Sharmiela Mandre Engagement: ನಟಿ ಶರ್ಮಿಳಾ ಮಾಂಡ್ರೆ ಹಾಗೂ ತಮಿಳಿನ ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಸದ್ಯದಲ್ಲೇ ಮದುವೆಯಾಗಲಿದ್ದಾರೆ. ಜೂನ್ 26ರಂದು ಇವರ ಎಂಗೇಜ್‌ಮೆಂಟ್ ನಡೆಯಲಿದ್ದು, ಈ ವರ್ಷವೇ ಮದುವೆಗೆ ತಯಾರಿ ನಡೆದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಶರ್ಮಿಳಾ ಅವರಿಗೆ ಶುಭ ಕೋರುತ್ತಿದ್ದಾರೆ. ಆದರೆ, ನಿರ್ದೇಶಕ ಹಾಗೂ ನಟ ಪವನ್ ಕುಮಾರ್ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫನ್ನಿ ಪೋಸ್ಟ್ ಒಂದನ್ನು ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.
Sharmiela Mandre Engagement: ರೀಲ್ ಕಥೆ ರಿಯಲ್ ಆಯ್ತು ಅಂತ ಬೇಸರ ಮಾಡಿಕೊಂಡ ಪವನ್!
ಯೋಗರಾಜ್ ಭಟ್ ನಿರ್ದೇಶನದ ಸೂಪರ್ ಹಿಟ್ ‘ಗಾಳಿಪಟ- 2’ ಸಿನಿಮಾದಲ್ಲಿ ಪವನ್ ಕುಮಾರ್ ಹಾಗೂ ಶರ್ಮಿಳಾ ಜೋಡಿಯಾಗಿ ನಟಿಸಿದ್ದರು. ಚಿತ್ರದಲ್ಲಿ ಪ್ರೊಫೆಸರ್ ಶರ್ಮಿಳಾ ಅವರನ್ನು ಒನ್‌ಸೈಡ್ ಪ್ರೀತಿಸುವ ಭೂಷಣ್ ಎಂಬ ಸ್ಟೂಡೆಂಟ್ ರೋಲ್‌ನಲ್ಲಿ ಪವನ್ ಕಾಣಿಸಿಕೊಂಡಿದ್ದರು. ಸಿನಿಮಾದ ಕೊನೆಯಲ್ಲಿ ಆ ಪ್ರೊಫೆಸರ್ ಬೇರೆಯವರನ್ನು ಮದುವೆಯಾಗಿ ಯೂರೋಪ್‌ಗೆ ಹೊರಟುಹೋಗುತ್ತಾರೆ.
ಈಗ ನಿಜ ಜೀವನದಲ್ಲೂ ಶರ್ಮಿಳಾ ಮದುವೆ ಫಿಕ್ಸ್ ಆಗಿರುವುದಕ್ಕೆ ಪವನ್ ಕುಮಾರ್, “ರೀಲ್ ಲೈಫ್ ರಿಯಲ್ ಲೈಫ್ ಆದಾಗ” ಎಂದು ಕ್ಯಾಪ್ಷನ್ ಕೊಟ್ಟು, ‘ನೀನು ಬಗೆಹರಿಯದ ಹಾಡು’ ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ನಲ್ಲಿ ಒಂದು ಮಜಾವಾದ ಮೀಮ್ ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನು ನೋಡಿ ಶರ್ಮಿಳಾ ಮಾಂಡ್ರೆ ಕೂಡ “ಓ ಮೈ ಗಾಡ್” ಎಂದು ನಗುತ್ತಾ ಕಮೆಂಟ್ ಮಾಡಿದ್ದಾರೆ.
