HOME

stories

STORIES

google-news

FOLLOW

FOLLOW

JOIN

ಹೇಗಿದೆ ಸುದೀಪ್‌ ಪುತ್ರಿ ಸಾನ್ವಿ ಹಾಡಿದ ʻಮಸ್ತ್‌ ಮಲೈಕಾʼ ಸಾಂಗ್?‌

Updated: 15-12-2025, 04.36 PM

Follow us:

ಕಿಚ್ಚ ಸುದೀಪ್‌ ಅವರ ಮಾರ್ಕ್‌ ಸಿನಿಮಾ ಬಿಡುಗಡೆಗೆ ಇನ್ನು 10 ದಿನಗಳಷ್ಟೇ ಬಾಕಿ ಇವೆ. ಈ ಮಧ್ಯೆ ಚಿತ್ರದ ಹೊಸ ಹಾಡೊಂದು ರಿಲೀಸ್‌ ಆಗಿದೆ. ʻಮಸ್ತ್‌ ಮಲೈಕಾʼ ಹೆಸರಿನ ಈ ಹಾಡನ್ನು ಹಾಡಿರುವುದು ಕಿಚ್ಚ ಸುದೀಪ್‌ ಅವರ ಮಗಳು ಸಾನ್ವಿ ಎಂಬುದು ವಿಶೇಷ. ಕನ್ನಡದಲ್ಲಿ ಇದು ಅವರ ಮೊದಲ ಹಾಡಾಗಿದ್ದು, ಅಪ್ಪನ ಸಿನಿಮಾದ ಮೂಲಕವೇ ಗಾಯಕಿಯಾಗಿ ಎಂಟ್ರಿ ನೀಡಿದ್ದಾರೆ ಸಾನ್ವಿ.

ಹೇಗಿದೆ ಮಸ್ತ್‌ ಮಲೈಕಾ ಹಾಡು?
ಮಾರ್ಕ್‌ ಚಿತ್ರದ ಸ್ಪೆಷಲ್‌ ಸಾಂಗ್‌ ಇದಾಗಿದ್ದು, ಕನ್ನಡ ನಟಿ ನಿಶ್ವಿಕಾ ನಾಯ್ಡು ಅವರು ಈ ಹಾಡಿನಲ್ಲಿ ಸುದೀಪ್‌ ಅವರ ಜೊತೆ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಹಿತ್ತಲಕ ಕರೀಬ್ಯಾಡ ಮಾವ ಸಾಂಗ್‌ ಮೂಲಕ ತಮ್ಮ ಡ್ಯಾನ್ಸಿಂಗ್‌ ಪ್ರತಿಭೆಯನ್ನು ತೋರಿಸಿದ್ದ ನಟಿ ನಿಶ್ವಿಕಾಗೆ ಮಾರ್ಕ್‌ ಮತ್ತೊಂದು ದೊಡ್ಡ ಅವಕಾಶವಾಗಿದೆ. ಮಸ್ತ್‌ ಮಲೈಕಾ ಹಾಡಿನಲ್ಲಿ ಬಿಂದಾಸ್‌ ಆಗಿಯೇ ಅವರು ಸುದೀಪ್‌ ಜೊತೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಸಾನ್ವಿ ಅವರ ಧ್ವನಿ ಉತ್ತಮವಾಗಿ ಹೊಂದಿಕೆ ಆಗಿದ್ದು, ಕೇಳುಗರಿಗೆ ಖುಷಿ ನೀಡುತ್ತದೆ. ಸಾನ್ವಿ ಜೊತೆಗೆ ನಕಾಶ್ ಅಜೀಜ್ ಧ್ವನಿಗೂಡಿಸಿದ್ದಾರೆ.

ಬೇರೆ ಭಾಷೆಯಲ್ಲೂ ಮೂಡಿಬಂದಿದೆ ಈ ಸಾಂಗ್‌
ಮಾರ್ಕ್‌ ಸಿನಿಮಾವು ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗಿನಲ್ಲೂ ಮೂಡಿಬಂದಿದ್ದು, ಆ ಭಾಷೆಗಳಲ್ಲಿ ಈ ಹಾಡನ್ನು ಸಾನ್ವಿ ಹಾಡಿಲ್ಲ. ತಮಿಳು ವರ್ಷನ್‌ ಅನ್ನು ದೀಪ್ತಿ ಸುರೇಶ್‌ ಹಾಡಿದ್ದರೆ, ನಕಾಶ್ ಅಜೀಜ್ ಬದಲು ದೀಪಕ್‌ ಬ್ಲೂ ಹಾಡಿದ್ದಾರೆ. ತೆಲುಗು ವರ್ಷನ್‌ ಅನ್ನು ಕನ್ನಡದ ಅನಿರುದ್ಧ್‌ ಶಾಸ್ತ್ರಿ ಮತ್ತು ಹರ್ಷಿ‌ಕಾ ದೇವಂತ್ ಹಾಡಿರುವುದು ವಿಶೇಷ. ಅಜನೀಶ್‌ ಲೋಕನಾಥ್‌ ಕಂಪೋಸ್‌ ಮಾಡಿರುವ ಈ ಹಾಡನ್ನು ಕನ್ನಡದಲ್ಲಿ ಅನೂಪ್‌ ಭಂಡಾರಿ ಬರೆದಿದ್ದಾರೆ.

