HOME

stories

STORIES

google-news

FOLLOW

FOLLOW

JOIN

ಈ ವಸ್ತು ಮನೆಯಲ್ಲಿದ್ದರೇ ಹಣದ ಕೊರತೆ ಬರುವುದಿಲ್ಲ

Updated: 25-11-2025, 04.00 PM

Follow us:

ಮನೆಯಲ್ಲಿರುವ ಕೆಲ ವಸ್ತುಗಳ ವಾಸ್ತುವಿನ ಮೇಲೆ, ಆ ಗೃಹದ ನೆಮ್ಮದಿ ಮತ್ತು ಶಾಂತಿ ನಿರ್ಧರಿತವಾಗಿರುತ್ತದೆ. ಮನೆಯ ಪ್ರತಿಯೊಂದು ಕೋಣೆಯೂ ವಾಸ್ತು ತತ್ವಗಳಿಗೆ ಅನುಗುಣವಾಗಿದ್ದಾಗ ಮಾತ್ರ ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಸರಳವಾದ ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದರ ಮೂಲಕ ಮನೆಗೆ ಸುಖ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ.
ಹಾಗೇ ಮನೆಯಲ್ಲಿರುವ ವಸ್ತುಗಳು ಸರಿಯಾದ ದಿಕ್ಕು ಮತ್ತು ಸ್ಥಳದಲ್ಲಿ ಇದ್ದರೆ ಮಾತ್ರ ಶುಭಫಲಗಳು ಲಭಿಸುತ್ತದೆ. ಅವು ಮನೆಯ ಸದಸ್ಯರ ಮಾನಸಿಕ ಶಾಂತಿ ಮತ್ತು ಸಂತೋಷದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಹಾಗೇ ಹಲವು ಬಾರಿ ನಾವು ಅಂದವಾಗಿವೆ ಎಂದು, ಅಥವಾ ಇಷ್ಟವಾಗಿದೆ ಎಂದು ಕೆಲವು ವಸ್ತುಗಳನ್ನು ಮನೆಗೆ ತಂದು ಇಟ್ಟುಕೊಳ್ಳುತ್ತೇವೆ. ಆದರೆ ಮನೆಗೆ ಬರುವ ಅಥವಾ ತರುವ ಪ್ರತಿಯೊಂದು ವಸ್ತುಗಳು ಉತ್ತಮ ಫಲ ನೀಡುತ್ತದೆ ಎನ್ನಲು ಸಾಧ್ಯವಿಲ್ಲ. ಕೆಲವೊಮ್ಮೆ ಸಂಕಷ್ಟಗಳು, ಒತ್ತಡ ಅಥವಾ ಅಶಾಂತಿಗೂ ಕಾರಣವಾಗಬಹುದು.
ಮನೆಗೆ ಕೆಲವು ವಸ್ತುಗಳನ್ನು ತಂದು ಇಟ್ಟರೆ ನೆಗೆಟಿವ್ ಶಕ್ತಿಗಳು ಹೆಚ್ಚಾಗಿ, ಕೆಲಸಗಳಲ್ಲಿ ಅಡ್ಡಿಗಳು ಹಾಗೂ ಅನಾವಶ್ಯಕ ಆತಂಕಗಳು ಎದುರಾಗಬಹುದು. ಇಂತಹ ಸಂದರ್ಭಗಳಲ್ಲಿ ಮನಸ್ಸೂ ಸಹ ಸ್ಥಿರವಾಗಿರದೆ, ಉಲ್ಲಾಸವಿಲ್ಲದ ಸ್ಥಿತಿಗೆ ತಲುಪುತ್ತದೆ. ಆದರೆ ಕೆಲವು ವಿಶೇಷ ವಸ್ತುಗಳು ಮನೆಯಲ್ಲಿ ಇದ್ದರೆ ಅವು ಸಕಾರಾತ್ಮಕ ಶಕ್ತಿ ಹೆಚ್ಚಿಸುತ್ತವೆ. ಜತೆಗೆ ಧನಲಾಭ, ಆರ್ಥಿಕ ಸ್ಥಿರತೆ ಮತ್ತು ಪ್ರಗತಿಗೂ ಕಾರಣವಾಗುತ್ತವೆ. ಇದರಿಂದ ಮನೆಯಲ್ಲಿಯೇ ಹಣದ ಕೊರತೆಯೂ ಎದುರಾಗುವುದಿಲ್ಲ ಹಾಗೂ ಸಮೃದ್ಧಿ ನೆಲೆಸುತ್ತದೆ. ಅಂತಹ ವಸ್ತುಗಳಲ್ಲಿ ಡ್ರೀಮ್ ಕ್ಯಾಚರ್ ಕೂಡ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ಇದನ್ನು ಮನೆಯ ಅಲಂಕಾರದ ವಸ್ತುವನ್ನಾಗಿ ಬಳಸಲಾಗುತ್ತದೆ. ಇದು ಮನೆಯ ಅಂದವನ್ನ ಹೆಚ್ಚಿಸುವ ಜತೆಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದನ್ನ ಮನೆಯಲ್ಲಿ ಹಾಕಿದರೆ ಏನೆಲ್ಲಾ ಲಾಭವಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.


