HOME

stories

STORIES

google-news

FOLLOW

FOLLOW

JOIN

ಶನಿ ದೋಷ ಇರುವವರು ಶನಿ ದೇವನ ಈ ಮಂತ್ರ ಪಠಿಸಿ – ಹಣ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ.

Updated: 15-11-2025, 05.00 AM

Follow us:



ಹಿಂದೂ ಧರ್ಮದಲ್ಲಿ ಪೂಜೆ-ಪುನಸ್ಕಾರ, ದೇವ-ದೈವ ಆರಾಧನೆಗಳಿಗೆ ಹೆಚ್ಚಿನ ಮಹತ್ವವಿದೆ. ವಾರದ ಏಳು ದಿನವೂ ಒಂದೊಂದು ದೇವರಿಗೆ ಸಮರ್ಪಿಸಲಾಗಿದೆ. ಹಾಗೇ ಶನಿವಾರ ನ್ಯಾಯದ ಅಧಿಪತಿ ಶನಿ ದೇವನಿಗೆ ಮೀಸಲಾಗಿದ್ದು, ಶನಿ ದೇವನ ಆರಾಧನೆಗೆ ಈ ದಿನ ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಶನಿ ದೇವನ ಪೂಜೆಯನ್ನು ವಿಧಿ-ವಿಧಾನಗಳ ಮೂಲಕ ಮಾಡಿದ್ದರೆ ಸುಲಭವಾಗಿ ಆತನ ಕೃಪೆಯನ್ನು ಪಡೆಯಬಹುದು.
ಇದರೊಂದಿಗೆ ಶನಿವಾರ ಕರ್ಮಾಧಿಪತಿ ಶನಿ ದೇವನ ಮಂತ್ರಗಳನ್ನು ಜಪಿಸುವುದರಿಂದ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ. ಜೀವನದಲ್ಲಿ ಯಶಸ್ಸು ಸಿಗಲಿದ್ದು, ನಿಮ್ಮ ಇಷ್ಟಾರ್ಥಗಳು ಸಿದ್ಧಿಸಲಿವೆ. ನಂಬಿಕೆಯ ಪ್ರಕಾರ, ಶನಿವಾರದಂದು ಕೆಲವು ಮಂತ್ರಗಳನ್ನು ಜಪಿಸುವುದರಿಂದÀ ನಿಮಗೆ ಶುಭ ತರಲಿದ್ದು, ಶನಿ ದೋಷ ಇರುವವರು ಈ ದಿನ ಶನಿ ದೇವನನ್ನು ಪೂಜಿಸುವುದರ ಜೊತೆಗೆ, ಮಂತ್ರಗಳನ್ನು ಪಠಿಸುವುದರಿಂದ ನಿಮ್ಮ ಕಾರ್ಯಗಳನ್ನು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳಿಸಲು ಶನಿ ದೇವನು ಸಹಾಯ ಮಾಡುತ್ತಾನೆ ಮತ್ತು ಶುಭವನ್ನು ನೀಡುತ್ತಾನೆ. ಇಂದು ನಾವು ಶನಿ ದೇವನ ಯಾವ ಮಂತ್ರವನ್ನು ಜಪಿಸಬೇಕು..? ಎಂಬುದನ್ನು ತಿಳಿಯೋಣ.

ಶತ್ರು ನಾಶಕ್ಕಾಗಿ
ಶತ್ರು ಭಾದೆಯಿಂದ ನೀವು ಸಂಕಷ್ಟಕ್ಕೆ ಸಿಲುಕಿದ್ದರೆ ಅದರಿಂದ ಹೊರಬರಲು, `ಓಂ ಶನೈ ಶನಿಶ್ಚರಾಯ ನಮಃ’ ಮಂತ್ರವನ್ನು 11 ಬಾರಿ ಪಠಿಸಿ.11 ಶನಿವಾರಗಳವರೆಗೆ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಹೀಗೆ ಮಾಡುವುದರಿಂದ ಶತ್ರು ಕಾಟ ನಿವಾರಣೆಗೊಂಡು ನಿಮಗೆ ಯಶಸ್ಸು ಸಿಗುತ್ತದೆ.

ಆರ್ಥಿಕ ಲಾಭಕ್ಕಾಗಿ
ನೀವು ನಿಮ್ಮ ವ್ಯವಹಾರದಲ್ಲಿ ಆರ್ಥಿಕ ಲಾಭವನ್ನು ಪಡೆಯಲು ಬಯಸಿದರೆ ಮತ್ತು ನಿಮ್ಮ ವ್ಯವಹಾರವನ್ನು ಬಹಳ ಮುಂದಕ್ಕೆ ಕೊಂಡೊಯ್ಯಲು ಬಯಸಿದರೆ. ಶನಿವಾರದಂದು ಸ್ನಾನ ಮಾಡಿದ ನಂತರ, ಶುಭ್ರವಾದ ಬಟ್ಟೆಗಳನ್ನು ಧರಿಸಿ, ಪದ್ಮಾಸನದಲ್ಲಿ ಕುಳಿತು ಶನಿ ದೇವರ ಬೀಜ ಮಂತ್ರವಾದ `ಓಂ ಪ್ರಾಮ್ ಪ್ರೇಮ್ ಪ್ರಾಔಮ್ ಸಹ ಶನೈಶ್ಚರಾಯ ನಮಃ’ ಜಪಿಸಬೇಕು. ಶನಿವಾರದಂದು ನೀವು ಕನಿಷ್ಟ 11 ಬಾರಿ ಈ ಮಂತ್ರವನ್ನು ಪಠಿಸಬೇಕು.

