್ಯೋತಿ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಒಂದೇ ದಿನದಲ್ಲಿ ನಡೆಯುವ ಕಥೆಯನ್ನು ಒಳಗೊಂಡ ʼಮ್ಯಾಕ್ಸ್ʼನಲ್ಲಿ ಸುದೀಪ್ ಮತ್ತೊಮ್ಮೆ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡು ಗೆಲುವಿನ ನಗೆ ಬೀರಿದ್ದರು. ಈ ಬಾರಿಯೂ ಯಶಸ್ಸು ಮುಂದುವರಿಯುತ್ತ ಎನ್ನುವುದನ್ನು ಕಾದು ನೋಡಬೇಕಿದೆ. ಎಸ್ಆರ್ ಗಣೇಶ್ ಬಾಬು ಸಂಕಲನ ಮಾಡಿದ್ದಾರೆ. ಸಿನಿಮಾಟೊಗ್ರಫಿ ಶೇಖರ್ ಚಂದ್ರ ಅವರದ್ದಾಗಿದೆ. ‘ಮ್ಯಾಕ್ಸ್’ಗೂ ಇವರೇ ಸಿನಿಮಾಟೊಗ್ರಫಿ ಮಾಡಿದ್ದರು. ‘ಮಾರ್ಕ್’ ಸಿನಿಮಾನಲ್ಲಿ ಸುದೀಪ್ ಜೊತೆಗೆ ನಿಶ್ವಿಕಾ ನಾಯ್ಡು, ರೋಹಿಣಿ ಪ್ರಕಾಶ್ ನಟಿಸಿದ್ದಾರೆ.

Leave a Comment