HOME

stories

STORIES

google-news

FOLLOW

FOLLOW

JOIN

ಶ್ರೀ ರಾಯರ ಅನುಗ್ರಹಕ್ಕಾಗಿ ಗುರುವಾರ ಹೀಗೆ ಪೂಜೆ ಮಾಡಿ

Updated: 18-12-2025, 11.00 AM

Follow us:


ರಾಯರ ಪೂಜೆ ಎಂದೂ ಕರೆಯಲ್ಪಡುವ ರಾಘವೇಂದ್ರ ಪೂಜೆಯು 16 ನೇ ಶತಮಾನದ ಸಂತ ಮತ್ತು ಗುರುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ಸಮರ್ಪಿತವಾದ ಪೂಜ್ಯ ಆಚರಣೆಯಾಗಿದೆ. ಶ್ರೀ ರಾಘವೇಂದ್ರ ತೀರ್ಥ ಎಂದೂ ಕರೆಯಲ್ಪಡುವ ಗುರು ರಾಘವೇಂದ್ರ ಸ್ವಾಮಿಗಳು ದಕ್ಷಿಣ ಭಾರತದಲ್ಲಿ 17 ನೇ ಶತಮಾನದಲ್ಲಿ ವಾಸಿಸುತ್ತಿದ್ದ ಹಿಂದೂ ಸಂತ ಮತ್ತು ತತ್ವಜ್ಞಾನಿಯಾಗಿದ್ದಾರೆ. ರಾಘವೇಂದ್ರ ಸ್ವಾಮಿಗಳು ಹಿಂದೂ ತತ್ತ್ವಶಾಸ್ತ್ರದ ಪ್ರಮುಖ ಶಾಲೆಗಳಲ್ಲಿ ಒಂದಾದ ಮಧ್ವಾಚಾರ್ಯರ ದ್ವೈತ ತತ್ತ್ವಶಾಸ್ತ್ರದ ಪ್ರತಿಪಾದಕರಾಗಿದ್ದರು. ರಾಘವೇಂದ್ರ ಸ್ವಾಮಿಯನ್ನು ಗುರುವಾರದ ದಿನದಂದು ಪೂಜಿಸುವ ಸಂಪ್ರದಾಯವಿದೆ.

ಗುರುವಾರ ರಾಯರ ಆರಾಧನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಸುಖ ಸಮೃದ್ಧಿ ನಮ್ಮದಾಗುತ್ತದೆ. ರಾಘವೇಂದ್ರ ಸ್ವಾಮಿಯ ಭಕ್ತರು ಇಂದು ರಾಯರ ಮಠಕ್ಕೆ ತೆರಳಿ ಪೂಜೆ ಸಲ್ಲಿಸುವುದು ಸಾಮಾನ್ಯ. ಅದರ ಹೊರತಾಗಿ ಮನೆಯಲ್ಲಿಯೂ ರಾಘವೇಂದ್ರ ಸ್ವಾಮಿಗಳ ಪೂಜೆ ಮಾಡಿಕೊಳ್ಳಬಹುದು.

ಸತತವಾಗಿ ಏಳು ಗುರುವಾರಗಳಂದು ವ್ರತವಿದ್ದು ರಾಯರ ಪೂಜೆ ಮಾಡುವುದರಿಂದ ಮನೆಯಲ್ಲಿ ಅಶಾಂತಿ, ಕಲಹ, ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳು ದೂರವಾಗಿ ನೆಮ್ಮದಿ ಮೂಡುವುದು. ಮನೆಯಲ್ಲಿ ರಾಘವೇಂದ್ರ ಸ್ವಾಮಿಯ ವಿಗ್ರಹವಿದ್ದರೆ ಅದನ್ನು ಸ್ವಚ್ಛಗೊಳಿಸಿ ಕುಂಕುಮ ಮತ್ತು ಶ್ರೀಗಂಧವನ್ನು ಹಚ್ಚಿ.

ನೆನಪಿರಲಿ, ರಾಘವೇಂದ್ರ ಸ್ವಾಮಿಗೆ ತುಳಸಿಯ ಹಾರ ಅತ್ಯಂತ ಪ್ರಿಯವಾಗಿದ್ದು, ಇದನ್ನು ಪೂಜೆಯಲ್ಲಿ ಬಳಸಲೇಬೇಕು. ತಾಜಾ ಹಣ್ಣು, ತೆಂಗಿನ ಕಾಯಿ, ವೀಳ್ಯದೆಲೆಯಿಂದ ನೈವೇದ್ಯ ಮಾಡಬೇಕು. ದೀಪ ಬೆಳಗಿ ರಾಘವೇಂದ್ರ ಸ್ವಾಮಿಗಳ ಕುರಿತಾಗಿ ‘ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರಥಾಯ ಚ ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನುವೇ’ ಎಂದು ಮಂತ್ರ ಹೇಳುತ್ತಾ ಪೂಜೆ ಮಾಡಿ. ಈ ರೀತಿ ಪ್ರತೀ ಗುರುವಾರ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ, ಸಮೃದ್ಧಿ ಉಂಟಾಗುತ್ತದೆ.

Leave a Comment

About Us

SandalwoodSuddi — ಕನ್ನಡದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ನಮ್ಮ ಧ್ಯೇಯ ಸ್ಪಷ್ಟವಾಗಿದೆ: ಕನ್ನಡ ಓದುಗರಿಗೆ ತಾಜಾ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವುದು. ಸಿನಿಮಾದಿಂದ ರಾಜಕೀಯ, ಕ್ರೀಡೆ, ತಂತ್ರಜ್ಞಾನ, ಶಿಕ್ಷಣ, ಜೀವನಶೈಲಿ ಮತ್ತು ಮನರಂಜನೆಯವರೆಗೆ — ನಾವು ನಿಮ್ಮ ಮೊಬೈಲ್ ಮತ್ತು ವೆಬ್‌ನಲ್ಲಿ ಎಲ್ಲಾ ಕ್ಷೇತ್ರಗಳ ಇತ್ತೀಚಿನ ನವೀಕರಣಗಳನ್ನು ತಲುಪಿಸುತ್ತೇವೆ.