‘ಹಳ್ಳಿ ಪವರ್’ ಎಂಬ ನಾನ್-ಫಿಕ್ಷನ್ ಶೋನಿಂದ ಜೀ ಪವರ್ ವಾಹಿನಿ ಈಗಾಗಲೇ ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಕುಲ್ ಬಾಲಾಜಿ ನಡೆಸಿಕೊಡುತ್ತಿರುವ ‘ಹಳ್ಳಿ ಪವರ್’ ಈಗ ಅಂತಿಮ ಘಟ್ಟವನ್ನು ತಲುಪಿದೆ. ಬಹುನಿರೀಕ್ಷಿತ ಫಿನಾಲೆ ಎಪಿಸೋಡ್‌ಗಳು ಡಿಸೆಂಬರ್ 27 ಮತ್ತು ಡಿಸೆಂಬರ್ 28 ರಂದು ರಾತ್ರಿ 8.30 ರಿಂದ 10.30ರವರೆಗೆ ಜೀ ಪವರ್‌ನಲ್ಲಿ ಪ್ರಸಾರವಾಗಲಿದ್ದು, ‘ಹಳ್ಳಿ ಪವರ್’ ಸೀಸನ್ 1ರ ವಿಜೇತೆ ಯಾರು ಎಂಬ ವೀಕ್ಷಕರ ಪ್ರಶ್ನೆಗೆ ಉತ್ತರ ಸಿಗಲಿದೆ.
ಸಂಗೊಳ್ಳಿಯಲ್ಲಿ ನಡೆದ ಹಳ್ಳಿ ಪವರ್‌ಗೆ ಫಿನಾಲೆ
ಹಳ್ಳಿ ಪವರ್ ಒಂದು ವಿಭಿನ್ನ ಶೋ ಆಗಿದ್ದು ಸಿಟಿಯಲ್ಲಿ ಬೆಳೆದ ಯುವತಿಯರು ತಮ್ಮ ಸಿಟಿ ಲೈಫ್ ಕಂಫರ್ಟ್ ನ ತ್ಯಜಿಸಿ ಹಳ್ಳಿಗೆ ಬಂದು ಹಳ್ಳಿ ಜೀವನವನ್ನು ಸಾಗಿಸುವುದು ಈ ಟಾಸ್ಕ್. ಇಡೀ ಸೀಸನ್‌ನಲ್ಲಿ ಸ್ಪರ್ಧಿಗಳು ಹಳ್ಳಿ ಜೀವನದ ದಿನನಿತ್ಯದ ಕೆಲಸಗಳನ್ನು ಮಾಡುವುದರ ಜೊತೆಗೆ ಫಿಸಿಕಲ್ ಟಾಸ್ಕ್ಸ್ ಈ ಶೋ ನ ಮತ್ತೊಂದು ಹೈಲೈಟ್ ಆಗಿತ್ತು. ವ್ಯವಸಾಯ, ಜಾನುವಾರುಗಳ ಪೋಷಣೆ, ಪಾಲನೆ, ಹೀಗೆ ಹಳ್ಳಿ ಜನರು ಮಾಡುವ ಪ್ರತಿಯೊಂದು ಕೆಲಸವನ್ನು ಟಾಸ್ಕ್ ರೂಪದಲ್ಲಿ ‘ಹಳ್ಳಿ ಪವರ್’ ಸ್ಪರ್ಧಿಗಳಿಗೆ ನೀಡಲಾಗಿತ್ತು. ಇನ್ನು ಈ ರಿಯಾಲಿಟಿ ಶೋ ಉತ್ತರ ಕರ್ನಾಟಕದ ಸಂಗೊಳ್ಳಿಯಲ್ಲಿ ನಡೆದಿದೆ. ಹಳ್ಳಿ ಸೊಗಡು, ಅಕುಲ್ ಬಾಲಾಜಿ ಅವರ ನಿರೂಪಣೆ, ಸ್ಪರ್ಧಿಗಳ ಛಲ ಇವೆಲ್ಲವೂ ‘ಹಳ್ಳಿ ಪವರ್’ ಶೋ ಯಶಸ್ವೀ ಆಗಲು ಕಾರಣವಾಯ್ತು ಎಂಬುದು ತಂಡದ ಮಾತು.
ಯಾರಿಗೆ ಸಿಗಲಿದೆ ಟ್ರೋಫಿ?
ಈ ರಿಯಾಲಿಟಿ ಶೋನಲ್ಲಿ ರಗಡ್ ರಶ್ಮಿ, ಸಕ್ಕತ್ ಸೋನಿಯಾ, ಘಾಟಿ ಗಾನವಿ, ಮಿಲ್ಕಿ ಬ್ಯೂಟಿ ಮೋನಿಷಾ ಹಾಗೂ ಮಣ್ಣಿನ ಮಗಳು ಫರೀನ್ ಫೈನಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ. ಇವರ ಶ್ರಮ, ಸಾಧನೆ ಮತ್ತು ದೃಢತೆ ಇವರನ್ನು ಫಿನಾಲೆಯ ಹಂತಕ್ಕೆ ತಲುಪಿಸಿದ್ದು, ಸೀಸನ್ 1ರ ಕಿರೀಟವನ್ನು ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಉತ್ತರ ಇದೆ ಶನಿವಾರ ಮತ್ತು ಭಾನುವಾರ ದೊರೆಯಲಿದೆ.
‘ಹಳ್ಳಿ ಪವರ್’ ಶೋ ಹಳ್ಳಿ ಸೊಗಡನ್ನು ಜನರಿಗೆ ನೀಡುವಲ್ಲಿ ಯಶಸ್ವೀ ಆಗಿದೆ. ಇನ್ನು ಫಿನಾಲೆ ಎಪಿಸೋಡ್ ಗಳು ಭಾವನಾತ್ಮಕ, ರೋಚಕ ಕ್ಷಣಗಳನ್ನು ಹೊಂದಿದ್ದು ವೀಕ್ಷಕರಿಗೆ ಸಖತ್ ಮನರಂಜನೆ ನೀಡುವುದರಲ್ಲಿ ಎರಡನೇ ಮಾತಿಲ್ಲ ಎಂಬುದು ಹಳ್ಳಿ ಪವರ್ ತಂಡದ ಮಾತು. ‘ಹಳ್ಳಿ ಪವರ್’ ಸೀಸನ್ 1 ರ ಕಿರೀಟ ಯಾರಿಗೆ ಸಿಗಲಿದೆ ಎಂಬುದಕ್ಕೆ ಡಿಸೆಂಬರ್ 27 ಮತ್ತು 28 ರಂದು ಸಂಜೆ 8.30ರಿಂದ ರಾತ್ರಿ 10.30ರವರೆಗೆ ಜೀ ಪವರ್ ನೋಡಿ.

Leave a Comment