---Advertisement---

Golden Star Ganesh Movies: ಮಂತ್ರವಾದಿ ಅವತಾರ ವರ್ಸಸ್ ರೊಮ್ಯಾಂಟಿಕ್ ಹೀರೋ: ಅಕ್ಟೋಬರ್‌ನಲ್ಲಿ ಡಬಲ್ ಟ್ರೀಟ್ ಕೊಡಲಿದ್ದಾರಾ ಗೋಲ್ಡನ್ ಸ್ಟಾರ್?

By Chandan Naik

July 3, 2026 4:56 AM

---Advertisement---

Golden Star Ganesh Movies: ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ, ಗಾಂಧಿನಗರದಲ್ಲಿ ಈಗ ಅವರ ಸಿನಿಮಾಗಳದ್ದೇ ದೊಡ್ಡ ಚರ್ಚೆ ಶುರುವಾಗಿದೆ. ಕಳೆದ ಎರಡು ವರ್ಷಗಳಿಂದ ಗಣೇಶ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಈಗ ನೋಡಿದರೆ, ಕೇವಲ ಎರಡು ವಾರದ ಅಂತರದಲ್ಲಿ ಎರಡೆರಡು ಸಿನಿಮಾಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. 2 ವರ್ಷದಿಂದ ಸೈಲೆಂಟ್ ಆಗಿದ್ದು, ಈಗ 2 ವಾರಕ್ಕೆ 2 ಸಿನಿಮಾ ಯಾಕೆ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಎದ್ದಿದೆ.

Golden Star Ganesh Movies: ಕೃಷ್ಣಂ ಪ್ರಣಯ ಸಖಿ’ ಕಂಬ್ಯಾಕ್ ಮತ್ತು ನಿರಾಸೆ


ಒಂದ್ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಡ್ತಿದ್ದ ಗಣಿ ಕ್ರೇಜ್ ಕೊಂಚ ಕಮ್ಮಿ ಆಗಿತ್ತು. ಆದರೆ, 2 ವರ್ಷದ ಹಿಂದೆ ಬಂದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಅವರಿಗೆ ಭರ್ಜರಿ ಕಂಬ್ಯಾಕ್ ತಂದುಕೊಟ್ಟಿತು. ಈ ರೊಮ್ಯಾಂಟಿಕ್ ಎಂಟರ್‌ಟೈನರ್ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗುತ್ತಿದ್ದಂತೆ ಮೂರ್ನಾಲ್ಕು ಸಿನಿಮಾಗಳಲ್ಲಿ ಗಣಿ ನಟಿಸೋಕೆ ಆರಂಭಿಸಿದರು. ಸಾಲು ಸಾಲು ಸಿನಿಮಾಗಳು ಬರುತ್ತವೆ ಎಂದು ಕಾದಿದ್ದ ಅಭಿಮಾನಿಗಳಿಗೆ ಕೊನೆಗೆ ನಿರಾಸೆಯಾಯಿತು. ಬಹಳ ಹಿಂದೆ ಶುರುವಾಗಿದ್ದ ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾ ಸದ್ಯಕ್ಕೆ ತೆರೆಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ.

Golden Star Ganesh Movies

Golden Star Ganesh Movies: ಅಕ್ಟೋಬರ್‌ನಲ್ಲಿ ಎರಡೆರಡು ಸಿನಿಮಾಗಳ ರಿಲೀಸ್


ವರ್ಷದ ಮೊದಲ 6 ತಿಂಗಳು ಸೈಲೆಂಟ್ ಆಗಿದ್ದ ಕನ್ನಡ ಚಿತ್ರರಂಗ ಈಗ ಎದ್ದು ಕುಳಿತಿದೆ. ಮುಂದಿನ ತಿಂಗಳುಗಳಲ್ಲಿ ಒಂದರ ಹಿಂದೆ ಒಂದು ದೊಡ್ಡ ಸಿನಿಮಾಗಳು ತೆರೆಗೆ ಬರಲಿವೆ. ‘ಟಾಕ್ಸಿಕ್’ ಆರ್ಭಟ ಕಮ್ಮಿ ಆಗ್ತಿದ್ದಂತೆ ಚಿತ್ರಮಂದಿರಕ್ಕೆ ಬರಲು ಗಣೇಶ್ ಸಿದ್ಧತೆ ನಡೆಸಿದ್ದಾರೆ. ಅಕ್ಟೋಬರ್ 2ರಂದು ‘ಪಿನಾಕ’ ಸಿನಿಮಾ ತೆರೆಗೆ ಬರಲಿದ್ದು, ಅದರ ಬೆನ್ನಲ್ಲೇ ಅಂದರೆ ಅಕ್ಟೋಬರ್ 16ರಂದು ‘ಬೃಂದಾವಿಹಾರಿ’ ಸಿನಿಮಾ ಬಿಡುಗಡೆ ಆಗಲಿದೆ.

Golden Star Ganesh Movies

Golden Star Ganesh Movies: 2 ವಾರದ ಅಂತರದ ಸಾಹಸಕ್ಕೆ ಕಾರಣವೇನು?


ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳ ನಡುವೆ ಕ್ಲ್ಯಾಶ್ ಬೇಡ ಎಂದು ಅಳೆದು ತೂಗಿ ರಿಲೀಸ್ ಡೇಟ್ ಫಿಕ್ಸ್ ಮಾಡುತ್ತಾರೆ. ಆದರೆ, ಈ ಎರಡು ಸಿನಿಮಾಗಳ ವಿಚಾರದಲ್ಲಿ ಈ ನಿರ್ಧಾರ ಯಾಕೆ ಎನ್ನುವ ಪ್ರಶ್ನೆ ಎದ್ದಿದೆ. ಸ್ಟಾರ್ ನಟರು ವರ್ಷಕ್ಕೆ 2 ಸಿನಿಮಾ ಮಾಡಬೇಕು ಎನ್ನುವ ಕೂಗು ಇದೆ, ಆದರೆ 2 ವಾರಕ್ಕೆ 2 ಸಿನಿಮಾ ಬಿಡುಗಡೆ ಮಾಡುವ ಸಾಹಸ ಯಾಕೆ ಎನ್ನುವಂತಾಗಿದೆ. ಸಿನಿಮಾ ವಲಯದ ಟಾಕ್ ಪ್ರಕಾರ, ‘ಪಿನಾಕ’ ಸಿನಿಮಾ ಬಗ್ಗೆ ಸ್ವತಃ ಗಣೇಶ್ ಅವರಿಗೆ ದೊಡ್ಡ ನಂಬಿಕೆ ಇಲ್ಲ. ಅದಕ್ಕೆ ಈ ಲೆಕ್ಕಾಚಾರ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

Golden Star Ganesh Movies

Golden Star Ganesh Movies: ಮಂತ್ರವಾದಿ ಅವತಾರದಲ್ಲಿ ಗಣೇಶ್: ‘ಪಿನಾಕ’ ಚಿತ್ರದ ವಿವರ


ಮೊದಲಿನಿಂದಲೂ ‘ಪಿನಾಕ’ ಅಷ್ಟೇನು ಕುತೂಹಲ ಮೂಡಿಸಿಲ್ಲ. ಚಿತ್ರದ ಪೋಸ್ಟರ್ಸ್, ಟೀಸರ್ ಕೂಡ ಗಮನ ಸೆಳೆಯಲಿಲ್ಲ. ಗಣೇಶ್ ಅವರನ್ನು ಮಂತ್ರವಾದಿ ಅವತಾರದಲ್ಲಿ ಊಹಿಸಿಕೊಳ್ಳಲು ಅಭಿಮಾನಿಗಳಿಗೆ ಇಷ್ಟವಾಗುತ್ತಿಲ್ಲ. ಈ ಚಿತ್ರಕ್ಕೆ ಕೊರಿಯೋಗ್ರಫರ್ ಧನಂಜಯ್ ಆಕ್ಷನ್ ಕಟ್ ಹೇಳಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ಹಾಗೂ ಕೃತಿ ಪ್ರಸಾದ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Golden Star Ganesh Movies

Golden Star Ganesh Movies: ಭರವಸೆ ಮೂಡಿಸಿರುವ ‘ಬೃಂದಾವಿಹಾರಿ’


‘ಪಿನಾಕ’ ಚಿತ್ರದ ಮೇಲಿನ ನಂಬಿಕೆ ಕಮ್ಮಿ ಇರುವ ಕಾರಣಕ್ಕೋ ಏನೋ, ಸ್ವತಃ ಗೋಲ್ಡನ್ ಸ್ಟಾರ್ ‘ಬೃಂದಾವಿಹಾರಿ’ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸೂಪರ್ ಹಿಟ್ ‘ಕೃಷ್ಣಂ ಪ್ರಣಯ ಸಖಿ’ ಕಾಂಬಿನೇಷನ್‌ನಲ್ಲಿ ಬರ್ತಿರೋ ಮತ್ತೊಂದು ರೊಮ್ಯಾಂಟಿಕ್ ಮ್ಯೂಸಿಕಲ್ ಎಂಟರ್‌ಟೈನ್ ಸಿನಿಮಾ ಇದಾಗಿದೆ. ಶ್ರೀನಿವಾಸ್ ರಾಜು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಸಮೃದ್ಧಿ ವಿ. ಮಂಜುನಾಥ್ ಹಣ ಹೂಡಿದ್ದಾರೆ. ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮಾ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ.

ಮುಂದಿನ ವರ್ಷಕ್ಕೂ ಇದೆ ಬಿಗ್ ಪ್ಲಾನ್:
ಇಷ್ಟೇ ಅಲ್ಲದೆ, ‘ಡಿಜಾಂಗೋ ಕೃಷ್ಣಮೂರ್ತಿ’ ಹಾಗೂ ‘ನಿಮ್ಮ ಸುಖಾಗಮನ ಬಯಸುವ’ ಎಂಬ ಮತ್ತೆರಡು ಸಿನಿಮಾಗಳಲ್ಲಿ ಗಣೇಶ್ ನಟಿಸುತ್ತಿದ್ದು, ಮುಂದಿನ ವರ್ಷ ಈ ಚಿತ್ರಗಳು ತೆರೆಗೆ ಬರಲಿವೆ.

Also Read : Shivarajkumar Dad Movie: ‘ಡ್ಯಾಡ್’ ಶೂಟಿಂಗ್ ಮುಗಿಸಿದ ಸೆಂಚುರಿ ಸ್ಟಾರ್: ಮತ್ತೆ ಡಾಕ್ಟರ್ ಅವತಾರದಲ್ಲಿ ಶಿವಣ್ಣ!

Chandan Naik

ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

Comments

Leave a Comment