HOME

stories

STORIES

google-news

FOLLOW

FOLLOW

JOIN

ಹಣದ ಸಮಸ್ಯೆಗೆ ಮುಕ್ತಿ ನೀಡುತ್ತವೆ ಈ ವಿಗ್ರಹಗಳು

Updated: 12-12-2025, 10.30 AM

Follow us:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವೂ ಅದರದೇ ಆದ ಶಕ್ತಿಯನ್ನು ಹೊಂದಿದೆ. ಅದು ಧನಾತ್ಮಕವಾಗಿದ್ದರೂ ಇರಬಹುದು, ನಕಾರಾತ್ಮಕವಾಗಿದ್ದರೂ ಇರಬಹುದು. ಈ ಶಕ್ತಿಗಳು ಮನೆಯ ವಾತಾವರಣ, ಅಲ್ಲಿ ವಾಸಿಸುವವರ ಅದೃಷ್ಟ, ಆರೋಗ್ಯ ಮತ್ತು ಸಂಬಂಧಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಹಾಗಾಗಿ ಮನೆಯಲ್ಲಿ ಯಾವ ವಸ್ತುಗಳನ್ನು ಇರಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.

ವಾಸ್ತು ತಜ್ಞರ ಪ್ರಕಾರ, ಮನೆಯೊಳಗೆ ಸಕಾರಾತ್ಮಕ ಶಕ್ತಿ ಹೆಚ್ಚಿಸಲು ಕೆಲವು ವಿಶೇಷ ವಿಗ್ರಹಗಳು ಮತ್ತು ಅಲಂಕಾರ ವಸ್ತುಗಳನ್ನು ಇರಿಸಬಹುದು. ಇವು ಕೇವಲ ಅಲಂಕಾರಕ್ಕೆ ಮಾತ್ರವಲ್ಲ, ಮನೆಯಲ್ಲಿ ಶುಭಫಲಗಳನ್ನು ಉಂಟುಮಾಡುವ ಶಕ್ತಿಯನ್ನು ಹೊಂದಿದ್ದು, ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಈ ವಿಗ್ರಹಗಳು ಆ ಮನೆಗೆ ಅದೃಷ್ಟ ತರುತ್ತದೆ ಹಾಗೂ ಹಣಕಾಸು ವಿಚಾರದಲ್ಲಿ ಅಭಿವೃದ್ಧಿ ಹೊಂದಲು ಸಹಕಾರಿ.

ವಾಸ್ತು ಶಾಸ್ತ್ರದಲ್ಲಿ ಹೀಗೆ ಮನೆಯಲ್ಲಿ ಇಡಲು ಶಿಫಾರಸು ಮಾಡಿರುವ ಪ್ರಮುಖ ವಿಗ್ರಹಗಳಲ್ಲಿ ಮೊಲ, ಮೀನು, ಆಮೆ, ಗಣೇಶ, ಲಕ್ಷ್ಮೀ, ಕಾಮಧೇನು ಹಸು ಸೇರಿವೆ. ಇವು ಪ್ರತಿಯೊಂದೂ ವಿಭಿನ್ನ ಪ್ರಯೋಜನಗಳನ್ನು ನೀಡುತ್ತವೆ. ಉದಾಹರಣೆಗೆ, ಮೊಲವು ಅದೃಷ್ಟವನ್ನು ಆಕರ್ಷಿಸಲಿದ್ದು, ಮನೆಯಲ್ಲಿಡುವ ಮೀನಿನ ಅಕ್ವೇರಿಯಂ ಹಣಕಾಸು ಪ್ರಗತಿಗೆ ಕಾರಣವಾಗುತ್ತದೆ. ಆಮೆಯ ವಿಗ್ರಹ ಸಮೃದ್ಧಿ ಹಾಗೂ ದೀರ್ಘಾಯುಷ್ಯಕ್ಕೆ ಸಂಕೇತ ಆಗಿದ್ದು, ಕಾಮಧೇನು ವಿಗ್ರಹ ಮನೆಗೆ ಐಶ್ವರ್ಯ ಮತ್ತು ಶಾಂತಿಯನ್ನು ತರುತ್ತದೆ.

ಈ ವಸ್ತುಗಳನ್ನು ಮನೆಯಲ್ಲಿ ಸೂಕ್ತ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಮನೆಗೆ ಇಂತಹ ವಿಗ್ರಹಗಳನ್ನು ತರಲು ನಿರ್ಧರಿಸುವ ಮೊದಲು ವಾಸ್ತು ತಜ್ಞರ ಸಲಹೆ ಪಡೆಯುವುದು ಉತ್ತಮ. ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ, ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ ವರ್ಷಪೂರ್ತಿ ಶುಭಫಲ ದೊರೆಯುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.

