Om Prakash Rao Remix Movies: ಸಿನಿಮಾ ಲೋಕದಲ್ಲಿ ಒಂದರ ಕಥೆಯನ್ನು ಇನ್ನೊಂದಕ್ಕೆ ರೀಮೇಕ್ ಮಾಡುವುದು ಇವತ್ತಿನ ಕಥೆಯಲ್ಲ. ನಮ್ಮ ಸಿನಿಮಾಗಳು ಬೇರೆ ಭಾಷೆಗೆ ಹೋಗಿವೆ, ಅಲ್ಲಿನ ಸಿನಿಮಾಗಳು ಇಲ್ಲಿಗೆ ಬಂದಿವೆ. ಆದರೆ, ಕನ್ನಡದಲ್ಲಿ ರೀಮೇಕ್ ಬದಲು ನಾಲ್ಕೈದು ಸಿನಿಮಾಗಳನ್ನು ಒಟ್ಟಿಗೆ ಸೇರಿಸಿ ‘ರೀಮಿಕ್ಸ್’ ಸಿನಿಮಾ ಮಾಡಿ ಗೆದ್ದವರು ಅಂದರೆ ಅದು ನಿರ್ದೇಶಕ ಓಂ ಪ್ರಕಾಶ್ ರಾವ್. “ಹೌದು, ನಾನು ಬೇರೆ ಸಿನಿಮಾಗಳನ್ನು ನೋಡಿ ರೀಮಿಕ್ಸ್ ಮಾಡ್ತೀನಿ” ಅಂತ ಅವರೇ ಸ್ವತಃ ಹೆಮ್ಮೆಯಿಂದ ಹೇಳ್ಕೊಳ್ತಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅವರು, ತಾವು ಯಾವೆಲ್ಲಾ ಸಿನಿಮಾಗಳಿಂದ ಸೀನ್‌ಗಳನ್ನು ಕಾಪಿ ಮಾಡಿ ಸಿನಿಮಾ ಮಾಡಿದ್ದೆ ಅನ್ನೋದರ ಲೆಕ್ಕ ಕೊಟ್ಟಿದ್ದಾರೆ. ಕೇಳಿದ್ರೆ ನಿಮಗೂ ಶಾಕ್ ಆಗಬಹುದು!
•ಕಲಾಸಿಪಾಳ್ಯ – 7 ಸಿನಿಮಾಗಳಿಂದ ಸ್ಫೂರ್ತಿ ಪಡೆದು ಮಾಡಿದ್ದು.
•ಅಯ್ಯ – ಬರೋಬ್ಬರಿ 10 ಸಿನಿಮಾಗಳ ದೃಶ್ಯಗಳನ್ನು ಸೇರಿಸಿ ತೆರೆಗೆ ತಂದಿದ್ದು.
•ಮಂಡ್ಯ – ಈ ಚಿತ್ರಕ್ಕೆ ಬರೋಬ್ಬರಿ 13 ಸಿನಿಮಾಗಳೇ ಸ್ಫೂರ್ತಿಯಂತೆ!
•ಹುಬ್ಬಳ್ಳಿ – 8 ಸಿನಿಮಾಗಳ ಮಿಕ್ಸ್.
•ಪಾರ್ಥ – 6 ಸಿನಿಮಾಗಳ ಅಂಶಗಳು.
•ಪ್ರಿನ್ಸ್ – 4 ಸಿನಿಮಾಗಳ ಕಾಪಿ.
•ಯೋಧ – 3 ಸಿನಿಮಾಗಳ ಪ್ರೇರಣೆ.
Om Prakash Rao Remix Movies: ರೀಮಿಕ್ಸ್ ಮಾಡಿದ್ರೆ ತಪ್ಪೇನು?
ಒಂದ್ಕಾಲದಲ್ಲಿ ಒಳ್ಳೆ ಸ್ವಂತ ಸಿನಿಮಾಗಳನ್ನು ಮಾಡ್ತಿದ್ದ ಓಂ ಪ್ರಕಾಶ್ ರಾವ್, ಆಮೇಲೆ ಯಾಕೆ ಹೀಗೆ ರೀಮಿಕ್ಸ್ ಮಾಡೋಕೆ ಶುರು ಮಾಡಿದ್ರು ಅಂತ ವಿಶ್ವವಾಣಿ ವಾಹಿನಿ ಸಂದರ್ಶನದಲ್ಲಿ ಕೇಳಿದ್ರು. ಅದಕ್ಕೆ ಅವರು ಕೊಟ್ಟ ಉತ್ತರ ತುಂಬಾ ನೇರವಾಗಿತ್ತು. “ನಾವು ಸಿನಿಮಾ ಮಾಡೋದು ಜನ ನೋಡಲಿ ಅಂತ. ಜನ ಇಷ್ಟಪಟ್ಟು ನೋಡ್ತಿರುವಾಗ ರೀಮಿಕ್ಸ್ ಮಾಡಿದ್ರೆ ತಪ್ಪೇನು?” ಅಂತ ಮರುಪ್ರಶ್ನೆ ಹಾಕಿದ್ದಾರೆ.
