Komal Rolex Kannada Movie: ಸ್ಯಾಂಡಲ್ವುಡ್ನಲ್ಲಿ ಸದ್ಯಕ್ಕೆ ದೊಡ್ಡ ಬಜೆಟ್ ಸಿನಿಮಾಗಳ ಹಾವಳಿ ಅಷ್ಟಾಗಿ ಇಲ್ಲದೇ ಇದ್ದರೂ, ಸ್ಟಾರ್ಗಳ ಸಿನಿಮಾಗಳು ಒಂದೊಂದಾಗಿಯೇ ಥಿಯೇಟರ್ಗೆ ಬರೋಕೆ ರೆಡಿಯಾಗುತ್ತಿವೆ. ಚಿತ್ರೀಕರಣ ಮುಗಿಸಿ ರಿಲೀಸ್ಗೆ ಕಾಯ್ತಿರೋ ಸಿನಿಮಾಗಳ ಸಾಲಿಗೆ ಈಗ ಕಾಮಿಡಿ ಸ್ಟಾರ್ ಕೋಮಲ್ ಕುಮಾರ್ ಅವರ ‘ರೋಲೆಕ್ಸ್’ ಕೂಡ ಸೇರಿಕೊಂಡಿದೆ.
ಯಾವಾಗಲೂ ಡಿಫರೆಂಟ್ ಕಥೆ, ಸೂಪರ್ ಕಾಮಿಡಿ ಮೂಲಕ ಪ್ರೇಕ್ಷಕರನ್ನು ನಗಿಸೋ ಕೋಮಲ್, ಈಗ ಮತ್ತೊಂದು ಪಕ್ಕಾ ಎಂಟರ್ಟೈನರ್ ಚಿತ್ರದೊಂದಿಗೆ ಬರೋಕೆ ಸಜ್ಜಾಗಿದ್ದಾರೆ. ಮಧು ಫಿಲಂ ಸರ್ಕ್ಯೂಟ್ಸ್ ಬ್ಯಾನರ್ನಲ್ಲಿ ತಯಾರಾಗ್ತಿರೋ ಈ ಸಿನಿಮಾದ ಶೂಟಿಂಗ್ ಈಗ ಆಲ್ಮೋಸ್ಟ್ ಕಂಪ್ಲೀಟ್ ಆಗಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಸಿನಿಪ್ರಿಯರಿಗೆ ಒಂದು ಬಿಗ್ ಸರ್ಪ್ರೈಸ್ ಕೊಟ್ಟಿದೆ. ಅದೇನೆಂದರೆ, ಚಿತ್ರಕ್ಕೆ ಆ್ಯಕ್ಷನ್ ಸ್ಟಾರ್ ವಿನೋದ್ ಪ್ರಭಾಕರ್ ಎಂಟ್ರಿ ಕೊಟ್ಟಿದ್ದಾರೆ!
Komal Rolex Kannada Movie: ಹೊಸ ಲುಕ್ನಲ್ಲಿ ಕೋಮಲ್; ಜೊತೆಯಾದ ‘ಟೈಗರ್’ ವಿನೋದ್
ಈ ಹಿಂದೆ ‘ಬಿಲ್ ಗೇಟ್ಸ್’ ಸಿನಿಮಾ ಮಾಡಿದ್ದ ಶ್ರೀನಿವಾಸ್ ಮಂಡ್ಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ತಮ್ಮದೇ ಆದ ಖಡಕ್ ಕಾಮಿಡಿ ಟೈಮಿಂಗ್ಗೆ ಹೆಸರಾಗಿರುವ ಕೋಮಲ್, ಈ ಸಿನಿಮಾದಲ್ಲಿ ಹಿಂದೆಂದೂ ಕಾಣಿಸಿಕೊಳ್ಳದ ತೀರಾ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಜೋಡಿಯಾಗಿ ನಟಿ ಸೋನಾಲ್ ಮೊಂತೆರೊ ನಟಿಸಿದ್ದಾರೆ.
