ಗಾಯನ ಕ್ಷೇತ್ರಕ್ಕೆ ಬರಬೇಕು ಎಂದುಕೊಳ್ಳುವವರಿಗೆ ಜೀ ವಾಹಿನಿಯ ಸರಿಗಮಪ ಶೋ ದೊಡ್ಡ ವೇದಿಕೆಯಾಗಿದೆ. ಈ ಶೋಗೆ ಬಂದು ಹಾಡಿ ಗೆದ್ದವರು ಮುಂದೆ ಸಿನಿಮಾಗಳಲ್ಲಿ ಹಾಡಲು ಅವಕಾಶ ಗಿಟ್ಟಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ.
ಜೀ ಕನ್ನಡ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 19ರಲ್ಲಿ ಚಿಕ್ಕಮಗಳೂರಿನ ಶಿವಾನಿ ನವೀನ್ ರನ್ನರ್ ಅಪ್ ಆಗಿದ್ದರು. ಈಗ ಈಕೆ ತಮಿಳು ಸರಿಗಮಪ ಸೀನಿಯರ್ಸ್ ಶೋನಲ್ಲಿ ತಮ್ಮ ಗಾಯನದಿಂದ ಮೋಡಿ ಮಾಡುತ್ತಿದ್ದಾರೆ. 5ನೇ ಸೀಸನ್ ಆಡಿಷನ್ ವೇಳೆಯೇ ‘ಸೋಜುಗದ ಸೂಜು ಮಲ್ಲಿಗೆ’ ಹಾಡು ಹಾಡಿ ಶಿವಾನಿ ಕಮಾಲ್ ಮಾಡಿದ್ದರು. ತಮಿಳು ವೇದಿಕೆಯಲ್ಲಿ ಆಕೆಯ ಕನ್ನಡ ಗಾಯನಕ್ಕೆ ತೀರ್ಪುಗಾರರು ಫಿದಾ ಆಗಿದ್ದರು.
ಫಿನಾಲೆ ರೀಚ್ ಆದ ಶಿವಾನಿ
ಚಿಕ್ಕಮಗಳೂರು ಮೂಲದ ಪ್ರತಿಭಾನ್ವಿತ ಗಾಯಕಿ ಶಿವಾನಿ ನವೀನ್ ಅವರು ಈಗ ತಮಿಳಿನ ‘ಸರಿಗಮಪ’ ಶೋನಲ್ಲಿ ಎಲ್ಲರ ಮೋಡಿ ಮಾಡುತ್ತಲೇ 5ನೇ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದಾರೆ. ಈ ಬಾರಿಯ ಫಿನಾಲೆಯ ಗೆಲ್ಲುವ ಸ್ಪರ್ಧಿಗಳ ಸಾಲಿನಲ್ಲಿ ಶಿವಾನಿ ಕೂಡ ಮುಂಚೂಣಿಯಲ್ಲಿದ್ದಾರೆ. ಒಂದು ವೇಳೆ ಶಿವಾನಿ ಗೆದ್ದುಬಿಟ್ಟರೆ, ಅದು ದೊಡ್ಡ ದಾಖಲೆಯಾಗಲಿದೆ.
ಕಂಠಸಿರಿಯಿಂದ ಮೋಡಿ ಮಾಡಿರುವ ಪ್ರತಿಭೆ
‘ಸರಿಗಮಪ ಸೀನಿಯರ್ಸ್ ಸೀಸನ್ 5’ ಶೋನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಶಿವಾನಿ ಆರಂಭದಿಂದಲೂ ಅಲ್ಲಿನ ವೀಕ್ಷಕರ ಗಮನಸೆಳೆದುಕೊಂಡೇ ಬಂದರು. ಪ್ರತಿಬಾರಿಯೂ ತಮ್ಮ ಕಂಠಸಿರಿಯಿಂದ ಸಂಗೀತಪ್ರಿಯರ ಮನಗೆದ್ದರು. ‘ಸರಿಗಮಪ ಸೀನಿಯರ್ಸ್ ಸೀಸನ್ 5’ ಶೋ ಕಳೆದ ಮೇ 24ರಿಂದ ಆರಂಭವಾಗಿದ್ದು, ಮೆಗಾ ಆಡಿಷನ್ ರೌಂಡ್ನಲ್ಲಿ ತಮಿಳಿನ ‘ವಾಗೈ ಸೂಡ ವಾ’ ಸಿನಿಮಾದ ‘ಪೋರಾನೇ ಪೋರಾನೇ’ ಹಾಡನ್ನು ಶಿವಾನಿ ಹಾಡಿದ್ದರು. ಅಂದು ಆ ಹಾಡಿಗೆ ಜಡ್ಜ್ಗಳಾದ ಶ್ರೀನಿವಾಸ್, ಶ್ವೇತಾ ಮೋಹನ್, ಟಿ. ರಾಜೇಂದರ್ ತಲೆದೂಗಿದ್ದರು. ನಂತರ ಅದೇ ವೇದಿಕೆಯಲ್ಲಿ ‘ಸೋಜುಗದ ಸೂಜು ಮಲ್ಲಿಗೆ’ ಹಾಡನ್ನು ಹಾಡುವಂತೆ ಶಿವಾನಿಗೆ ವಿಜಯ್ ಪ್ರಕಾಶ್ ಸೂಚಿಸಿದ್ದರು. ಶಿವಾನಿ ಕಂಠಸಿರಿಯನ್ನು ಕೇಳಿ ರೋಮಾಂಚಿತಗೊಂಡ ಜಡ್ಜ್ಗಳು ಶಿವಾನಿ ಅವರನ್ನು ಸೆಲೆಕ್ಟ್ ಮಾಡಿದ್ದರು. ಅಂದು ಶುರುವಾದ ಸರಿಗಮಪ ಸೀನಿಯರ್ಸ್ ಸೀಸನ್ 5′ ಜರ್ನಿ ಈಗ ಫಿನಾಲೆ ತನಕ ಬಂದು ನಿಂತಿದೆ.
