HOME

stories

STORIES

google-news

FOLLOW

FOLLOW

JOIN

ಈ ವಾರ ಬಿಡುಗಡೆಗೆ ಸಜ್ಜಾಗಿರುವ ಇಂಟ್ರೆಸ್ಟಿಂಗ್ ಕನ್ನಡ ಚಿತ್ರಗಳು: ಇಲ್ಲಿದೆ ಲಿಸ್ಟ್

Updated: 19-11-2025, 05.28 PM

Follow us:



ಕಳೆದ ಶುಕ್ರವಾರ ತೆರೆಕಂಡಂತಹ ಯಾವ ಕನ್ನಡ ಸಿನಿಮಾವೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾ ಕೊಂಚಮಟ್ಟಿಗೆ ನಿರೀಕ್ಷೆ ಮೂಡಿಸಿತ್ತು. ಆದರೆ ಅದು ಕೂಡ ಕೈ ಹಿಡಿಯಲಿಲ್ಲ. ಇದೆಲ್ಲದರ ನಡುವೆ ಮತ್ತೊಂದು ವೀಕೆಂಡ್ ಬರ್ತಿದೆ. ಈ ವಾರ ಒಂದಷ್ಟು ಕನ್ನಡ ಚಿತ್ರಗಳು ತೆರೆಗೆ ಬರ್ತಿವೆ.
‘ಕಾಂತಾರ- 1’ ಬ್ಲಾಕ್‌ಬಸ್ಟರ್ ಹಿಟ್ ಬಳಿಕ ಕನ್ನಡದ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಮುಂದಿನ ತಿಂಗಳು ‘ಡೆವಿಲ್’, ’45’ ಹಾಗೂ ‘ಮಾರ್ಕ್’ ಚಿತ್ರಗಳು ಬಿಡುಗಡೆಗೆ ಅಣಿಯಾಗಿವೆ. ಅದಕ್ಕೂ ಮುನ್ನ ಇನ್ನೆರಡು ವಾರ ಕನ್ನಡದ ಒಂದಷ್ಟು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ಈ ಶುಕ್ರವಾರ(ನವೆಂಬರ್ 21) ಐದಾರು ಕನ್ನಡ ಸಿನಿಮಾಗಳು ತೆರೆಗೆ ಬರ್ತಿವೆ. ಎಲ್ಲವೂ ಒಂದಕ್ಕಿಂತ ಒಂದು ಇಂಟ್ರೆಸ್ಟಿಂಗ್ ಆಗಿದೆ. ಅವುಗಳು ಯಾವುದೆಂದು ತಿಳಿಯೋಣ.
1. ಮಾರುತ
ಎಸ್. ನಾರಾಯಣ್ ನಿರ್ದೇಶನದಲ್ಲಿ ಶ್ರೇಯಸ್ ಮಂಜು ಹಾಗೂ ಬೃಂದಾ ಆಚಾರ್ಯ ನಟನೆಯ ‘ಮಾರುತ’ ಸಿನಿಮಾ ಈ ವಾರ ತೆರೆಗೆ ಬರಲಿದೆೆ. ದುನಿಯಾ ವಿಜಯ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷ. ಕೆ. ಮಂಜು ಹಾಗೂ ರಮೇಶ್ ಯಾದವ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು, ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ನಿಶ್ವಿಕಾ ನಾಯ್ಡು ಕೂಡ ತಾರಾಗಣದಲ್ಲಿದ್ದಾರೆ.
2. ಫುಲ್ ಮೀಲ್ಸ್
ಲಿಖಿತ್ ಶೆಟ್ಟಿ ಹಾಗೂ ಖುಷಿ ರವಿ ನಟನೆಯ ‘ಫುಲ್ ಮೀಲ್ಸ್’ ಸಿನಿಮಾ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಲು ಸಜ್ಜಾಗಿದೆ. ಎನ್. ವಿನಾಯಕ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ತೇಜಸ್ವಿನಿ ಶರ್ಮಾ, ರಂಗಾಯಣ ರಘು, ಸೂರಜ್ ಲೋಕ್ರೆ, ವಿಜಯ್ ಚೆಂಡೂರ್, ರಾಜೇಶ್ ನಟರಂಗ, ಚಂದ್ರಕಲಾ ಮೋಹನ್, ರವಿಶಂಕರ್ ಗೌಡ, ಸುಜಾತಾ ಶಾಸ್ತ್ರಿ, ಹೊನ್ನವಳ್ಳಿ ಕೃಷ್ಣ, ಮೂಗು ಸುರೇಶ್ ಸೇರಿ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ.
3. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ
