HOME

stories

STORIES

google-news

FOLLOW

FOLLOW

JOIN

5 ಬಗೆಯ ಆಹಾರಗಳು ಕೂದಲು ಉದುರುವಿಕೆಯನ್ನು ಹೆಚ್ಚಿಸಬಹುದು

Updated: 08-11-2025, 05.00 AM

Follow us:

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆಲ್ಲಾ ನಾವು ಹೆಚ್ಚಾಗಿ ಶಾಂಪೂ ಅಥವಾ ಮಾಲಿನ್ಯವನ್ನು ದೂಷಿಸುತ್ತೇವೆ. ಆದರೆ ನಮ್ಮ ಅಡುಗೆಮನೆಯಲ್ಲಿರುವ ಕೆಲವೊಂದು ಆಹಾರ ಮತ್ತು ಪಾನೀಯಗಳು ಸಹ ಈ ಸಮಸ್ಯೆಯನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಕೆಲವೊಮ್ಮೆ ನಾವು ತಿಳಿಯದೆಯೇ ನಮ್ಮ ಕೂದಲಿನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುವ ತಪ್ಪುಗಳನ್ನು ಮಾಡುತ್ತೇವೆ.
ಸೊಂಪಾದ, ದಪ್ಪನೆ ಹಾಗೂ ಕಪ್ಪಾದ ತಲೆಕೂದಲು ಹೊಂದಿರಬೇಕೆAದು ಎಲ್ಲರಿಗೂ ಆಸೆ ಇರುತ್ತದೆ. ಆದರೆ ಕೆಲವರಿಗೆ ಚಿಕ್ಕವಯಸ್ಸಿನಲ್ಲಿಯೇ ಕೂದಲು ಉದುರಲು ಪ್ರಾರಂಭವಾಗುತ್ತದೆ. ಇದ್ದಕ್ಕಿದ್ದಂತೆ ಅದರಲ್ಲೂ ಸಣ್ಣ ವಯಸ್ಸಿನಲ್ಲಿ ಕೂದಲು ಉದುರಲು ಆರಂಭವಾದರೆ ಆತಂಕವಾಗುವುದು ಸಹಜ! ಅದರಲ್ಲೂ ಅತಿಯಾಗಿ ಕೂದಲು ಉದುರುವುದರಿಂದ ಬೋಳು ತಲೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಈ ಬಗ್ಗೆ ಸೌಂದರ್ಯ ತಜ್ಞರು ಹೇಳುವ ಪ್ರಕಾರ, ದಿನದಲ್ಲಿ ೫೦ ರಿಂದ ೧೦೦ ಕೂದಲು ಉದುರುವುದು ಸಾಮಾನ್ಯ. ಆದರೆ, ಅದಕ್ಕಿಂತ ಹೆಚ್ಚು ಕೂದಲು ಉದುರುವುದು ಒಳ್ಳೆಯ ಲಕ್ಷಣವಲ್ಲ ಎಂದು ಅಭಿಪ್ರಾಯಪಡುತ್ತಾರೆ. ಇದಕ್ಕೆ ಬಹಳ ಕಾರಣಗಳಿರಬಹುದು, ಅದರಲ್ಲಿ ಪ್ರಮುಖವಾಗಿ ಜೀವನಶೈಲಿ, ಆಹಾರಪದ್ಧತಿ, ಪೋಷಕಾಂಶಗಳ ಕೊರತೆ, ವೈದ್ಯಕೀಯ ಪರಿಸ್ಥಿತಿ, ಅನುವಂಶೀಯ ಹೀಗೆ ಹತ್ತಾರು ಕಾರಣಗಳು ಕೂಡ ಅಡಗಿರುತ್ತದೆ.