ಅಷ್ಟೇ ಅಲ್ಲ, “ನಮ್ಮ ಸಿನಿಮಾಗಳನ್ನು ಬೇರೆ ಭಾಷೆಯವರು ರೀಮೇಕ್ ಮಾಡಿದಾಗ ಖುಷಿಪಡ್ತೀವಿ. ಹಾಗೇ ಬೇರೆಯವರ ಸಿನಿಮಾವನ್ನು ನಾವು ರೀಮೇಕ್ ಮಾಡಿದಾಗ ಅವರಿಗೂ ಗೌರವ ಸಿಗುತ್ತೆ. ಕಷ್ಟಪಟ್ಟು ಮಾಡಿದ ಕಥೆಯನ್ನು ತಗೊಂಡು ಸಿನಿಮಾ ಮಾಡೋದ್ರಲ್ಲಿ ತಪ್ಪಿಲ್ಲ. ಆದ್ರೆ ರೀಮೇಕ್ ಮಾಡಿದ್ರೂ ನಮ್ಮ ನೇಟಿವಿಟಿ ಮತ್ತು ನಮ್ಮತನ ಇರಬೇಕು. ನಾನು ಅದನ್ನೇ ಮಾಡಿರೋದು” ಅಂದಿದ್ದಾರೆ.
Om Prakash Rao Remix Movies: ಮುಂದಿನ ಪ್ಲಾನ್ ಏನು?
“ಬೇರೆಯವರು ಕದ್ದು ಸಿನಿಮಾ ಮಾಡಿದ್ರೂ ಒಪ್ಪಿಕೊಳ್ಳಲ್ಲ, ಆದ್ರೆ ನಾನು ಓಪನ್ ಆಗಿ ಹೇಳ್ತೀನಿ. ಕನ್ನಡ ಪ್ರೇಕ್ಷಕರು ನನ್ನ ಕೈಹಿಡಿದಿದ್ದಾರೆ. ಅದಕ್ಕೆ ಈಗ ಅವರಿಗೆ ಒಂದು ಕಂಪ್ಲೀಟ್ ಒರಿಜಿನಲ್ ಸಿನಿಮಾ ಕೊಡೋದು ನನ್ನ ಕರ್ತವ್ಯ” ಅಂತ ಹೇಳ್ತಾ, ಸದ್ಯ ‘ಫೀನಿಕ್ಸ್’ ಅನ್ನೋ ಸ್ಟ್ರೈಟ್ ಸಿನಿಮಾವನ್ನು ಮಾಡ್ತಿರೋದಾಗಿ ತಿಳಿಸಿದ್ದಾರೆ.
ಇದೇ ವೇಳೆ, ಅವರಿಗೆ ಬಿಗ್ ಬಾಸ್ ಮನೆಗೆ ಹೋಗ್ತೀರಾ ಅನ್ನೋ ಪ್ರಶ್ನೆ ಎದುರಾಯ್ತು. ಅದಕ್ಕೆ ಖಡಾಖಡಿಯಾಗಿ “ಇಲ್ಲ, ಆ ತರಹದ ಆಲೋಚನೆ ಇಲ್ಲ. ಸದ್ಯ ‘ಕ್ವಾಟ್ಲೆ ಕಿಚನ್-2’ ಶೋ ಮಾಡ್ತಿದ್ದೀನಿ” ಅಂತ ಹೇಳಿದ್ದಾರೆ. ಕೊನೆಗೆ “ಏನೇ ಮಾಡಿದ್ರೂ ಅಲ್ಟಿಮೇಟ್ ಆಗಿ ಸಿನಿಮಾ ಗೆಲ್ಲೋದು ಮುಖ್ಯ” ಅನ್ನೋದು ಓಂ ಪ್ರಕಾಶ್ ರಾವ್ ಅವರ ಮಾತು.
Leave a Comment