HOME

stories

STORIES

google-news

FOLLOW

FOLLOW

JOIN

ಅಪ್ಪಿ-ತಪ್ಪಿಯೂ ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ

Updated: 08-12-2025, 03.56 PM

Follow us:


ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತು ಸಕಾರಾತ್ಮಕ ಅಥವಾ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ವಾಸ್ತು ನಿಯಮಗಳನ್ನು ಅನುಸರಿಸಿ ಮನೆಯನ್ನು ಸ್ವಚ್ಛವಾಗಿ ಹಾಗೂ ಶುದ್ಧವಾಗಿ ಇಟ್ಟುಕೊಂಡರೆ ಗೃಹದೊಳಗೆ ಸಕಾರಾತ್ಮಕ ಶಕ್ತಿ ಸೇರುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ. ಹಾಗಾಗಿ ಮನೆಯಲ್ಲಿ ವಸ್ತುಗಳನ್ನು ಸರಿಯಾದ ದಿಕ್ಕು ಹಾಗೂ ಸ್ಥಳದಲ್ಲಿ ಇಡುವುದು ಬಹಳ ಮಹತ್ವವಾಗಿದ್ದು, ವಾಸ್ತುವಿಗೆ ವಿರುದ್ಧವಾಗಿ ಇಡುವ ವಸ್ತುಗಳಿಂದ ಮನೆಯಲ್ಲಿ ಅಶಾಂತಿ ಹಾಗೂ ಕಷ್ಟ-ನಷ್ಟ ಉಂಟಾಗುತ್ತದೆ. ಅದರಲ್ಲೂ ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ವಸ್ತುಗಳು ಮನೆಯಲ್ಲಿ ಇಡುವುದು ಅಶುಭ ಎಂದು ವಿವರಿಸಲಾಗಿದ್ದು, ಒಡೆದ ಪಾತ್ರೆಗಳು ಮತ್ತು ಹಾಳಾದ ವಸ್ತುಗಳನ್ನು ಮನೆಯಲ್ಲಿಟ್ಟು ಕೊಳ್ಳುವುದರಿಂದ ನಾನಾ ರೀತಿಯ ತೊಂದರೆಗಳಿಗೆ ಹಾಗೂ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಹೌದು, ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಮುರಿದು ಹಾಳಾದ ಮರದ ವಸ್ತುಗಳು, ಕಾರ್ಯನಿರ್ವಹಿಸದ ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಒಡೆದ ಪಾತ್ರೆಗಳನ್ನು ಇಟ್ಟುಕೊಳ್ಳುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಕುಂಠಿತಗೊಳ್ಳುವಂತೆ ಮಾಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ವಿಶೇಷವಾಗಿ ಮುರಿದ ಮರದ ವಸ್ತುಗಳು, ಹಾಳಾದ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಒಡೆದ ಪಾತ್ರೆಗಳನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಇವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಕುಟುಂಬದ ಸಂತೋಷ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ದುಷ್ಪರಿಣಾಮ ಬೀರುತ್ತವೆ.


ಹಾಗಾದರೆ ಬನ್ನಿ ವಾಸ್ತು ಪ್ರಕಾರ ಯಾವ ವಸ್ತುಗಳನ್ನು ಮನೆಯಲ್ಲಿ ಇಡಬಾರದು? ಈ ಬಗ್ಗೆ ವಾಸ್ತು ಶಾಸ್ತ್ರ ಏನೇಳುತ್ತದೆ? ಎಂಬ ಮಾಹಿತಿ ಇಲ್ಲಿದೆ.


ತುಕ್ಕು ಹಿಡಿದ ವಸ್ತುಗಳು
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ತುಕ್ಕು ಹಿಡಿದ ಹಳೆಯ ವಸ್ತುಗಳನ್ನು ಇಟ್ಟುಕೊಳ್ಳುವುದೂ ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಇಂತಹ ವಸ್ತುಗಳು ಮನೆಯಲ್ಲಿನ ಎನರ್ಜಿ ಫ್ಲೋಗೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಕುಟುಂಬದೊಳಗೆ ಅಶಾಂತಿ, ಜಗಳ ಹಾಗೂ ಅಸ್ಥಿರತೆಗೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಉಪಯೋಗಕ್ಕೆ ಬಾರದ, ತುಕ್ಕು ಹಿಡಿದ ಕಬ್ಬಿಣದ ಸಾಮಾಗ್ರಿಗಳು, ಹಳೆಯ ಲೋಹದ ವಸ್ತುಗಳು ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ದಾರಿದ್ರ‍್ಯ ಎದುರಾಗುತ್ತದೆ.


ಒಡೆದ ಪಾತ್ರೆಗಳು
ಮನೆಯಲ್ಲಿ ತಪ್ಪಿಯೂ ಒಡೆದು ಹೋಗಿರುವಂತಹ ಪಾತ್ರಗಳನ್ನು ಇಟ್ಟುಕೊಳ್ಳಬಾರದು. ಇದು ವಾಸ್ತು ಶಾಸ್ತ್ರಕ್ಕೆ ವಿರುದ್ಧವಾಗಿದ್ದು, ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಸುಲಭವಾಗಿ ನಕಾರಾತ್ಮಕ ಶಕ್ತಿಗಳ ಪ್ರವೇಶ ಆಗುತ್ತದೆ. ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲಿ ತಪ್ಪಿಯೂ ಒಡೆದ ಪಾತ್ರೆಗಳನ್ನು ಇಟ್ಟುಕೊಳ್ಳಲು ಹೋಗಬೇಡಿ.


ಇದರ ಹೊರತಾಗಿ ವಾಸ್ತು ಶಾಸ್ತ್ರದ ಪ್ರಕಾರ ಮನಯಲ್ಲಿ ಒಡೆದ ಗಾಜು, ಒಡೆದ ಕನ್ನಡಿ, ನಿಂತು ಹೋದ ಗಡಿಯಾರ ಇತ್ಯಾದಿ ಎಂದಿಗೂ ಇಡಬಾರದು. ಈ ರೀತಿ ಮಾಡುವುದರಿಂದ ಮನೆಯ ಸದಸ್ಯರ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಅಂತ ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಆರ್ಥಿಕ ಮುಗ್ಗಟ್ಟು ಕೂಡ ಎದುರಿಸಬೇಕಾಗುತ್ತದೆ.

Leave a Comment

About Us

SandalwoodSuddi — ಕನ್ನಡದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ನಮ್ಮ ಧ್ಯೇಯ ಸ್ಪಷ್ಟವಾಗಿದೆ: ಕನ್ನಡ ಓದುಗರಿಗೆ ತಾಜಾ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವುದು. ಸಿನಿಮಾದಿಂದ ರಾಜಕೀಯ, ಕ್ರೀಡೆ, ತಂತ್ರಜ್ಞಾನ, ಶಿಕ್ಷಣ, ಜೀವನಶೈಲಿ ಮತ್ತು ಮನರಂಜನೆಯವರೆಗೆ — ನಾವು ನಿಮ್ಮ ಮೊಬೈಲ್ ಮತ್ತು ವೆಬ್‌ನಲ್ಲಿ ಎಲ್ಲಾ ಕ್ಷೇತ್ರಗಳ ಇತ್ತೀಚಿನ ನವೀಕರಣಗಳನ್ನು ತಲುಪಿಸುತ್ತೇವೆ.