ಕೆಲವೊಂದು ಬಗೆಯ ಡೈರಿ ಉತ್ಪನ್ನಗಳು
ಕೆಲವು ಡೈರಿ ಉತ್ಪನ್ನಗಳು, ವಿಶೇಷವಾಗಿ ಹೆಚ್ಚಿನ ಕೊಬ್ಬಿನಂಶವಿರುವ ಆಹಾರ ದೇಹದ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಹೆಚ್ಚಿಸಬಹುದು. ಮೇದೋಗ್ರಂಥಿಗಳ ಸ್ರಾವವು ಎಣ್ಣೆಯುಕ್ತ ವಸ್ತುವಾಗಿದ್ದು, ಅಧಿಕವಾಗಿ ಕೂದಲಿನ ರಂಧ್ರಗಳನ್ನು ಮುಚ್ಚಿಹಾಕಬಹುದು, ಕೂದಲಿನ ಬೆಳವಣಿಗೆಯನ್ನು ಕುಂಠಿತ ಗೊಳಿಸಿ ಹಾಗೂ ಕೂದಲು ಉದುರುವಿಕೆಗೆ ಕಾರಣವಾಗಬಹುದು. ನೀವು ಕೂದಲು ಉದುರುವಿಕೆ ಸಮಸ್ಯೆ ಅನುಭವಿಸುತ್ತಿದ್ದರೆ, ಕಡಿಮೆ ಕೊಬ್ಬಿನ ಡೈರಿ ಆಹಾರವನ್ನು ಸೇವಿಸುವುದು ಉತ್ತಮ.



ಆಲ್ಕೋಹಾಲ್
ಮದ್ಯಪಾನವು ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ದೇಹವು ನಿರ್ಜಲೀಕರಣಗೊಂಡಾಗ, ಅದು ಕೂದಲಿನ ಮೇಲೂ ಪರಿಣಾಮ ಬೀರುತ್ತದೆ. ಕೂದಲು ಒಣಗುತ್ತದೆ ಮತ್ತು ಸುಲಭವಾಗಿ ಉದುರುತ್ತದೆ, ಇದು ಕೂಡ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
ಹೆಚ್ಚಿನ ಉಪ್ಪಿನಾಂಶ ಇರುವ ಆಹಾರಗಳು
ಮನುಷ್ಯನ ದೇಹಕ್ಕೆ ದಿನದಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಮಾತ್ರ ಉಪ್ಪಿನಾಂಶ ಸೇರಬೇಕು ಎನ್ನುವ ನಿಯಮವಿದೆ. ಅತಿಯಾದ ಉಪ್ಪಿನಾಂಶ ಇರುವ ಆಹಾರಗಳು, ದೇಹದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸಿ ಕೂದಲನ್ನು ಒಣಗಿಸುತ್ತದೆ ಮತ್ತು ಕೂದಲು ಒಡೆಯುವಂತೆ ಮಾಡುತ್ತದೆ. ಇದು ಕೂದಲು ಒಡೆಯುವಿಕೆಗೆ ಕಾರಣವಾಗಬಹುದು.


ಪ್ಯಾಕ್ ಮಾಡಿದ ಮತ್ತು ಜಂಕ್ ಫುಡ್‌ಗಳು
ಚಿಪ್ಸ್, ಪಿಜ್ಜಾ ಮತ್ತು ಬರ್ಗರ್‌ಗಳಂತಹ ಜಂಕ್ ಫುಡ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಟ್ರಾನ್ಸ್ ಕೊಬ್ಬು ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ. ಈ ಕೊಬ್ಬುಗಳು ದೇಹದಲ್ಲಿ ಉರಿಯೂತವನ್ನು ಉಂಟುಮಾಡ ಬಹುದು, ಕೂದಲು ಬೇರುಗಳನ್ನು ತಲುಪುವುದನ್ನು ತಡೆಯುತ್ತದೆ ಮತ್ತು ಅವು ದುರ್ಬಲಗೊಳ್ಳಲು ಮತ್ತು ಮುರಿಯಲು ಕಾರಣವಾಗುತ್ತದೆ.


