ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕು ಎಂಬ ಉದ್ದೇಶಕ್ಕಾಗಿ ಬಹಳಷ್ಟು ಜನರು ನಾನಾ ವಿಗ್ರಹವನ್ನು ತಮ್ಮ ಮನೆಯಲ್ಲಿಮ ಇರಿಸಿಕೊಂಡಿರುತ್ತಾರೆ. ಅಂತಹ ವಿಗ್ರಹ – ಪ್ರತಿಮೆಗಳ ಪೈಕಿ ಲಾಫಿಂಗ್ ಬುದ್ಧ ಕೂಡ ಒಂದು. ಈ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಸಮೃದ್ಧಿ ಆಗುವುದರ ಜತೆಗೆ ಸುಖ ಶಾಂತಿ ನೆಲೆಸುತ್ತದೆ. ಹೌದು, ನೀವು ಲಾಫಿಂಗ್ ಬುದ್ಧನ ವಿಗ್ರಹವನ್ನು ಮನೆಯಲ್ಲಿ ವಾಸ್ತು ಪ್ರಕಾರ ಇಟ್ಟರೆ ಸೌಂದರ್ಯ ಹೆಚ್ಚುವುದರ ಜತೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
ಮನೆಯ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ ಮತ್ತು ಜೀವನದಲ್ಲಿ ಬರುವ ಎಲ್ಲ ಅಡೆತಡೆಗಳನ್ನು ದೂರ ಮಾಡುತ್ತದೆ. ಆದರೆ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಹೇಗೆಂದರಲ್ಲಿ, ಎಲ್ಲೆಂದರಲ್ಲಿ ಇಟ್ಟರೆ ಮನೆಯಲ್ಲಿ ಶಾಂತಿ ಬದಲಿಗೆ ಅಶಾಂತಿ ಉಂಟಾಗುತ್ತದೆ. ನೆಮ್ಮದಿ ಇರಬೇಕಾದ ಸ್ಥಳದಲ್ಲಿ ಕಷ್ಟ ತುಂಬಿರುತ್ತದೆ. ಸೂಕ್ತ ರೀತಿ ಇಡದಿದ್ದರೆ ಜೀವನದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ಮನೆಯಲ್ಲಿ ಲಾಫಿಂಗ್ ಬುದ್ದನ ವಿಗ್ರಹವನ್ನು ಯಾವ ರೀತಿ ಇಡುವುದು ಎಂದು ತಿಳಿದುಕೊಳ್ಳೊಣ ಬನ್ನಿ.
ಲಾಫಿಂಗ್ ಬುದ್ಧನ ಮೂರ್ತಿಯನ್ನು ಮನೆಗೆ ತಂದರೆ ಎಲ್ಲಿಡಬೇಕೆಂಬ ಗೊಂದಲ ಕಾಡುತ್ತದೆ. ನಿಮಗೂ ಈ ಪ್ರಶ್ನೆ ಕಾಡಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ. ಲಾಫಿಂಗ್ ಬುದ್ಧನ ಮೂರ್ತಿಯನ್ನು ಮನೆಗೆ ತಂದ್ರೆ ಅದನ್ನು ಮನೆಯ ಮುಖ್ಯ ದ್ವಾರದ ಬಳಿ ಇಡಬೇಕು. ಇದು ಮಂಗಳವೆಂದು ಪರಿಗಣಿಸಲಾಗುತ್ತದೆ.
ಲೀವಿಂಗ್ ರೂಮಿನಲ್ಲಿ ಇಂತಹ ಮೂರ್ತಿ ಇಡಿ
ಲಾಫಿಂಗ್ ಬುದ್ಧನ ಮೂರ್ತಿ ಬಲಕ್ಕೆ ವಾಲಿದಂತಿದ್ದರೆ ಆ ಮೂರ್ತಿಯನ್ನು ನೀವು ಲೀವಿಂಗ್ ರೂಮಿನಲ್ಲಿ ಇಡುವುದು ಶುಭಕರ. ಪಶ್ಚಿಮಕ್ಕೆ ಅಭಿಮುಖವಾಗಿ ಈ ಮೂರ್ತಿಯನ್ನು ಇಡಬೇಕಾಗುತ್ತದೆ. ಬುದ್ಧನ ಈ ಮೂರ್ತಿಯನ್ನು ಟೇಬಲ್ ಮೇಲೆ ಅಥವಾ ಶೆಲ್ಫ್ ಮೇಲೆ ಇಡುವುದು ಒಳ್ಳೆಯದು. ಲೀವಿಂಗ್ ರೂಮಿನಲ್ಲಿದ್ದರೆ ಇದು ಮನೆಯಲ್ಲಿ ಸುಖ, ಶಾಂತಿ ತರುತ್ತದೆ ಎಂದು ನಂಬಲಾಗಿದೆ. ಲೀವಿಂಗ್ ರೂಮಿನಲ್ಲಿಡುವ ಈ ಮೂರ್ತಿ ಮನೆಯವರ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
ಕೈಯಲ್ಲಿ ಹಣದ ಮೂಟೆ ಇರುವ ಮೂರ್ತಿಯನ್ನು ಇಲ್ಲಿಡಿ
ಕೈಯಲ್ಲಿ ಹಣದ ಮೂಟೆ ಹಿಡಿದಿರುವ ಲಾಫಿಂಗ್ ಬುದ್ಧನ ಪ್ರತಿಮೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇದು ಅಭಿವೃದ್ಧಿಯ ಸೂಚ್ಯಂಕ ಆಗಿದ್ದು, ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗೇ ವಾಸ್ತು ಪ್ರಕಾರ ಬುದ್ಧನ ವಿಗ್ರಹವನ್ನು ಪೂರ್ವಾಭಿಮುಖವಾಗಿ ಇರಿಸಿದರೂ ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ.
ಯಾವುದೇ ಕಾರಣಕ್ಕೂ ಅಪ್ಪಿತಪ್ಪಿಯೂ ಬುದ್ಧನ ವಿಗ್ರಹವನ್ನು ನೆಲದ ಮೇಲೆ ಇಡಬೇಡಿ. ಯಾವಾಗಲೂ ನೆಲದಿಂದ 3-4 ಅಡಿ ಎತ್ತರದಲ್ಲಿ ಇರಿಸಿ. ಇದರಿಂದ ಶತ್ರುಗಳಿಂದ ಮುಕ್ತಿ ದೊರೆಯುತ್ತದೆ ಮತ್ತು ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ. ಭಗವಾನ್ ಬುದ್ಧನ ಪ್ರತಿಮೆಯನ್ನು ಮನೆಯ ಪಶ್ಚಿಮ ದಿಕ್ಕಿನಲ್ಲಿ ಬಲಕ್ಕೆ ವಾಲುವಂತೆ ಇಡುವುದು ತುಂಬಾ ಪ್ರಯೋಜನಕಾರಿ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ.

Leave a Comment