ಸಮೃದ್ಧಿ ವೃದ್ಧಿಗಾಗಿ
ನಿಮ್ಮ ಕುಟುಂಬದ ಸದಸ್ಯರ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು ನೀವು ಬಯಸಿದರೆ, “ಓಂ ಶಂ ಶನೈಶ್ಚರಾಯ ನಮಃ” ಎಂಬ ಶನಿ ಏಕಾಶರಿ ಮಂತ್ರವನ್ನು 108 ಬಾರಿ ಪಠಿಸಿ. ಇದರಿಂದ ವ್ಯವಹಾರಿಕವಾಗಿ ನೀವು ಅಭಿವೃದ್ಧಿ ಹೊಂದಬಹುದಾಗಿದ್ದು, ಮನೆಯಲ್ಲಿ ಸಂಪತ್ತು ವೃದ್ದಿಯಾಗಲಿದೆ.

ಮಂಗಳಕರ ಫಲಿತಾಂಶ
ಶನಿವಾರದಂದು ‘ಓಂ ಶನಿಶ್ಚರಾಯ ನಮಃ’ ಎಂಬ ಮಂತ್ರವನ್ನು108 ಬಾರಿ ಜಪಿಸಿ. ಈ ಮಂತ್ರನ್ನು ಜಪಿಸುವುದರಿಂದ ಜೀವನದಲ್ಲಿ ನಾವು ಅನೇಕ ರೀತಿಯ ಮಂಗಳಕರ ಫಲಿತಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ.

ಮಂತ್ರ ಪಠಣದ ವಿಧಾನ
ಶನಿವಾರದಂದು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸಿ. ಪೂಜಾ ಸ್ಥಳವನ್ನು ಗಂಗಾಜಲದಿಂದ ಶುದ್ಧೀಕರಿಸಿ. ಮರದ ಹಲಗೆಯ ಮೇಲೆ ಕೆಂಪು ಬಟ್ಟೆ ಹಾಸಿ, ಅದರ ಮೇಲೆ ಶನಿ ದೇವರ ಫೋಟೋವನ್ನು ಪ್ರತಿಷ್ಠಾಪಿಸಿ. ನಂತರ ಹೂವು, ಧೂಪ, ದೀಪ ಮತ್ತು ನೈವೇದ್ಯಗಳನ್ನು ಅರ್ಪಿಸಿ ಆರತಿಯನ್ನು ಮಾಡಿ. ಕೊನೆಯಲ್ಲಿ, ಶನಿ ದೇವನ ಮುಂದೆ ಕುಳಿತು ಈ ಮಂತ್ರಗಳನ್ನು ಏಕಾಗ್ರತೆಯಿಂದ ಜಪಿಸಿ. ಈ ರೀತಿ ಮಾಡುವುದರಿಂದ ಶನಿ ದೇವರ ಅನುಗ್ರಹ ಪ್ರಾಪ್ತಿಯಾಗಿ ಹಣ, ಸಂಪತ್ತು, ಅದೃಷ್ಟ ಮತ್ತು ಸಂತೋಷ ಸಿಗುತ್ತದೆ.

Leave a Comment

About Us

SandalwoodSuddi — ಕನ್ನಡದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ನಮ್ಮ ಧ್ಯೇಯ ಸ್ಪಷ್ಟವಾಗಿದೆ: ಕನ್ನಡ ಓದುಗರಿಗೆ ತಾಜಾ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವುದು. ಸಿನಿಮಾದಿಂದ ರಾಜಕೀಯ, ಕ್ರೀಡೆ, ತಂತ್ರಜ್ಞಾನ, ಶಿಕ್ಷಣ, ಜೀವನಶೈಲಿ ಮತ್ತು ಮನರಂಜನೆಯವರೆಗೆ — ನಾವು ನಿಮ್ಮ ಮೊಬೈಲ್ ಮತ್ತು ವೆಬ್‌ನಲ್ಲಿ ಎಲ್ಲಾ ಕ್ಷೇತ್ರಗಳ ಇತ್ತೀಚಿನ ನವೀಕರಣಗಳನ್ನು ತಲುಪಿಸುತ್ತೇವೆ.