ಇತ್ತೀಚೆಗೆ ದೀಕ್ಷಿತ್ ಶೆಟ್ಟಿ ನಟನೆಯ ‘ದಿ ಗರ್ಲ್ಫ್ರೆಂಡ್’ ಸಿನಿಮಾ ತೆರೆಗೆ ಬಂದಿತ್ತು. ಈ ವಾರ ದೀಕ್ಷಿತ್ ಅಭಿನಯದ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರ ಪ್ರೇಕ್ಷಕರ ಮುಂದೆ ಬರ್ತಿದೆ. ಬೃಂದಾ ಆಚಾರ್ಯ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಅಭಿಷೇಕ್ ಎಂ. ಕಥೆ ಚಿತ್ರಕತೆ ಬರೆದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜುಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದ್ದ ಗೋಪಾಲಕೃಷ್ಣ ದೇಶಪಾಂಡೆ, ಸಾಧು ಕೋಕಿಲ, ಶ್ರುತಿ ಹರಿಹರನ್ ಕೂಡ ನಟಿಸಿದ್ದಾರೆ.
4. ಕಂಗ್ರಾಜುಲೇಷನ್ ಬ್ರದರ್
ಕಲ್ಲೂರ್ ಸಿನಿಮಾಸ್ ಹಾಗೂ ಪೆನ್ ಅಂಡ್ ಪೇಪರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಕಲ್ಲೂರ್ ನಿರ್ಮಾಣದ ಕಾಮಿಡಿ ಎಂಟರ್‌ಟೈನರ್ ‘ಕಂಗ್ರಾಜುಲೇಷನ್ ಬ್ರದರ್’ ಚಿತ್ರಕ್ಕೂ ಈ ವಾರ ಬಿಡುಗಡೆ ಭಾಗ್ಯ. ಹರಿ ಸಂತೋಷ್ ಕಥೆ ಬರೆದಿದ್ದು ಪ್ರತಾಪ್ ಗಂಧರ್ವ ಆಕ್ಷನ್ ಕಟ್ ಹೇಳಿದ್ದಾರೆ. ರಕ್ಷಿತ್ ನಾಗ್, ಸಂಜನಾ ದಾಸ್ ಹಾಗೂ ಅನುಷಾ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
5. ರಾಧೇಯ ‘
ಯುದ್ಧಕಾಂಡ-2′ ಸಿನಿಮಾ ನಿರ್ಮಿಸಿ ನಟಿಸಿ ಗೆದ್ದಿದ್ದ ಅಜಯ್ ರಾವ್ ಈ ವಾರ ‘ರಾಧೇಯ’ನಾಗಿ ಬರ್ತಿದ್ದಾರೆ. ಸೋನಲ್ ಮಂಥೆರೋ, ಧನ್ಯಾ ಬಾಲಕೃಷ್ಣನ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಲವ್, ಆಕ್ಷನ್, ಸಸ್ಪೆನ್ಸ್ ಅಂಶಗಳನ್ನು ಸೇರಿಸಿ ವೇದಗುರು ಎಂಬುವವರು ‘ರಾಧೇಯ’ ಚಿತ್ರ ಕಟ್ಟಿಕೊಟ್ಟಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ.
6. ದಿ ಟಾಸ್ಕ್
ರಾಘು ಶಿವಮೊಗ್ಗ ನಿರ್ದೇಶನದಲ್ಲಿ ಜಯ ಸೂರ್ಯ ಆರ್ ಆಜಾದ್, ಸಾಗರ್ ರಾಮ್ ನಟನೆಯ ‘ದಿ ಟಾಸ್ಕ್’ ಸಿನಿಮಾ ಕೂಡ ಈ ವಾರ ತೆರೆಗಪ್ಪಳಿಸುತ್ತಿದೆ. ವಿಜಯ್ ಕುಮಾರ್, ರಾಮಣ್ಣ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಗೋಪಾಲ ಕೃಷ್ಣ ದೇಶಪಾಂಡೆ, ಸಂಗೀತ ಭಟ್, ಸಂಪತ್ ಮೈತ್ರೇಯ, ತನಿಶಾ ಕುಪ್ಪಂಡ, ರಘು ಶಿವಮೊಗ್ಗ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಶ್ರೀಮುರಳಿ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಹೊಸಬರ ತಂಡಕ್ಕೆ ಶುಭ ಕೋರಿದ್ದರು.

Leave a Comment

About Us

SandalwoodSuddi — ಕನ್ನಡದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ನಮ್ಮ ಧ್ಯೇಯ ಸ್ಪಷ್ಟವಾಗಿದೆ: ಕನ್ನಡ ಓದುಗರಿಗೆ ತಾಜಾ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವುದು. ಸಿನಿಮಾದಿಂದ ರಾಜಕೀಯ, ಕ್ರೀಡೆ, ತಂತ್ರಜ್ಞಾನ, ಶಿಕ್ಷಣ, ಜೀವನಶೈಲಿ ಮತ್ತು ಮನರಂಜನೆಯವರೆಗೆ — ನಾವು ನಿಮ್ಮ ಮೊಬೈಲ್ ಮತ್ತು ವೆಬ್‌ನಲ್ಲಿ ಎಲ್ಲಾ ಕ್ಷೇತ್ರಗಳ ಇತ್ತೀಚಿನ ನವೀಕರಣಗಳನ್ನು ತಲುಪಿಸುತ್ತೇವೆ.