---Advertisement---

The Devil OTT ರಿಲೀಸ್ ದಿನಾಂಕ: ಫೆಬ್ರವರಿ 16ಕ್ಕೆ ದರ್ಶನ್ ಫ್ಯಾನ್ಸ್‌ಗೆ ಸಿಹಿ ಸುದ್ದಿ?

By Chandan Naik

January 28, 2026 4:25 AM

---Advertisement---

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ( The Devil OTT) ರಿಲೀಸ್ ದಿನಾಂಕ ಕುರಿತು ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಡಿಸೆಂಬರ್ 11ರಂದು ರಾಜ್ಯಾದ್ಯಂತ ಬಿಡುಗಡೆಯಾದ ಈ ಚಿತ್ರಕ್ಕೆ ಈಗಾಗಲೇ 48 ದಿನಗಳು ಪೂರ್ಣಗೊಂಡಿದ್ದು (7 ವಾರ), ಇನ್ನೂ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಾಗದಿರುವುದು ಫ್ಯಾನ್ಸ್‌ಗೆ ನಿರಾಸೆ ತಂದಿದೆ.
ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ
ರಿಲೀಸ್ ಆದ ಮೊದಲ ದಿನವೇ 10–12 ಕೋಟಿ ರೂ. ಗಳಿಸಿದ ‘ದಿ ಡೆವಿಲ್’, 2025ರಲ್ಲಿ ತೆರೆಕಂಡ ಕನ್ನಡ ಸಿನಿಮಾಗಳ ಪೈಕಿ ಅತಿದೊಡ್ಡ ಓಪನಿಂಗ್ ಪಡೆದ ಪ್ರಮುಖ ಚಿತ್ರಗಳಲ್ಲಿ ಒಂದಾಗಿದೆ. ದರ್ಶನ್ ಅವರ ದ್ವಿಪಾತ್ರ ಅಭಿನಯ, ಅದ್ಭುತ ಸ್ಕ್ರೀನ್ ಪ್ರೆಸೆನ್ಸ್, ಹಾಗೂ ‘ಡೆವಿಲ್’ ಪಾತ್ರದ ಮ್ಯಾನರಿಸಂ ಮತ್ತು ಡೈಲಾಗ್ ಡೆಲಿವರಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

OTTಗೆ ಬಂದ ‘ಮಾರ್ಕ್’ ಮತ್ತು ‘45’ – ಆದರೆ ‘ದಿ ಡೆವಿಲ್’ ಇನ್ನೂ ಕಾಯುವಂತಾಗಿದೆ

‘ದಿ ಡೆವಿಲ್’ ನಂತರ ತೆರೆಕಂಡ ಸುದೀಪ್ ಅಭಿನಯದ ‘ಮಾರ್ಕ್’ ಮತ್ತು ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ‘45’ ಸಿನಿಮಾಗಳು ಈಗಾಗಲೇ ಜನವರಿ 23ರಂದು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಆರಂಭಿಸಿವೆ.
‘45’ ಸಿನಿಮಾ – ZEE5 ನಲ್ಲಿ
‘ಮಾರ್ಕ್’ ಸಿನಿಮಾ – Jio Hotstar ನಲ್ಲಿ
ಆದರೆ ಇವೆರಡಕ್ಕೂ ಮುಂಚೆಯೇ ಬಿಡುಗಡೆಯಾದ ‘ದಿ ಡೆವಿಲ್’ OTT ರಿಲೀಸ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬರದಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

ಆದರೆ ಇವೆರಡಕ್ಕೂ ಮುಂಚೆಯೇ ಬಿಡುಗಡೆಯಾದ ‘ದಿ ಡೆವಿಲ್’ OTT ರಿಲೀಸ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬರದಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.

THE Devil Ott

ದರ್ಶನ್ ಹುಟ್ಟುಹಬ್ಬಕ್ಕೆ OTT ರಿಲೀಸ್? | The Devil OTT Release Date


ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬ. ಈ ವಿಶೇಷ ದಿನದಂದೇ ‘ದಿ ಡೆವಿಲ್’ ಸಿನಿಮಾ OTTಗೆ ಲಗ್ಗೆ ಇಡಬಹುದು ಎಂಬ ಬಲವಾದ ಚರ್ಚೆ ಸಿನಿ ವಲಯದಲ್ಲಿ ನಡೆಯುತ್ತಿದೆ.
ಲಭ್ಯವಿರುವ ಮೂಲಗಳ ಪ್ರಕಾರ, ಫೆಬ್ರವರಿ 16ರಂದು ‘ದಿ ಡೆವಿಲ್’ OTT ಬಿಡುಗಡೆ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಆದ್ರೆ, OTT ಪ್ಲಾಟ್‌ಫಾರ್ಮ್ ಮತ್ತು ಬಿಡುಗಡೆ ದಿನಾಂಕ ಕುರಿತು ಚಿತ್ರತಂಡದಿಂದ ಇನ್ನೂ ಅಧಿಕೃತ ಘೋಷಣೆ ಬಂದಿಲ್ಲ.

ನಟರ ಬಳಗ ಮತ್ತು ತಾಂತ್ರಿಕ ತಂಡ
ಪ್ರಕಾಶ್ ವೀರ್ ನಿರ್ದೇಶನದ ಈ ಸಿನಿಮಾದಲ್ಲಿ:
ದರ್ಶನ್ – ದ್ವಿಪಾತ್ರ
ರಚನಾ ರೈ
ಮಹೇಶ್ ಮಂಜ್ರೇಕರ್
ಅಚ್ಯುತ್ ಕುಮಾರ್
ಶೋಭರಾಜ್
ವಿನಯ್ ಗೌಡ
ಚಂದು ಗೌಡ
ರೋಜರ್ ನಾರಾಯಣ್
ಶರ್ಮಿಳಾ ಮಾಂಡ್ರೆ

ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಗೀತ ಸಂಯೋಜನೆ: ಅಜನೀಶ್ ಲೋಕನಾಥ್

Also Read kiccha sudeep biography: ಕಿಚ್ಚ ಸುದೀಪ್ ಜೀವನಚರಿತ್ರೆ

Chandan Naik

ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

Comments

Leave a Comment