HOME

stories

STORIES

google-news

FOLLOW

FOLLOW

JOIN

ʻಮಾರ್ಕ್‌ʼ ಟ್ರೇಲರ್‌ನಲ್ಲಿ ಅಬ್ಬರಿಸಿದ ಕಿಚ್ಚ ಸುದೀಪ್

Updated: 07-12-2025, 01.34 PM

Follow us:

ಕಿಚ್ಚ ಸುದೀಪ್‌ ಅಭಿನಯದ ʻಮಾರ್ಕ್ʼ‌ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. 2.25 ನಿಮಿಷಗಳ ಈ ಟ್ರೇಲರ್‌ ಸಖತ್‌ ಮಾಸ್‌ ಆಗಿ ಮೂಡಿಬಂದಿದೆ. ಇಲ್ಲಿ ಸುದೀಪ್‌ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಮ್ಯಾಕ್ಸಿಮಮ್‌ ಮಾಸ್‌ ಆಗಿ ಮಿಂಚಿದ್ದಾರೆ. ಟ್ರೇಲರ್‌ ನೋಡಿದ ಮೇಲೆ ಅಭಿಮಾನಿಗಳ ನಿರೀಕ್ಷೆ ಡಬಲ್‌ ಆಗಿರೋಂದು ಸುಳ್ಳಲ್ಲ.

ಹೇಗಿದೆ ಟ್ರೇಲರ್?‌
ಮಾರ್ಕ್‌ ಸಿನಿಮಾದಲ್ಲಿ ಸುದೀಪ್‌ ಅವರು ಸಸ್ಪೆಂಡ್‌ ಆಗಿರುವ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವಂತಿದೆ. “ಮತ್ತಲ್ಲಿದ್ರು ಸಸ್ಪೆನ್ಷನ್‌ನಲ್ಲಿದ್ರೂ ಡ್ಯೂಟಿಯಲ್ಲೇ ಇರ್ತಾರೆ” ಎಂಬ ಡೈಲಾಗ್‌ ಟ್ರೇಲರ್‌ನಲ್ಲಿ ಇದೆ. ಹಾಗಾಗಿ, ಸುದೀಪ್‌ ಇಲ್ಲಿ ಸಸ್ಪೆಂಡ್‌ ಆಗಿರುವ ಪೊಲೀಸ್‌ ಅಧಿಕಾರಿಯಾಗಿ ನಟಿಸಿರಬಹುದಾ ಎಂಬ ಅನುಮಾನ ಮೂಡುತ್ತದೆ. ಯೋಗಿ ಬಾಬು, ನವೀನ್‌ ಚಂದ್ರ, ಶೈನ್‌ ಟಾಮ್‌ ಚಾಕೋ, ರೋಶಿಣಿ ಪ್ರಕಾಶ್‌ ಹೀಗೆ ಅನೇಕ ಕಲಾವಿದರು ನಟಿಸಿದ್ದಾರೆ.

ಮಸ್ತ್‌ ಆಕ್ಷನ್‌ ಸೀನ್‌ಗಳು ಟ್ರೇಲರ್‌ನಲ್ಲಿ ಹೈಲೈಟ್‌ ಆಗಿವೆ. ಟ್ರೇಲರ್‌ ಎಂಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಹೇಳಿರುವ ‘‌ಧಮ್‌ ಹೊಡೆಯೋದು ಕಮ್ಮಿ ಮಾಡಬೇಕಲೇ…’ ಎಂಬ ಡೈಲಾಗ್‌ ಕಿಕ್‌ ನೀಡುವಂತಿದೆ. ಮಕ್ಕಳನ್ನು ಕಿಡ್ಯಾಪ್ನ್‌ ಮಾಡುವ ಗ್ಯಾಂಗ್‌ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಬಹುತೇಕ ಕತ್ತಲಿನ ಸೀನ್‌ಗಳು ಇರುವುದರಿಂದ ಇದು ಕೂಡ ಮ್ಯಾಕ್ಸ್‌ ನಂತೆಯೇ ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಹೊಂದಿದೆಯಾ? ಅದಕ್ಕೆ ಉತ್ತರ ಡಿಸೆಂಬರ್‌ 25ರಂದು ಗೊತ್ತಾಗಲಿದೆ.

