ಕನ್ನಡದಲ್ಲಿ ಪ್ರತಿ ವಾರ ಹೊಸ ಹೊಸ ಸಿನಿಮಾಗಳು ತೆರೆ ಕಾಣುತ್ತವೆ. ಈ ವಾರ ಕೂಡ ಹಲವು ಕನಸುಗಳನನು ಹೊತ್ತಿಕೊಂಡು, ಪ್ರೇಕ್ಷಕರ ಬೆಂಬಲವನ್ನು ಕೋರಿಕೊಂಡು ಹೊಸ ಹೊಸ ಸಿನಿಮಾಗಳು ರಿಲೀಸ್ ಆಗಿವೆ.
ರಿಲೀಸ್ ಗಿರುವ ಸಿನಿಮಾಗಳ ಪೈಕಿ ಅನೀಶ್ ತೇಜೇಶ್ವರ್ ಅವರ ಲವ್ ಒಟಿಪಿ ಕೂಡ ಒಂದು. ಕನ್ನಡದಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಅನೀಶ್ ಅವರ ಹೊಸ ಸಿನಿಮಾ ‘ಲವ್ ಒಟಿಪಿ’ ಇದೇ ವಾರ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿವೆ. ಪ್ರೇಮಕತೆಯುಳ್ಳ ಈ ಸಿನಿಮಾವನ್ನು ಲವ-ಲವಿಕೆಯಿಂದ ನಿರ್ದೇಶಕರು ತೆರೆಗೆ ತಂದಿದ್ದಾರೆ. ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ವಿಮರ್ಶೆಗಳು ಬಂದ ಹೊರತಾಗಿಯೂ ಚಿತ್ರಮಂದಿರಗಳಿಗೆ ಜನ ಬಂದಿಲ್ಲ. ಇದು ನಟ ಅನೀಶ್ ಅವರಿಗೆ ಬೇಸರ ತರಿಸಿದ್ದು, ಕಣ್ಣೀರು ಹಾಕುತ್ತಾ ವಿಡಿಯೋ ಒಂದನ್ನು ಹಂಚಿಕೊAಡಿದ್ದಾರೆ.
‘ನನ್ನ ಹದಿನಾರು ವರ್ಷದ ನಟನಾ ವೃತ್ತಿ ಜೀವನದಲ್ಲಿ ಇಷ್ಟು ಒಳ್ಳೆಯ ವಿಮರ್ಶೆಗಳು ನನ್ನ ಇನ್ಯಾವ ಸಿನಿಮಾಕ್ಕೂ ಸಿಕ್ಕಿರಲಿಲ್ಲ. ಸಿನಿಮಾ ನೋಡಿದವರೆಲ್ಲ ಬ್ಲಾಕ್ ಬಸ್ಟರ್ ವಿಮರ್ಶೆಗಳನ್ನೇ ನೀಡಿದ್ದಾರೆ. ವಿಮರ್ಶೆಗಳನ್ನು ನೋಡಿ ಒಂದೊಳ್ಳೆ ಸಿನಿಮಾ ಕೊಟ್ಟೆವು ಎಂಬ ನೆಮ್ಮದಿಯಲ್ಲಿ ಇದ್ದೆ. ಆದರೆ ಇಂದು (ನವೆಂಬರ್ 15) ಬೆಳಿಗ್ಗೆ ಕಲೆಕ್ಷನ್ಗಳನ್ನು ನೋಡಿದಾಗ ಬಹಳ ಬೇಸರ ಆಯ್ತು. ನಾನು ಚಿತ್ರರಂಗದಲ್ಲಿ ಇರಬೇಕಾ ಬೇಡವಾ ಎಂಬ ಪ್ರಶ್ನೆಗಳು ನನಗೆ ಹುಟ್ಟಿಕೊಂಡಿವೆ’ ಎಂದು ಭಾವುಕರಾಗಿದ್ದಾರೆ ನಟ.
‘ಸಿನಿಮಾ ರಂಗದಲ್ಲಿ ನಾನು ಇರಬೇಕಾ ಬೇಡವಾ ಎನಿಸಿತು. ನನ್ನಿಂದ ಪ್ರೇಕ್ಷಕರನ್ನು ಸೆಳೆಯಲು ಆಗುತ್ತಿಲ್ಲವಾ ಅನಿಸಲು ಶುರುವಾಗಿದೆ. ಸಿನಿಮಾಗಳಲ್ಲಿ ನಟಿಸುವುದು ನಿಲ್ಲಿಸಿಬಿಡಬೇಕಾ ಎನಿಸಿದೆ. ಏಕೆಂದರೆ ಎಂಥಹಾ ಒಳ್ಳೆಯ ಸಿನಿಮಾ ಮಾಡಿ, ಅದಕ್ಕೆ ಬಹಳ ಒಳ್ಳೆಯ ವಿಮರ್ಶೆಗಳು ಬಂದಿದ್ದರೂ ಸಹ ಜನರನ್ನು ರೀಚ್ ಆಗಲು ಆಗುತ್ತಿಲ್ಲ. ಸಿನಿಮಾ ನೋಡಿದ ಪತ್ರಕರ್ತ ಮಿತ್ರರು ಕರೆ ಮಾಡಿ ಖುಷಿ ವ್ಯಕ್ತಪಡಿಸಿದರು. ಆದರೆ ಜನ ಬರುತ್ತಿಲ್ಲ ಎಂಬುದು ಅವರಿಗೇ ಶಾಕ್ ಆಗಿದೆ’ ಎಂದಿದ್ದಾರೆ ಅನೀಶ್.
“ಶನಿವಾರ ಮತ್ತು ಭಾನುವಾರ ಪ್ರೇಕ್ಷಕರು ಬಂದು ನನಗೆ, ಕೈಹಿಡಿದರೆ ಮುಂದಿನ ದಾರಿ. ಇಲ್ಲವಾದರೆ ನನ್ನ ಸಿನಿಮಾ ಪ್ರಯತ್ನವನ್ನ ನಿಲ್ಲಿಸುತ್ತೇನೆ. ತುಂಬಾ ದುಃಖದಿಂದ ಈ ವಿಚಾರವನ್ನು ಹೇಳುತ್ತಿದ್ದೇನೆ. ಸಿಂಪತಿಗಾಗಿ ಈ ಕಣ್ಣೀರು ಹಾಕುತ್ತಿಲ್ಲ. ಇದು ಗಿಮಿಕ್ಕೂ ಕೂಡ ಅಲ್ಲ.. ಇದು ನನ್ನ ಅಂತರಾಳದ ನೋವು” ಎಂದು ಅನೀಶ್ ಅವರು ಹೇಳಿದ್ದಾರೆ.
ಲವ್ ಒಟಿಪಿ ಸಿನಿಮಾಗೆ ಅನೀಶ್ ನಿರ್ದೇಶನ ಮಾಡಿದ್ದು, ವಿಜಯ್ ಎಂ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಅನೀಶ್ ಜೊತೆಗೆ ತೆಲುಗಿನ ರಾಜು ಕನಕಾಲ, ಸ್ವರೂಪಿಣಿ, ಜಾನ್ವಿಕಾ ಕಲಕೇರಿ, ತುಳಶಿ ಶಿವಮಣಿ, ಚೇತನ್ ಗಂಧರ್ವ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಲವ್ ಒಟಿಪಿ: ಥೀಯೆಟರ್ಗೆ ಬಾರದ ಜನ, ಕಣ್ಣೀರಿಡುತ್ತಾ ನೋವು ತೋಡಿಕೊಂಡ ನಟ
by

Leave a Comment