ಸುದೀಪ್‌ ಹೇಳಿದ್ದೇನು?
“ನನ್ನೆಲ್ಲಾ ಬಾದ್‌ಷಾಗಳಿಗೆ… ನಿಮ್ಮ ಕುಟುಂಬದ ಸದಸ್ಯರಾದ ಸಾನ್ವಿ ಅವರ ಮೊದಲ ಹಾಡನ್ನು ನಿಮಗೆ ಅರ್ಪಿಸುತ್ತಿರುವುದು ನನಗೆ ನಿಜಕ್ಕೂ ಹೆಮ್ಮೆಯ ವಿಷಯ… ಇದು ನಮ್ಮ ಮಾರ್ಕ್‌ ಟೀಮ್‌ ಕಡೆಯಿಂದ ನಿಮಗಾಗಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಆರಂಭಿಕ ಉಡುಗೊರೆ. ಪ್ರೀತಿ, ಉತ್ಸಾಹ ಮತ್ತು ಪರಿಶುದ್ಧ ಸಂಭ್ರಮದಿಂದ ಮಾಡಲಾದ ಮಾರ್ಕ್ ಚಿತ್ರದ ಈ ಸಂಪೂರ್ಣ ಹಾಡಿನ ವಿಡಿಯೋವನ್ನು ಆನಂದಿಸಿ”‌ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ಈ ಹಿಂದೆಯೂ ಹಾಡಿದ್ದ ಸಾನ್ವಿ
ಸಾನ್ವಿ ಅವರಿಗೆ ಗಾಯನದ ಮೇಲೆ ಆರಂಭದಿಂದಲೂ ವಿಪರೀತ ಆಸಕ್ತಿ. ಈ ಹಿಂದೆ ಘೋಷಣೆ ಆಗಿದ್ದ ಸಂಚಿತ್‌ ಸಂಜೀವ್‌ ಅವರ ಜಿಮ್ಮಿ ಸಿನಿಮಾದ ಟೈಟಲ್ ಟೀಸರ್‌ಗೆ ಸಾನ್ವಿ ಧ್ವನಿಯಾಗಿದ್ದರು. ಈ ವರ್ಷ ತೆರೆಕಂಡ ತೆಲುಗಿನ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಚಿತ್ರ ‘ಹಿಟ್ – 3ʼ ಸಿನಿಮಾದ Poratame 3.0 ಅನ್ನೋ ಥೀಮ್‌ ಸಾಂಗ್‌ಗೆ ಸಾನ್ವಿ ನೀಡಿದ್ದರು. ಆ ವಿಚಾರವನ್ನು ನಟ ನಾನಿ ಅವರೇ ಹೇಳಿಕೊಂಡಿದ್ದರು.

ಅಂದಹಾಗೆ, ʻಮಾರ್ಕ್ʼ‌ ಚಿತ್ರವು ಡಿಸೆಂಬರ್‌ 25ರಂದು ತೆರೆಗೆ ಬರುತ್ತಿದ್ದು, ದೊಡ್ಡ ತಾರಾಬಳಗವನ್ನೇ ಈ ಚಿತ್ರವು ಹೊಂದಿದೆ. ಸುದೀಪ್, ಶೈನ್ ಟಾಮ್ ಚಾಕೊ, ನವೀನ್ ಚಂದ್ರ, ವಿಕ್ರಾಂತ್, ಯೋಗಿ ಬಾಬು, ಗುರು ಸೋಮಸುಂದರಂ, ನಿಶ್ವಿಕಾ ನಾಯ್ಡು, ರೋಶ್ನಿ ಪ್ರಕಾಶ್, ದೀಪ್ಶಿಖಾ, ಗೋಪಾಲ್‌ ಕೃಷ್ಣ ದೇಶಪಾಂಡೆ, ಮಹಾಂತೇಶ್‌ ಹಿರೇಮಠ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Leave a Comment

About Us

SandalwoodSuddi — ಕನ್ನಡದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ನಮ್ಮ ಧ್ಯೇಯ ಸ್ಪಷ್ಟವಾಗಿದೆ: ಕನ್ನಡ ಓದುಗರಿಗೆ ತಾಜಾ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವುದು. ಸಿನಿಮಾದಿಂದ ರಾಜಕೀಯ, ಕ್ರೀಡೆ, ತಂತ್ರಜ್ಞಾನ, ಶಿಕ್ಷಣ, ಜೀವನಶೈಲಿ ಮತ್ತು ಮನರಂಜನೆಯವರೆಗೆ — ನಾವು ನಿಮ್ಮ ಮೊಬೈಲ್ ಮತ್ತು ವೆಬ್‌ನಲ್ಲಿ ಎಲ್ಲಾ ಕ್ಷೇತ್ರಗಳ ಇತ್ತೀಚಿನ ನವೀಕರಣಗಳನ್ನು ತಲುಪಿಸುತ್ತೇವೆ.