ಈ ದಿಕ್ಕು ಉತ್ತಮ
ವಾಸ್ತು ಪ್ರಕಾರ, ಡ್ರೀಮ್ ಕ್ಯಾಚರ್ ಅನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಅಥವಾ ಮಲಗುವ ಕೋಣೆಯಲ್ಲಿ ಕಿಟಕಿಯ ಬಳಿ ನೇತುಹಾಕುವುದು ಅತ್ಯಂತ ಮಂಗಳ ಎಂದು ಪರಿಗಣಿಸಲಾಗಿದೆ. ಇದರಿಂದ ಮನೆಯ ಸದಸ್ಯರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಇನ್ನು ಡ್ರೀಮ್ ಕ್ಯಾಚರ್ ಕೇವಲ ಅಲಂಕಾರಿಕ ವಸ್ತು ಮಾತ್ರವಲ್ಲ, ಅದು ಮಾನಸಿಕ ಮತ್ತು ಆಧ್ಯಾತ್ಮಿಕ ಭಾವನೆಗಳನ್ನು ಸರಿದೂಗಿಸಿಕೊಂಡು ಹೋಗಲು ಸಹಾಯ ಮಾಡುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ತಡೆದು, ಶಾಂತಿಯುತ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಮನಸ್ಸಿನ ಆತಂಕವನ್ನು ಕಡಿಮೆ ಮಾಡಿ, ಆಂತರಿಕ ಶಾಂತಿಯನ್ನು ಹೆಚ್ಚಿಸುತ್ತದೆ. ಇದನ್ನು ಸರಿಯಾದ ಜಾಗದಲ್ಲಿ ಇಡುವುದರಿಂದ ಕೆಲಸದ ಸ್ಥಳದಲ್ಲಿ ಯಶಸ್ಸು ಮತ್ತು ಮನೆಯಲ್ಲಿ ಸಂತೋಷ ವೃದ್ಧಿಯಾಗುತ್ತದೆ. ಆದರೆ ನೆನಪಿಡಿ, ಡ್ರೀಮ್ ಕ್ಯಾಚರ್ ಅನ್ನು ಬಾತ್‌ರೂಮ್ ಅಥವಾ ಅಡುಗೆಮನೆಯಂತಹ ಸ್ಥಳಗಳಲ್ಲಿ ಇಡುವುದು ಅಶುಭಕರ.

Leave a Comment

About Us

SandalwoodSuddi — ಕನ್ನಡದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ನಮ್ಮ ಧ್ಯೇಯ ಸ್ಪಷ್ಟವಾಗಿದೆ: ಕನ್ನಡ ಓದುಗರಿಗೆ ತಾಜಾ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವುದು. ಸಿನಿಮಾದಿಂದ ರಾಜಕೀಯ, ಕ್ರೀಡೆ, ತಂತ್ರಜ್ಞಾನ, ಶಿಕ್ಷಣ, ಜೀವನಶೈಲಿ ಮತ್ತು ಮನರಂಜನೆಯವರೆಗೆ — ನಾವು ನಿಮ್ಮ ಮೊಬೈಲ್ ಮತ್ತು ವೆಬ್‌ನಲ್ಲಿ ಎಲ್ಲಾ ಕ್ಷೇತ್ರಗಳ ಇತ್ತೀಚಿನ ನವೀಕರಣಗಳನ್ನು ತಲುಪಿಸುತ್ತೇವೆ.