Shivarajkumar Dad Movie: ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ನಟ ಶಿವರಾಜ್ಕುಮಾರ್. ವರ್ಷಕ್ಕೆ ಎರಡು-ಮೂರು ಸಿನಿಮಾಗಳನ್ನು ನೀಡುವ ಶಿವಣ್ಣ, ಇತ್ತೀಚೆಗೆ ಕ್ಯಾನ್ಸರ್ ಚಿಕಿತ್ಸೆಯ ಕಾರಣಕ್ಕಾಗಿ ಸ್ವಲ್ಪ ದಿನ ಬ್ರೇಕ್ ಪಡೆದುಕೊಂಡಿದ್ದರು. ಆದರೆ, ಚಿಕಿತ್ಸೆ ಮುಗಿದ ಕೇವಲ 3 ತಿಂಗಳಲ್ಲೇ ಮತ್ತೆ ಸಿನಿಮಾ ಸೆಟ್ಗೆ ಮರಳಿರುವ ಅವರು, ಈಗ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ‘ಪೆದ್ದಿ’ ಚಿತ್ರದ ಗೌರ್ನಾಯ್ಡು ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ಸೆಂಚುhttps://www.imdb.com/title/tt38504656/ರಿ ಸ್ಟಾರ್, ಈಗ ‘ಡ್ಯಾಡ್’ ಸಿನಿಮಾದ ಚಿತ್ರೀಕರಣವನ್ನೂ ಪೂರ್ತಿಗೊಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಈ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಈಗ ವರ್ಷ ಕಳೆಯುವ ಮುನ್ನವೇ ಶೂಟಿಂಗ್ ಮುಕ್ತಾಯವಾಗಿದೆ. ಮೈರಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹರೀಶ್ ಪೆದ್ದಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಅನಿಲ್ ಕನ್ನೆಗಂಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
Shivarajkumar Dad Movie: ಮತ್ತೆ ಡಾಕ್ಟರ್ ಅವತಾರದಲ್ಲಿ ಶಿವಣ್ಣ
‘ಡ್ಯಾಡ್’ ಚಿತ್ರದಲ್ಲಿ ಶಿವರಾಜ್ಕುಮಾರ್ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಶಕಗಳ ಹಿಂದೆ ಸೂಪರ್ ಹಿಟ್ ‘ಗಡಿಬಿಡಿ ಕೃಷ್ಣ’ ಚಿತ್ರದಲ್ಲಿ ಸ್ಟೆತೊಸ್ಕೋಪ್ ಹಿಡಿದಿದ್ದ ಶಿವಣ್ಣ, ಈಗ ದೀರ್ಘ ಕಾಲದ ಬಳಿಕ ಮತ್ತೆ ಅಂತಹದ್ದೇ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ನಾಯಕಿಯಾಗಿದ್ದು, ಬಾಲನಟಿ ನಕ್ಷತ್ರ, ಬಾಬು ಹಾಗೂ ಮಲಯಾಳಂ ನಟ ಸೂರಜ್ ವೆಂಜರಮೂಡು ಪ್ರಮುಖ ತಾರಾಗಣದಲ್ಲಿದ್ದಾರೆ. ಮೈಸೂರು ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆದಿದ್ದು, ಅರ್ಜುನ್ ಜನ್ಯ ಸಂಗೀತ ಹಾಗೂ ಬಿ. ರಾಜಶೇಖರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
Shivarajkumar Dad Movie: ಭಾವುಕರಾದ ನಿರ್ದೇಶಕರು
ಚಿತ್ರೀಕರಣ ಮುಗಿದ ಬೆನ್ನಲ್ಲೇ ನಿರ್ದೇಶಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. “‘ಡ್ಯಾಡ್’ ಚಿತ್ರೀಕರಣ ಮುಗಿಯಿತು. ಪ್ರತಿಯೊಂದು ‘ಆಕ್ಷನ್’ ಒಂದು ಕನಸನ್ನು ಹೊತ್ತೊಯ್ದರೆ, ಪ್ರತಿ ‘ಕಟ್’ ಒಂದು ಪಾಠವನ್ನು ಕಲಿಸಿಕೊಟ್ಟಿದೆ. ಶೂಟಿಂಗ್ ಮುಗಿದರೂ ಈ ಪ್ರಯಾಣ ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ. ಅದ್ಭುತ ಪಾತ್ರವರ್ಗ, ತಾಂತ್ರಿಕ ಸಿಬ್ಬಂದಿ ಹಾಗೂ ಈ ಚಿತ್ರವನ್ನು ನಂಬಿದ ಎಲ್ಲರಿಗೂ ನನ್ನ ಕೃತಜ್ಞತೆಗಳು. ನಮ್ಮ ಪ್ರೀತಿಯ ಶಿವಣ್ಣ ಅವರನ್ನು ನಿರ್ದೇಶಿಸಿದ್ದು ನನ್ನ ಸೌಭಾಗ್ಯ. ಕ್ಯಾಮರಾ ರೋಲಿಂಗ್ ನಿಂತಿರಬಹುದು, ಆದರೆ ‘ಡ್ಯಾಡ್’ ಹೃದಯ ಬಡಿತ ಈಗ ಪ್ರಾರಂಭವಾಗಿದೆ,” ಎಂದು ಬರೆದುಕೊಂಡಿದ್ದಾರೆ.
