---Advertisement---

Kiccha Sudeep Caravan: ಬರೋಬ್ಬರಿ ₹6.5 ಕೋಟಿ! ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರಾವ್ಯಾನ್ ಖರೀದಿಸಿದ್ರಾ ಕಿಚ್ಚ ಸುದೀಪ್? ಒಳಗೆ ಏನೇನಿದೆ ನೋಡಿ!

By Chandan Naik

June 28, 2026 4:58 AM

---Advertisement---

Kiccha Sudeep Caravan: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನಟ ಕಿಚ್ಚ ಸುದೀಪ್ ಅವರ ಹೊಸ ಕ್ಯಾರಾವ್ಯಾನ್ ವಿಡಿಯೋಗಳೇ ಸಖತ್ ವೈರಲ್ ಆಗ್ತಿವೆ. ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಇದು ಅತ್ಯಂತ ಐಷಾರಾಮಿ ಮತ್ತು ದುಬಾರಿ ಕ್ಯಾರಾವ್ಯಾನ್ ಎನ್ನಲಾಗುತ್ತಿದ್ದು, ಇದರ ಅಂದಾಜು ಮೊತ್ತ ಬರೋಬ್ಬರಿ ₹6.5 ಕೋಟಿ ರೂಪಾಯಿ!

ಕಿಚ್ಚ ಸುದೀಪ್ ಅವರಿಗೆ ಶೂಟಿಂಗ್ ಸೆಟ್ಟಿನಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಕೆಲವು ತಿಂಗಳ ಹಿಂದಷ್ಟೇ ಕೋಟಿ ಬೆಲೆಯ ‘ಟೊಯೊಟಾ ವೆಲ್‌ಫೈರ್’ ಕಾರ್ ಖರೀದಿಸಿದ್ದ ಸುದೀಪ್, ಈಗ ಈ ಹೈಟೆಕ್ ಕ್ಯಾರಾವ್ಯಾನ್ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಹಾಗಾದ್ರೆ ಈ ಕ್ಯಾರಾವ್ಯಾನ್ ವಿಶೇಷತೆ ಏನು? ಇದನ್ನು ಡಿಸೈನ್ ಮಾಡಿದ್ದು ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್:

Kiccha Sudeep Caravan

Kiccha Sudeep Caravan: ಡಿಸೈನ್ ಮಾಡಿದ್ದು ಯಾರು?


ಸುದೀಪ್ ಅವರ ಟೇಸ್ಟ್‌ಗೆ ತಕ್ಕಂತೆ ಈ ಗಾಡಿಯನ್ನು ಭಾರತದ ಪ್ರಸಿದ್ಧ ಆಟೋಮೊಬೈಲ್ ಡಿಸೈನರ್ ದಿಲೀಪ್ ಛಾಬ್ರಿಯಾ ಅವರ ಒಡೆತನದ ‘DC2’ ಸಂಸ್ಥೆ ಸಿದ್ಧಪಡಿಸಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಕ್ಯಾರಾವ್ಯಾನ್ ಕೂಡ ಇದೇ ಸಂಸ್ಥೆಯಲ್ಲಿ ಡಿಸೈನ್ ಆಗಿತ್ತು ಎಂಬುದು ವಿಶೇಷ.

Kiccha Sudeep Caravan: ಒಳಗೆ ಏನೇನಿದೆ?


ಮುಂದಿನ ಆರು ತಿಂಗಳು ಸುದೀಪ್ ಶೆಡ್ಯೂಲ್ ಸಿಕ್ಕಾಪಟ್ಟೆ ಟೈಟ್ ಆಗಿದೆ. ಬಿಗ್ ಬಾಸ್ ಜೊತೆಗೆ ‘ಬಿಲ್ಲ ರಂಗ ಭಾಷಾ’ ಹಾಗೂ ಇನ್ನೂ ಮೂರ್ನಾಲ್ಕು ಸಿನಿಮಾಗಳ ಕೆಲಸಗಳು ಸಾಲಾಗಿವೆ. ಹೀಗಾಗಿ ಶೂಟಿಂಗ್ ಸ್ಪಾಟ್‌ನಲ್ಲೇ ಮನೆಯ ಫೀಲ್ ಸಿಗಲಿ ಅಂತ ಈ ಕ್ಯಾರಾವ್ಯಾನ್‌ನಲ್ಲಿ ಸಕಲ ಸೌಕರ್ಯಗಳನ್ನು ಕೊಡಲಾಗಿದೆ.