ಇನ್ನು ಸಿನಿಮಾದ ದೊಡ್ಡ ಹೈಲೈಟ್ ಅಂದ್ರೆ ಅದು ಟೈಗರ್’ ವಿನೋದ್ ಪ್ರಭಾಕರ್ ಅವರ ಎಂಟ್ರಿ. ಅವರು ಈ ಚಿತ್ರದಲ್ಲಿ ಒಂದು ಪವರ್ಫುಲ್ ಆದ ವಿಶೇಷ ಪಾತ್ರ ಮಾಡಿದ್ದಾರೆ. ಕೋಮಲ್ ಹಾಗೂ ವಿನೋದ್ ಪ್ರಭಾಕರ್ ಅವರನ್ನು ಒಟ್ಟಿಗೆ ಸ್ಕ್ರೀನ್ ಮೇಲೆ ನೋಡಲು ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ. ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರ ಮಾಡಿಕೊಟ್ಟಿದ್ದಕ್ಕಾಗಿ ಚಿತ್ರತಂಡ ವಿನೋದ್ ಪ್ರಭಾಕರ್ ಅವರಿಗೆ ಥ್ಯಾಂಕ್ಸ್ ಹೇಳಿದೆ.
‘ರೋಲೆಕ್ಸ್’ ಬರೀ ನಗಿಸುವ ಸಿನಿಮಾ ಮಾತ್ರವಲ್ಲ, ಇದರಲ್ಲಿ ಫ್ಯಾಮಿಲಿ ಆಡಿಯನ್ಸ್ಗೆ ಕನೆಕ್ಟ್ ಆಗೋ ಒಂದು ಒಳ್ಳೆ ಕಥೆಯೂ ಇದೆ. ಇನ್ನು ಚಿತ್ರದಲ್ಲಿ ಅಚ್ಯುತ್ ಕುಮಾರ್, ನವೀನ್ ಪಡೀಲ್ ಹಾಗೂ ಅರುಣ್ ಬಾಲರಾಜ್ ಅವರಂತಹ ಸಖತ್ ಕಲಾವಿದರ ದಂಡೇ ಇದೆ.
Komal Rolex Kannada Movie: ಮಧು ಫಿಲಂ ಸರ್ಕ್ಯೂಟ್ಸ್ನ ಅದ್ದೂರಿ ಮೇಕಿಂಗ್
ಆಂಧ್ರ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿರುವ ಅಂಬಟಿ ಮಧು ಮೋಹನಕೃಷ್ಣ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕನ್ನಡದಲ್ಲಿ ಅವರು ನಿರ್ಮಿಸುತ್ತಿರುವ ಮೊದಲ ಅದ್ದೂರಿ ಸಿನಿಮಾ ಇದಾಗಿದ್ದು, ಮುರಳಿಕೃಷ್ಣ ಅವರು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದಾರೆ.
ಮ್ಯೂಸಿಕ್: ‘ಮೆಲೋಡಿ ಕಿಂಗ್’ ಜೆಸ್ಸಿ ಗಿಫ್ಟ್ ಚಿತ್ರದ 4 ಹಾಡುಗಳಿಗೆ ಟ್ಯೂನ್ ಹಾಕಿದ್ದಾರೆ.
ಸಾಹಿತ್ಯ: ಡಾ.ವಿ. ನಾಗೇಂದ್ರಪ್ರಸಾದ್, ಕವಿರಾಜ್, ರಾಜೇಶ್ ವರ್ಮ ಹಾಗೂ ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದಾರೆ.
ತಾಂತ್ರಿಕ ಬಳಗ: ರಾಕೇಶ್ ಸಿ ತಿಲಕ್ ಅವರ ಸಿನಿಮಾಟೋಗ್ರಫಿ, ಅರವಿಂದ್ ರಾಜ್ ಅವರ ಎಡಿಟಿಂಗ್, ಯೋಗಾನಂದ್ ಅವರ ಫೈಟ್ಸ್ ಹಾಗೂ ಕಲೈ – ಮುರಳಿ ಮಾಸ್ಟರ್ ಅವರ ಕೊರಿಯೋಗ್ರಫಿ ಈ ಚಿತ್ರಕ್ಕಿದೆ.
Also Read : Jayamma Death News: ವಿಜಯ್ ರಾಘವೇಂದ್ರ, ಶ್ರೀಮುರಳಿ ತಾಯಿ ಜಯಮ್ಮ ಇನ್ನಿಲ್ಲ; ಸ್ಯಾಂಡಲ್ವುಡ್ನಲ್ಲಿ ಶೋಕದ ಛಾಯೆ

Leave a Comment