ಸುದೀಪ್‌ ಹೇಳಿದ್ದೇನು?
ಮಾರ್ಕ್ ಟ್ರೇಲರ್‌‌ ಲಿಂಕ್‌ ಅನ್ನು ಶೇರ್‌ ಮಾಡಿಕೊಂಡಿರುವ ಕಿಚ್ಚ ಸುದೀಪ್‌ ಅವರು, “ಮಾರ್ಕ್ ಇಲ್ಲಿದೆ.. ಹಲೋ ನನ್ನ ಬಾದ್‌ಶಾಗಳೇ..? ಹೇಗಿದೆ ಜೋಶ್? ಚಿತ್ರಮಂದಿರಗಳಿಂದ ಜಗತ್ತಿನವರೆಗೆ, ಈ ಟ್ರೇಲರ್‌ಗಾಗಿ ಮೊದಲು ಎತ್ತಿದ ಕೈಗಳು ನಿಮ್ಮದೇ. ತುಂಬಾ ಪ್ರೀತಿ ಮತ್ತು ಶಕ್ತಿಯಿಂದ ಬಿಡುಗಡೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಪ್ರತಿ ಹರ್ಷೋದ್ಗಾರ, ಪ್ರತಿ ಸಂದೇಶ.. ನಾನು ಅದನ್ನು ಅನುಭವಿಸಿದ್ದೇನೆ. ನಿಮಗೆ ಎಂದೆಂದಿಗೂ ಕೃತಜ್ಞನಾಗಿದ್ದೇನೆ” ಎಂದು ಅಭಿಮಾನಿಗಳಿಗೆ ಧನ್ಯವಾದಗಳನ್ನು ಸುದೀಪ್‌ ತಿಳಿಸಿದ್ದಾರೆ.

ವೇಗವಾಗಿ ಶೂಟಿಂಗ್‌ ಮುಗಿಸಿದ ಮಾರ್ಕ್‌
ಸತ್ಯಜ್ಯೋತಿ ಫಿಲ್ಮ್ಸ್‌ ಮತ್ತು ಕಿಚ್ಚ ಕ್ರಿಯೆಷನ್ಸ್‌ ಜಂಟಿಯಾಗಿ ನಿರ್ಮಾಣ ಮಾಡಿರುವ ಮಾರ್ಕ್‌ ಸಿನಿಮಾವನ್ನು ಮ್ಯಾಕ್ಸ್‌ ಖ್ಯಾತಿಯ ವಿಜಯ್‌ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಈ ವರ್ಷದ ಜುಲೈನಲ್ಲಿ ಶೂಟಿಂಗ್‌ ಶುರು ಮಾಡಿ, ಆಗಲೇ ಡಿಸೆಂಬರ್‌ 25ರಂದು ಗ್ರ್ಯಾಂಡ್‌ ಆಗಿ ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ರಿಲೀಸ್‌ ಮಾಡಲು ಚಿತ್ರತಂಡ ಸಜ್ಜಾಗಿದೆ. ಸರಿಯಾಗಿ ಒಂದು ವರ್ಷದ ಬಳಿಕ ಕಿಚ್ಚನನ್ನು ತೆರೆಮೇಲೆ ನೋಡಲು ಫ್ಯಾನ್ಸ್‌ ಕಾಯುತ್ತಿದ್ದಾರೆ. ಅಂದಹಾಗೆ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಈ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಸಿನಿಮಾ ಕೂಡ ಈ ಮೂರು ಭಾಷೆಗಳಲ್ಲಿ ರಿಲೀಸ್‌ ಆಗುವ ಸಾಧ್ಯತೆ ಇದೆ.

Leave a Comment

About Us

SandalwoodSuddi — ಕನ್ನಡದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ನಮ್ಮ ಧ್ಯೇಯ ಸ್ಪಷ್ಟವಾಗಿದೆ: ಕನ್ನಡ ಓದುಗರಿಗೆ ತಾಜಾ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವುದು. ಸಿನಿಮಾದಿಂದ ರಾಜಕೀಯ, ಕ್ರೀಡೆ, ತಂತ್ರಜ್ಞಾನ, ಶಿಕ್ಷಣ, ಜೀವನಶೈಲಿ ಮತ್ತು ಮನರಂಜನೆಯವರೆಗೆ — ನಾವು ನಿಮ್ಮ ಮೊಬೈಲ್ ಮತ್ತು ವೆಬ್‌ನಲ್ಲಿ ಎಲ್ಲಾ ಕ್ಷೇತ್ರಗಳ ಇತ್ತೀಚಿನ ನವೀಕರಣಗಳನ್ನು ತಲುಪಿಸುತ್ತೇವೆ.