ಸೋಜುಗಾದ ಸೂಜಿ ಮಲ್ಲಿಗೆ ಹಾಡಿನಿಂದ ಜನಪ್ರಿಯರಾದ ಅನನ್ಯ ಅವರು, ಅಂತಾರಾಷ್ಟ್ರೀಯ ಮಟ್ಟದ ಮ್ಯೂಜಿಷಿಯನ್ ಮತ್ತು ಡ್ರಮ್ಮರ್ ಮಂಜು ಅವರೊಂದಿಗೆ ತಿರುಪತಿಯಲ್ಲಿ ಸಪ್ತಪದಿ ತುಳಿದಿದ್ದಾರೆ. ಕೆಜಿಎಫ್, ಕಾಂತಾರ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಅನನ್ಯ ಭಟ್ ಗುರುತಿಸಿಕೊಂಡಿದ್ದಾರೆ.
ಕನ್ನಡದ ಜೊತೆಗೆ ತಮಿಳು, ತೆಲುಗು ಚಿತ್ರರಂಗದಲ್ಲೂ ತಮ್ಮ ಕಂಚಿನ ಕಂಠದ ಗಾಯನದ ಮೂಲಕ ಅನನ್ಯ ಭಟ್ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ತಿರುಪತಿಯಲ್ಲಿ ಅವರು ಸಪ್ತಪದಿ ತುಳಿಯುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಖ್ಯಾತ ಜ್ಯೋತಿಷ್ಯಶಾಸ್ತ್ರದ ಲೇಖಕರು ಪಂಡಿತರು ಆಗಿರುವ ಪಂಡಿತ್ ಡಾ.ಅರುಣ್ ಗುರೂಜಿ ಅವರ ನೇತೃತ್ವದಲ್ಲಿ ಸರಳವಾಗಿ ನೆರವೇರಿದ ಈ ಮದುವೆಯಲ್ಲಿ ಕುಟುಂಬಸ್ಥರು ಮತ್ತು ಆಪ್ತರಷ್ಟೇ ಭಾಗಿಯಾಗಿದ್ದರು. ಅನನ್ಯ ಮತ್ತು ಮಂಜು ಇಬ್ಬರೂ ಸಂಗೀತದಲ್ಲಿ ಆಳವಾದ ಒಡನಾಟ ಹೊಂದಿದ್ದಾರೆ. ಇದು ಪರಿಪೂರ್ಣ ಜೋಡಿ ಎಂದು ಅವರ ತಾಯಿ ಹೇಳಿದ್ದಾರೆ.
ಈ ಜೋಡಿಯ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೂರಾರು ಅಭಿಮಾನಿಗಳು ನವಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಹಲವು ಸಮಯದಿಂದ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದ್ದು, ಒಟ್ಟಿಗೆ ಹಲವಾರು ಕಾರ್ಯಕ್ರಮಗಳನ್ನ ನೀಡಿದ್ದಾರೆ. ಹೀಗಾಗಿ ಇದು ಪ್ರೇಮ ವಿವಾಹ ಎನ್ನಲಾಗುತ್ತಿದೆ.
ಅನನ್ಯ ಭಟ್ ಅವರು ಕೆಜಿಎಫ್ ೧ ಮತ್ತು ೨ರ ಗರ್ಭದಿ, ಸಿಡಿಲ ಭರವ, ಧೀರ ಧೀರ, ಕೋಟಿ ಕನಸುಗಳ, ಮೆಹಬೂಬ ಹಾಡುಗಳನ್ನ ಅದ್ಭುತವಾಗಿ ಹಾಡಿದ್ದರು. ಅಲ್ಲದೇ ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ, ಟಗರು ಸಿನಿಮಾದ ‘ಮೆ ಮೆಂಟಲ್ ಹೋಜಾವಾ’, ಪುಷ್ಪಾ ಸಿನಿಮಾದ ‘ಸಾಮಿ ಸಾಮಿ’ ಹಾಡುಗಳು ಜನಮನಸೂರೆಗೊಂಡಿವೆ. ಅವರ ‘ಸೋಜುಗದ ಸೂಜಿ ಮಲ್ಲಿಗೆ’ ಹಾಡು ಯೂಟ್ಯೂಬ್‌ನಲ್ಲಿ ದಾಖಲೆಯ ವೀಕ್ಷಣೆ ಕಂಡಿದೆ.
ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಟ್ಟ ಗಾಯಕಿ ಅನನ್ಯ ಭಟ್
by

Leave a Comment