ಹಿಂದು ಧರ್ಮದಲ್ಲಿ ಒಂದೊಂದು ವಾರಕ್ಕೂ ಒಂದೊಂದು ಗ್ರಹ ಅಧಿಪತಿಯಾಗಿರುತ್ತದೆ. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹದ ಸ್ಥಾನವನ್ನು ಹೊಂದಿರುವ ರವಿ ಅಥವಾ ಸೂರ್ಯನ ವಾರ ಭಾನುವಾರವಾಗಿದ್ದು, ಈ ದಿನದಂದು ಸೂರ್ಯನಿಗೆ ಇಷ್ಟವಾಗದ ಕೆಲಸಗಳನ್ನು ಮಾಡುವುದರಿಂದ ಆ ಗ್ರಹ ನಮ್ಮ ಕುಂಡಲಿಯಲ್ಲಿ ದುರ್ಬಲನಾಗುವ ಸಾಧ್ಯತೆಗಳಿರುತ್ತವೆ. ಹಾಗಾದ್ರೆ ಭಾನುವಾರದಂದು ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಂಡು ಬರೋಣ ಬನ್ನಿ.
ಹೌದು ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಭಾನುವಾರವು ಭಗವಾನ್ ಸೂರ್ಯ ದೇವನ ದಿನವಾಗಿದೆ. ಈ ದಿನ ಮಾಡಿದ ಕೆಲಸವು ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ. ವ್ಯಕ್ತಿಯ ಜಾತಕದಲ್ಲಿ ಸೂರ್ಯ ದೋಷವಿದ್ದಾಗ ಆ ವ್ಯಕ್ತಿಯು ಎಲ್ಲಾ ಕಡೆಗಳಿಂದ ಅಶುಭ ಫಲ ಅಥವಾ ಕೆಟ್ಟ ಫಲಿತಾಂಶಗಳು ದೊರೆಯುತ್ತದೆ.. ಇಂತಹ ಪರಿಸ್ಥಿತಿಯಲ್ಲಿ, ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಂತ ಮುಖ್ಯವಾಗಿದ್ದು, ಕೆಲ ಕೆಲಸಗಳನ್ನು ಮಾಡುವುದರಿಂದ ದೂರ ಉಳಿಯುವುದು ಅಷ್ಟೇ ಮುಖ್ಯ.
ಸಂಡೇ ಇಸ್ ಹಾಲಿಡೇ ಎಂದು ಕೆಲವರು ಇದನ್ನು ಜಾಲಿ ಡೇ ಯಾಗಿ ತಮ್ಮ ಮನೆಗೆ ಬೇಕಾದ ಹಾಗೂ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿರುತ್ತಾರೆ.
ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರದಂದು ಕೆಲವೊಂದು ವಸ್ತುಗಳನ್ನು ಖರೀದಿಸುವುದು ಅಶುಭ! ಮತ್ತು ಇದರಿಂದ ನಿಮ್ಮ ಮನೆಯಲ್ಲಿ ಬಡತನ ಕಾಲಿಡಬಹುದು ಎಚ್ಚರ! ಭಾನುವಾರದಂದು ಸೂರ್ಯದೇವನನ್ನು ಆರಾಧಿಸುವುದರಿಂದ ಅಂತವರ ಬದುಕಿನಲ್ಲಿ ಶುಭ ಫಲಗಳು ಕಾಣಿಸಿಕೊಳ್ಳಲು ಸಾಧ್ಯವಿದೆ. ಮತ್ತು ಅಂತವರ ಜಾತಕದಲ್ಲಿ ಸೂರ್ಯನ ದೋಷಗಳು ಮಾಯವಾಗುತ್ತವೆ.
ಸೂರ್ಯ ದೇವರ ಆಶೀರ್ವಾದ ನಿಮ್ಮ ಮೇಲೆ ಬೀಳಬೇಕೆಂದರೆ ಭಾನುವಾರದಂದು ಉಪವಾಸ ಆಚರಿಸುವುದು ಉತ್ತಮ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರದಂದು ಕಬ್ಬಿಣ ಅಥವಾ ಚಿನ್ನದಿಂದ ಮಾಡಿದ ವಸ್ತುಗಳನ್ನು ಖರೀದಿಸುವುದರಿಂದ ಅಶುಭ ಉಂಟಾಗುತ್ತದೆ. ಮಾತ್ರವಲ್ಲದೇ, ಲಕ್ಷ್ಮಿ ದೇವಿಯೂ ಸಹ ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತಾಳೆ ಎಂಬ ನಂಬಿಕೆಯಿದೆ.
ಇದಲ್ಲದೇ ಭಾನುವಾರದಂದು ಹಾರ್ಡ್ ವೇರ್, ಕಾರಿನ ಪರಿಕರಗಳು, ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳನ್ನು ಮತ್ತು ತೋಟಗಾರಿಕಾ ವಸ್ತುಗಳನ್ನು ಖರೀದಿಸಬಾರದೆಂಬ ನಂಬಿಕೆಯಿದೆ.
ಇನ್ನು ಭಾನುವಾರದಂದು ಉಪ್ಪನ್ನು ಸೇವಿಸದಿರುವುದು ಉತ್ತಮ. ಈ ದಿನ ಉಪ್ಪಿನ ಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಮಾತ್ರವಲ್ಲದೇ ಕೆಲಸಗಳಲ್ಲಿ ಅಡ್ಡಿಗಳನ್ನು ಎದುರಿಸಬೇಕಾಗುತ್ತದೆ.
ಇನ್ನು, ಭಾನುವಾರದಂದು ಕಪ್ಪು, ನೀಲಿ, ಕಂದು ಮತ್ತು ಬೂದು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ.
ಭಾನುವಾರದಂದು ಕಟ್ಟಿಂಗ್ ಮಾಡಿಸುವುದರಿಂದ ಅಂತವರ ಜಾತಕದಲ್ಲಿರುವ ಸೂರ್ಯನು ದುರ್ಬಲನಾಗುತ್ತಾನೆ. ಈ ದಿನ ಕೆಂಪು ಬಣ್ಣದ ವಸ್ತುಗಳನ್ನು, ಚರ್ಮದ ಚೀಲಗಳನ್ನು, ಕತ್ತರಿ ಗೋಧಿ ಇತ್ಯಾದಿಗಳನ್ನು ಖರೀದಿಸುವುದು ಶುಭ.

Leave a Comment