ಸಕ್ಕರೆಯಾಂಶ ಹೆಚ್ಚಿರುವ ಆಹಾರಗಳು 
ಸಕ್ಕರೆ ಆಹಾರಗಳು ಬೊಜ್ಜುತನಕ್ಕೆ ಕಾರಣವಾಗುವುದಲ್ಲದೆ, ನಿಮ್ಮ ಕೂದಲನ್ನು ದುರ್ಬಲಗೊಳಿಸಬಹುದು. ಹೆಚ್ಚು ಸಕ್ಕರೆ ತಿನ್ನುವುದರಿಂದ ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಾಗುತ್ತದೆ, ಇದು ಆಂಡ್ರೋಜೆನ್ಗಳು ಎಂಬ ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸುತ್ತದೆ. ಈ ಹಾರ್ಮೋನುಗಳು ಕೂದಲು ಕಿರುಚೀಲಗಳನ್ನು ದುರ್ಬಲಗೊಳಿಸಿ ಕೂದಲು ಉದುರುವಿಕೆಗೆ ಕಾರಣವಾಗಬಹುದು.


ಕೂದಲುದುರುವ ಸಮಸ್ಯೆಗೆ ಕಾರಣಗಳು
ಹೌದು, ನೀವು ಇಷ್ಟಪಡುವ ಕೆಲವೊಂದು ಆಹಾರಪದಾರ್ಥಗಳು ಕೂಡ ನಿಮ್ಮ ಕೂದಲಿನ ಬೇರುಗಳನ್ನು ದುರ್ಬಲಗೊಳಿಸುವ ಸಾಧ್ಯತೆಗಳಿರುತ್ತವೆ! ಸಮಾನ್ಯವಾಗಿ ನಾವೆಲ್ಲಾ ಹೆಚ್ಚಾಗಿ ಕೂದಲು ತೊಳೆಯಲು ಬಳಸುವ ಶಾಂಪೂ ಅಥವಾ ನೀರಿನಿಂದಾಗಿ ಈ ರೀತಿಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳ ಬಹುದು ಅಂದು ಕೊಳ್ಳುತ್ತೇವೆ! ಆದರೆ ನಿಮಗೆ ಗೊತ್ತಿರಲಿ ಕೆಲವೊಮ್ಮೆ ನಾವು ಸೇವನೆ ಮಾಡುವ ಅನಾರೋಗ್ಯ ಆಹಾರ ಪದ್ಧತಿಯಿಂದಾಗಿ, ದೇಹದಲ್ಲಿ ಪೌಷ್ಟಿಕಾಂಶಗಳು ಕಡಿಮೆಯಾಗಿ, ತಲೆಕೂದಲು ಉದುರಲು ಕಾರಣವಾಗಿಬಿಡುತ್ತದೆ.

4 responses to “5 ಬಗೆಯ ಆಹಾರಗಳು ಕೂದಲು ಉದುರುವಿಕೆಯನ್ನು ಹೆಚ್ಚಿಸಬಹುದು”

  1. Giridhar Naik.Kmt. Avatar
    Giridhar Naik.Kmt.

    Good information.Thank u something.

    1. Chandan Naik Avatar

      Thank you for your support

  2. G H Naik.Kmt. Avatar
    G H Naik.Kmt.

    Thank u for good information.

Leave a Comment

About Us

SandalwoodSuddi — ಕನ್ನಡದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ನಮ್ಮ ಧ್ಯೇಯ ಸ್ಪಷ್ಟವಾಗಿದೆ: ಕನ್ನಡ ಓದುಗರಿಗೆ ತಾಜಾ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವುದು. ಸಿನಿಮಾದಿಂದ ರಾಜಕೀಯ, ಕ್ರೀಡೆ, ತಂತ್ರಜ್ಞಾನ, ಶಿಕ್ಷಣ, ಜೀವನಶೈಲಿ ಮತ್ತು ಮನರಂಜನೆಯವರೆಗೆ — ನಾವು ನಿಮ್ಮ ಮೊಬೈಲ್ ಮತ್ತು ವೆಬ್‌ನಲ್ಲಿ ಎಲ್ಲಾ ಕ್ಷೇತ್ರಗಳ ಇತ್ತೀಚಿನ ನವೀಕರಣಗಳನ್ನು ತಲುಪಿಸುತ್ತೇವೆ.