Shivarajkumar Dad Movie: ಅಪ್ಪ-ಮಗಳ ಎಮೋಷನಲ್ ಕಥೆ
ಇದು ತಂದೆ ಹಾಗೂ ಮಗಳ ನಡುವಿನ ಭಾವನಾತ್ಮಕ ಕಥೆಯಾಗಿದ್ದು, ಬಾಲನಟಿ ನಕ್ಷತ್ರ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾಳೆ. ಶಿವಣ್ಣ ಹಾಗೂ ನಕ್ಷತ್ರ ಅವರ ಕಾಂಬಿನೇಷನ್ ದೃಶ್ಯಗಳೇ ಚಿತ್ರದ ಪ್ರಮುಖ ಹೈಲೈಟ್ ಆಗಿರಲಿವೆ. ಇದರಲ್ಲಿ ಸೆಂಚುರಿ ಸ್ಟಾರ್ ಸಖತ್ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬರೀ ಎಮೋಷನ್ ಮಾತ್ರವಲ್ಲದೆ, ಚಿತ್ರದಲ್ಲಿ ಬಿಗಿಯಾದ ಥ್ರಿಲ್ಲಿಂಗ್ ಅಂಶಗಳೂ ಇವೆ. ಕನ್ನಡದ ಜೊತೆಗೆ ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೂ ಸಿನಿಮಾ ಡಬ್ ಆಗಿ ತೆರೆಗೆ ಬರಲಿದ್ದು, ಇನ್ನೆರಡು ತಿಂಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ.
Shivarajkumar Dad Movie: ನಿಲ್ಲದ ಶಿವಣ್ಣನ ಸಿನಿಮಾ ಜರ್ನಿ
‘ಡ್ಯಾಡ್’ ಮಾತ್ರವಲ್ಲದೆ ಪವನ್ ಒಡೆಯರ್ ನಿರ್ದೇಶನದ ‘ಬೇಲ್’ ಸಿನಿಮಾದ ಶೂಟಿಂಗ್ ಅನ್ನೂ ಶಿವಣ್ಣ ಸದ್ದಿಲ್ಲದೆ ಮುಗಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸಿರುವ ಈ ಸಿನಿಮಾ ಯಾವಾಗ ಶುರುವಾಗಿ, ಯಾವಾಗ ಮುಗಿಯಿತು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ‘ಜೈಲರ್’ ಯಶಸ್ಸಿನ ಬಳಿಕ ಪರಭಾಷೆಗಳಲ್ಲೂ ಬ್ಯುಸಿಯಾಗಿರುವ ಶಿವಣ್ಣ, ‘ಜೈಲರ್- 2’ ಚಿತ್ರೀಕರಣವನ್ನೂ ಮುಗಿಸಿದ್ದಾರೆ.
ಸದ್ಯ ತೆಲುಗಿನಲ್ಲಿ ಆಂಧ್ರದ ಮಾದರಿ ರಾಜಕಾರಣಿಯೊಬ್ಬರ ಕಥೆಯನ್ನೊಳಗೊಂಡ ‘ಗುಮ್ಮಡಿ ನರಸಯ್ಯ’ ಬಯೋಪಿಕ್ನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಇನ್ನೂ ಹೆಸರಿಡದ ಹೊಸ ಸಿನಿಮಾವೊಂದರಲ್ಲೂ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಏಜೆಂಟ್ ಪ್ರಕಾಶ್ ಆಗಿ ಅಬ್ಬರಿಸಲಿದ್ದು, ಇನ್ನೆರಡು ದಿನಗಳಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.
Also Read: Mahaan Kannada Movie: ಸ್ಯಾಂಡಲ್ವುಡ್ನಲ್ಲಿ ಬಿಗ್ ಧಮಾಕಾ: 9 ವರ್ಷಗಳ ಬಳಿಕ ಒಂದಾದ ಶಿವಣ್ಣ-ವಿಜಯ್ ರಾಘವೇಂದ್ರ!

Leave a Comment