ಕನ್ನಡಿಗರ ಹಾರೈಕೆ
ಇದೀಗ ತಮಿಳು ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಫಿನಾಲೆ ತಲುಪಿರುವ ಶಿವಾನಿಗೆ ಕನ್ನಡಿಗರು ಶುಭ ಹಾರೈಸಿದ್ದಾರೆ. ಫಿನಾಲೆಯಲ್ಲಿ ಗೆಲ್ಲಲಿ ಎಂದು ಆಶೀರ್ವದಿಸಿದ್ದಾರೆ. ಅಂದಹಾಗೆ, ಶಿವಾನಿ ಅವರ ಜೊತೆಗೆ ಇತರೆ ಸ್ಪರ್ಧಿಗಳಾದ ಸುಶಾಂತಿಕಾ, ಶ್ರೀಹರಿ, ಸಪೇಶನ್, ಸೆಂತಮಿಲನ್, ಪವಿತ್ರಾ ಸೇರಿ ಒಟ್ಟು ಆರು ಮಂದಿ ಸ್ಪರ್ಧಿಗಳು ‘ಸರಿಗಮಪ ಸೀನಿಯರ್ಸ್ ಸೀಸನ್ 5’ ಶೋನಲ್ಲಿ ಫಿನಾಲೆ ತಲುಪಿದ್ದಾರೆ. ನವೆಂಬರ್ 23ರಂದು ಈ ಫಿನಾಲೆ ನಡೆಯಲಿದ್ದು, ಅಂದು ಯಾರಿಗೆ ವಿನ್ನರ್ ಪಟ್ಟ ಸಿಗಲಿದೆ ಎಂದು ಕಾದುನೋಡಬೇಕು.
ಕನ್ನಡಿಗರ ಹಾರೈಕೆ
ಇದೀಗ ತಮಿಳು ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಫಿನಾಲೆ ತಲುಪಿರುವ ಶಿವಾನಿಗೆ ಕನ್ನಡಿಗರು ಶುಭ ಹಾರೈಸಿದ್ದಾರೆ. ಫಿನಾಲೆಯಲ್ಲಿ ಗೆಲ್ಲಲಿ ಎಂದು ಆಶೀರ್ವದಿಸಿದ್ದಾರೆ. ಅಂದಹಾಗೆ, ಶಿವಾನಿ ಅವರ ಜೊತೆಗೆ ಇತರೆ ಸ್ಪರ್ಧಿಗಳಾದ ಸುಶಾಂತಿಕಾ, ಶ್ರೀಹರಿ, ಸಪೇಶನ್, ಸೆಂತಮಿಲನ್, ಪವಿತ್ರಾ ಸೇರಿ ಒಟ್ಟು ಆರು ಮಂದಿ ಸ್ಪರ್ಧಿಗಳು ‘ಸರಿಗಮಪ ಸೀನಿಯರ್ಸ್ ಸೀಸನ್ 5’ ಶೋನಲ್ಲಿ ಫಿನಾಲೆ ತಲುಪಿದ್ದಾರೆ. ನವೆಂಬರ್ 23ರಂದು ಈ ಫಿನಾಲೆ ನಡೆಯಲಿದ್ದು, ಅಂದು ಯಾರಿಗೆ ವಿನ್ನರ್ ಪಟ್ಟ ಸಿಗಲಿದೆ ಎಂದು ಕಾದುನೋಡಬೇಕು.
ಶಿವಾನಿ ತಂದೆ ನವೀನ್ ಆರ್ಕೇಸ್ಟ್ರಾ ಹಾಡುಗಾರರು. ತಾಯಿಗೂ ಕಲೆಯಲ್ಲಿ ಆಸಕ್ತಿಯಿದೆ. ಹಾಗಾಗಿ ಮಗಳು ಗಾಯನದತ್ತ ಮುಖ ಮಾಡಿದ್ದಳು. ಸರಿಗಮಪ ಕನ್ನಡ ಲಿಟಲ್ ಚಾಂಪ್ಸ್ ವೇದಿಕೆಯಲ್ಲಿ ಅದ್ಭುತವಾಗಿ ಹಾಡಿ ಫಿನಾಲೆ ತಲುಪಿದ್ದರು. ಕೊನೆ ಹಂತದಲ್ಲಿ ರನ್ನರ್ ಅಪ್ ಆಗಿದ್ದರು.
ಅಂದಹಾಗೆ ಶಿವಾನಿ ತಾಯಿ ತಮಿಳುನಾಡು ಮೂಲದವರು. ಹಾಗಾಗಿ ಶಿವಾನಿಗೆ ಮನೆಯಲ್ಲಿ ತಮಿಳು ಸಿನಿಮಾ ನೋಡುವುದು, ಹಾಡುವುದು ಕರಗತವಾಗಿದೆ. ಹಾಗಾಗಿ ತಮಿಳು ಶೋನಲ್ಲಿ ಅವಕಾಶ ಸಿಕ್ಕಿ ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Leave a Comment