•ಲಿವಿಂಗ್ ಏರಿಯಾ: ಶೂಟಿಂಗ್ ಗ್ಯಾಪ್‌ನಲ್ಲಿ ನಿರ್ದೇಶಕರು ಹಾಗೂ ಸಿನಿಮಾದವರ ಜೊತೆ ಕೂತು ಕಥೆ ಚರ್ಚೆ ಮಾಡಲು ಸೂಪರ್ ಆದ ಲಿವಿಂಗ್ ಸ್ಪೇಸ್ ಇದೆ.
ಬೆಡ್ ರೂಮ್: ಸುದೀಪ್ ಅವರು ನಿದ್ದೆ ಮಾಡುವುದು ತುಂಬಾ ಕಡಿಮೆ ಅನ್ನೋದು ಅವರ ಪತ್ನಿ ಪ್ರಿಯಾ ಅವರ ಕಂಪ್ಲೇಂಟ್. ಆದರೆ ಶೂಟಿಂಗ್ ತಡವಾದಾಗ ಅಥವಾ ಸುಸ್ತಾದಾಗ ವಿಶ್ರಾಂತಿ ಪಡೆಯಲು ಇಲ್ಲಿ ಬೆಡ್ ರೂಮ್ ವ್ಯವಸ್ಥೆ ಇದೆ.
ಮಿನಿ ಕಿಚನ್: ಕಿಚ್ಚನಿಗೆ ಅಡುಗೆ ಮಾಡುವುದು ಅಂದ್ರೆ ಪ್ರಾಣ. ಹೀಗಾಗಿ ಕ್ಯಾರಾವ್ಯಾನ್ ಒಳಗೆ ಅವರ ಇಷ್ಟದ ಅಡುಗೆ ಮಾಡಲು ಒಂದು ಮಿನಿ ಕಿಚನ್ ಕೂಡ ಸೆಟ್ ಮಾಡಲಾಗಿದೆ.
ಮಿನಿ ಜಿಮ್: ಫಿಟ್ನೆಸ್ ರೊಟೀನ್ ಮಿಸ್ ಆಗಬಾರದು ಅಂತ ಸಣ್ಣದೊಂದು ಜಿಮ್ ಏರಿಯಾ ಕೂಡ ಇದೆ. ಇದರ ಜೊತೆಗೆ ವಾಶ್ ರೂಮ್, ಟಿವಿ ಹಾಗೂ ಸೌಂಡ್ ಸಿಸ್ಟಮ್‌ಗಳೂ ಇವೆ.

Kiccha Sudeep Caravan

Kiccha Sudeep Caravan: ಸುದೀಪ್ ಕೈ ಸೇರಿದೆಯೇ?


ಸದ್ಯಕ್ಕಂತೂ ಈ ಕ್ಯಾರಾವ್ಯಾನ್ ಸುದೀಪ್ ಕೈ ಸೇರಿಲ್ಲ. ಪುನಾದಲ್ಲಿ ಇದರ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಬೆಂಗಳೂರಿಗೆ ಬರಲು ಇನ್ನು 2 ರಿಂದ 3 ವಾರಗಳು ಬೇಕಾಗಬಹುದು. ಸದ್ಯ ಸುದೀಪ್ ‘ಬಿಲ್ಲ ರಂಗ ಭಾಷಾ’ ಚಿತ್ರದ ಶೂಟಿಂಗ್‌ನಲ್ಲಿದ್ದು, ಈ ಶೆಡ್ಯೂಲ್ ಮುಗಿದು ಮುಂದಿನ ಶೆಡ್ಯೂಲ್ ಆರಂಭವಾಗುವ ಹೊತ್ತಿಗೆ ಈ ಐಷಾರಾಮಿ ಕ್ಯಾರಾವ್ಯಾನ್ ಅವರ ಕೈ ಸೇರಲಿದೆ.

Also Read : Om Prakash Rao Remix Movies: 13 ಸಿನಿಮಾಗಳಿಂದ ಕದ್ದು ಸಿನಿಮಾ ಮಾಡಿದ್ದೆ! ರೀಮಿಕ್ಸ್ ರಹಸ್ಯ ಬಿಚ್ಚಿಟ್ಟ ಓಂ ಪ್ರಕಾಶ್ ರಾವ್

Chandan Naik

ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

Comments

Leave a Comment