Yash Toxic Release Date: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಬಹುದಿನಗಳ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. ‘ಟಾಕ್ಸಿಕ್’ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಚಿತ್ರತಂಡ ಅಧಿಕೃತ ಉತ್ತರ ನೀಡಿದೆ. ಈ ವರ್ಷ ಸಿನಿಮಾ ಬರೋದೇ ಇಲ್ಲ ಎಂದು ಬೇಸರಗೊಂಡಿದ್ದ ಫ್ಯಾನ್ಸ್ಗೆ ಇದೀಗ ದೊಡ್ಡ ಹಬ್ಬದ ಸಪ್ರ್ರೈಸ್ ಸಿಕ್ಕಿದ್ದು, ಇನ್ನೆರಡು ತಿಂಗಳಲ್ಲಿ ಅಂದರೆ ಆಗಸ್ಟ್ 26ರಂದು ಸಿನಿಮಾ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ವಿಶ್ವ ಅಪ್ಪಂದಿರ ದಿನದ ವಿಶೇಷ ಸಂದರ್ಭದಲ್ಲಿ ಚಿತ್ರತಂಡ ಈ ಗುಡ್ ನ್ಯೂಸ್ ಹಂಚಿಕೊಂಡಿದೆ. ರಾಯ್ ಮತ್ತು ಟಿಕೆಟ್ ಎಂಬ ವಿಭಿನ್ನ ಶೈಲಿಯ ತಂದೆ-ಮಗನ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿದೆ.
Yash Toxic Release Date: ಬುಧವಾರವೇ ರಿಲೀಸ್ ಯಾಕೆ?
ಸಾಮಾನ್ಯವಾಗಿ ಹೊಸ ಸಿನಿಮಾಗಳು ಶುಕ್ರವಾರ ತೆರೆಗೆ ಬರುವುದು ವಾಡಿಕೆ. ಆದರೆ ‘ಟಾಕ್ಸಿಕ್’ ಚಿತ್ರವನ್ನು ಎರಡು ದಿನ ಮುಂಚಿತವಾಗಿ, ಅಂದರೆ ಬುಧವಾರವೇ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮುಂದಿರುವ ಓಣಂ, ಈದ್, ವರಮಹಾಲಕ್ಷ್ಮಿ ಹಾಗೂ ರಕ್ಷಾಬಂಧನ ಹಬ್ಬಗಳ ಸಾಲು ಸಾಲು ರಜೆಗಳ ಲಾಭವನ್ನು ಪಡೆದುಕೊಳ್ಳುವುದು ಚಿತ್ರತಂಡದ ಪ್ಲಾನ್ ಆಗಿದೆ. ಇದು ಕೇವಲ ಪ್ಯಾನ್ ಇಂಡಿಯಾ ಮಾತ್ರವಲ್ಲದೆ, ಜಾಗತಿಕ (ಗ್ಲೋಬಲ್) ಮಟ್ಟದಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ.
Yash Toxic Release Date: ಯಾಕೆ ತಡವಾಯಿತು?
ಮೊದಲು ಜೂನ್ 4 ರಂದು ಸಿನಿಮಾ ಬರಬೇಕಿತ್ತು. ಆದರೆ ಹಾಲಿವುಡ್ ತಂತ್ರಜ್ಞರ ಕೆಲಸ ಹಾಗೂ ವಿದೇಶಗಳಲ್ಲಿ ಏಕಕಾಲಕ್ಕೆ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿದ್ದರಿಂದ ಚಿತ್ರತಂಡಕ್ಕೆ ಮತ್ತಷ್ಟು ಸಮಯಾವಕಾಶ ಬೇಕಾಯಿತು. ಇದೀಗ ಎಲ್ಲಾ ಸಿದ್ಧತೆಗಳೊಂದಿಗೆ ಆಗಸ್ಟ್ ಕೊನೆಯ ವಾರದಲ್ಲಿ ಅಬ್ಬರಿಸಲು ಯಶ್ ರೆಡಿಯಾಗಿದ್ದಾರೆ.
Yash Toxic Release Date: ಚಿತ್ರದ ಹೈಲೈಟ್ಸ್ ಮತ್ತು ತಾರಾಗಣ
ಭವ್ಯ ಬಜೆಟ್: ಸಿನಿಮಾ ಬರೋಬ್ಬರಿ 500 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.
ದ್ವಿಪಾತ್ರದಲ್ಲಿ ಯಶ್: ಇದೊಂದು ಹೈ-ವೋಲ್ಟೇಜ್ ಗ್ಯಾಂಗ್ಸ್ಟರ್ ಕಥೆಯಾಗಿದ್ದು, ಯಶ್ ಮೊದಲ ಬಾರಿಗೆ ತಂದೆ ಹಾಗೂ ಮಗನಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಲ್ಟಿಸ್ಟಾರರ್ ಸಿನಿಮಾ: ಚಿತ್ರದಲ್ಲಿ ನಯನತಾರಾ, ಹ್ಯೂಮಾ ಖುರೇಷಿ, ಕಿಯಾರಾ ಅಡ್ವಾಣಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ದ್ವಿಭಾಷಾ ಶೂಟಿಂಗ್: ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಶೂಟಿಂಗ್ ಮಾಡಲಾಗಿದ್ದು, ಉಳಿದ ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ.
ರಾಜೀವ್ ರವಿ ಅವರ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಅವರ ಸಂಗೀತ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ ‘ತಬಾಹಿ’ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದು, ಚಿತ್ರದಲ್ಲಿ ಇನ್ನು 4 ಹಾಡುಗಳಿರಲಿವೆ.
ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೂಡಿ ಯಶ್ ತಮ್ಮದೇ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್ ದಾಸ್ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ‘ಸಿನಿಮಾಕಾನ್’ ಸಮಾವೇಶದಲ್ಲಿ ಭಾಗವಹಿಸಿದ್ದ ಯಶ್, ಹಾಲಿವುಡ್ ವೇದಿಕೆಯಲ್ಲಿ ‘ರಾಮಾಯಣ’ ಹಾಗೂ ‘ಟಾಕ್ಸಿಕ್’ ಚಿತ್ರಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು. ‘ಕೆಜಿಎಫ್’ ಮೂಲಕ ಭಾರತೀಯ ಚಿತ್ರರಂಗವನ್ನು ಗೆದ್ದಿದ್ದ ರಾಕಿಂಗ್ ಸ್ಟಾರ್, ಈಗ ‘ಟಾಕ್ಸಿಕ್’ ಮೂಲಕ ಹಾಲಿವುಡ್ ಬಾಕ್ಸಾಫೀಸ್ ಮೇಲೆ ಕಣ್ಣಿಟ್ಟಿದ್ದಾರೆ.
Also Read : Sharmiela Mandre Engagement: “ರೀಲ್ ಲೈಫ್ ರಿಯಲ್ ಲೈಫ್ ಆದಾಗ…” – ಪವನ್ ಕುಮಾರ್ ಫನ್ನಿ ಮೀಮ್ ವೈರಲ್

Leave a Comment