ಬಳಿಕ ಅದಕ್ಕೆ ರಿಪ್ಲೈ ಮಾಡಿರುವ ಪವನ್, “ಶರ್ಮಿಳಾ ನನ್ನನ್ನು ಯಾವತ್ತೂ ನೇರವಾಗಿ ಭೇಟಿಯಾಗದ ಗೆಳತಿ.. ಆದರೆ ಮಾತನಾಡಿದಾಗಲೆಲ್ಲಾ ಹಳೇ ಒಡನಾಟದ ಹಾಗಿರುತ್ತದೆ. ಸದಾ ಒಬ್ಬರನ್ನೊಬ್ಬರು ಕಾಲೆಳೆಯುತ್ತಿರುತ್ತೇವೆ. ಕಂಗ್ರಾಟ್ಸ್ ಶರ್ಮಿಳಾ… ನಾನು ಖುಷಿಯಿಂದ ಕನ್ಯಾದಾನ ಮಾಡುತ್ತೇನೆ” ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
Sharmiela Mandre Engagement: ಕಮೆಂಟ್ ಬಾಕ್ಸ್‌ನಲ್ಲಿ ಕಾಲೆಳೆದ ನೆಟ್ಟಿಗರು:
ಪವನ್ ಅವರ ಈ ಪೋಸ್ಟ್ ಕೆಳಗೆ ಜನ ಸಿಕ್ಕಾಪಟ್ಟೆ ಕಾಮಿಡಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.
•”ಅರ್ಜೆಂಟ್ ಆಗಿ ಗಣೇಶ್ ಅವರನ್ನ ಮೀಟ್ ಮಾಡಿ, ಯೋಗರಾಜ್ ಭಟ್ರಿಗೆ ಫೋನ್ ಮಾಡಿ” ಎಂದು ಒಬ್ಬರು ಕಾಲೆಳೆದಿದ್ದಾರೆ.
•”ಛೆ ಪಾಪ.. ಏನ್ರಿ ಡೈರೆಕ್ಟರ್ ಅವರೇ, ಶರ್ಮಿಳಾ ಮೇಡಂ ಹಾರಿ ಹೋದ್ರು” ಎಂದು ಇನ್ನೊಬ್ಬರು ರೇಟಿಸಿದ್ದಾರೆ.
•”ಪ್ರೀತಿ ಮಧುರ ತ್ಯಾಗ ಅಮರ” ಮತ್ತು “ಪ್ರೀತಿಯ ಪಾರಿವಾಳ ಹಾರಿ ಹೋಯ್ತು ಗೆಳೆಯ” ಎಂಬ ಮುಂಗಾರು ಮಳೆ ಚಿತ್ರದ ಡೈಲಾಗ್‌ಗಳನ್ನು ನೆನಪಿಸಿ ನೆಟ್ಟಿಗರು ನಗುತ್ತಿದ್ದಾರೆ.
ಇದೇ ವಿರಹದ ಬೇಸರದಲ್ಲಿ ಒಂದು ಒಳ್ಳೆ ಕಥೆ ಬರೆದು ಸಿನಿಮಾ ಮಾಡಿ ಸರ್ ಎಂದು ಅಭಿಮಾನಿಯೊಬ್ಬರು ಐಡಿಯಾ ಕೊಟ್ಟಿದ್ದಾರೆ.
‘ಸಜನಿ’ ಚಿತ್ರದ ಮೂಲಕ ಹೀರೋಯಿನ್ ಆಗಿ ಎಂಟ್ರಿ ಕೊಟ್ಟ ಶರ್ಮಿಳಾ ಮಾಂಡ್ರೆ, ಆನಂತರ ಹಲವು ಸಿನಿಮಾಗಳಲ್ಲಿ ನಟಿಸಿ, ಈಗ ನಿರ್ಮಾಪಕಿಯಾಗಿಯೂ ಸಕ್ರಿಯರಾಗಿದ್ದಾರೆ. ಇನ್ನು ಶರ್ಮಿಳಾ ಕೈ ಹಿಡಿಯಲಿರುವ ಸುಧನ್ ಸುಂದರಂ ತಮಿಳಿನಲ್ಲಿ ‘ಮಹಾರಾಜ’ ಮತ್ತು ‘ತಾಯ್ ಕಿಳವಿ’ಯಂತಹ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ದೊಡ್ಡ ಪ್ರೊಡ್ಯೂಸರ್.
Also Read: Sharmila Mandre Marriage: ಹಸೆಮಣೆ ಏರಲು ಸಜ್ಜಾದ ಸ್ಯಾಂಡಲ್‌ವುಡ್ ಸುಂದರಿ ಶರ್ಮಿಳಾ ಮಾಂಡ್ರೆ

Leave a Comment