ಮೊಲ: ಮೊಲವನ್ನು ವಾಸ್ತುವಿನಲ್ಲಿ ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿಯ ಪ್ರತೀಕ ಎಂದು ಪರಿಗಣಿಸಲಾಗಿದ್ದು, ಮನೆಯಲ್ಲಿ ಮೊಲದ ವಿಗ್ರಹವಿದ್ದರೆ ದುಷ್ಟ ಶಕ್ತಿಗಳು ದೂರವಾಗುತ್ತವೆ.

ಮೀನು: ಅಕ್ವೇರಿಯಂ ಕೇವಲ ಅಲಂಕಾರಿಕ ವಸ್ತು ಆಗಿರದೆ ವಾಸ್ತು ಶಾಸ್ತ್ರದಲ್ಲಿಯೂ ಇದಕ್ಕೆ ವಿಶೇಷ ಮಹತ್ವವಿದೆ. ಮೀನುಗಳು ಮನೆಯ ಆರ್ಥಿಕ ಸ್ಥಿರತೆಯನ್ನು ಬಲಪಡಿಸಲಿದ್ದು, ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನೂ ಹೆಚ್ಚಿಸುತ್ತವೆ. ವಾಸ್ತು ಪ್ರಕಾರ, ಅಕ್ವೇರಿಯಂ ಅನ್ನು ಮನೆಯ ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡುವುದು ಉತ್ತಮ.

ಆಮೆ: ಆಮೆ ವಾಸ್ತು ಶಾಸ್ತ್ರದಲ್ಲಿ ಸಮೃದ್ಧಿ ಮತ್ತು ದೀರ್ಘಾಯುಷ್ಯದ ಸಂಕೇತ. ಮನೆಯಲ್ಲಿ ಆಮೆಯ ವಿಗ್ರಹ ಇಟ್ಟಲ್ಲಿ ಹಣಕಾಸಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಕೆಲಸಗಳಲ್ಲಿನ ಅಡೆತಡೆಗಳು ದೂರವಾಗುತ್ತವೆ. ಕುಟುಂಬ ಸದಸ್ಯರ ಆರೋಗ್ಯಕ್ಕೂ ಇದು ಶುಭಕರ ಎಂದು ವಾಸ್ತು ಗುರುಗಳು ವಿವರಿಸುತ್ತಾರೆ.

ಕಾಮಧೇನು: ಹಿಂದೂ ಧರ್ಮದಲ್ಲಿ ಹಸುವನ್ನು ದೇವರಂತೆ ಕಾಣಲಾಗುತ್ತದೆ. ಮನೆಯಲ್ಲಿ ಹಿತ್ತಾಳೆಯ ಕಾಮಧೇನುವಿನ ವಿಗ್ರಹವನ್ನು ಇಟ್ಟರೆ, ಇದು ನಕಾರಾತ್ಮಕ ಶಕ್ತಿಗೆ ಮುಕ್ತಿ ನೀಡುತ್ತದೆ. ಮನೆಯಲ್ಲಿ ಸಂತೋಷ, ಸಮೃದ್ಧಿಯನ್ನು ತರುತ್ತದೆ.

Leave a Comment

About Us

SandalwoodSuddi — ಕನ್ನಡದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸುದ್ದಿ ವೇದಿಕೆಗಳಲ್ಲಿ ಒಂದಾಗಿದೆ. ನಮ್ಮ ಧ್ಯೇಯ ಸ್ಪಷ್ಟವಾಗಿದೆ: ಕನ್ನಡ ಓದುಗರಿಗೆ ತಾಜಾ, ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವುದು. ಸಿನಿಮಾದಿಂದ ರಾಜಕೀಯ, ಕ್ರೀಡೆ, ತಂತ್ರಜ್ಞಾನ, ಶಿಕ್ಷಣ, ಜೀವನಶೈಲಿ ಮತ್ತು ಮನರಂಜನೆಯವರೆಗೆ — ನಾವು ನಿಮ್ಮ ಮೊಬೈಲ್ ಮತ್ತು ವೆಬ್‌ನಲ್ಲಿ ಎಲ್ಲಾ ಕ್ಷೇತ್ರಗಳ ಇತ್ತೀಚಿನ ನವೀಕರಣಗಳನ್ನು ತಲುಪಿಸುತ್ತೇವೆ.