---Advertisement---

8 ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದ ನಾಯಕಿ ಅಮೂಲ್ಯ. ನಾಯಕ ಯಾರು? ಚಿತ್ರ ಯಾವುದು ಗೊತ್ತಾ?

By Chandan Naik

January 16, 2026 4:44 AM

---Advertisement---

8 ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದ ನಾಯಕಿ ಅಮೂಲ್ಯ ಪುನಃ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕ ಸಿನಿಮಾರಂಗದಿಂದ ದೂರ ಸರಿದಿದ್ದ ಅಮೂಲ್ಯ ಬರೋಬ್ಬರಿ 8 ವರ್ಷಗಳ ಬಳಿಕ ಪೀಕಬೂ ಸಿನಿಮಾ ಮೂಲಕ ವಾಪಾಸ್ ಆಗಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಅಮೂಲ್ಯ ಲುಕ್ ಟೀಸರ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದರು. ಈ ಸಿನಿಮಾ ಘೋಷಣೆಯಾದರೂ ಹೀರೋ ಯಾರು ಎಂಬುದು ಗೊತ್ತಾಗಿರಲಿಲ್ಲ. ಇದೀಗ ಆ ಕುತೂಹಲಕ್ಕೂ ತೆರೆ ಬಿದ್ದಿದೆ.

‘ಪೀಕಬೂ’ ಹೆಸರಿನ ಸಿನಿಮಾನಲ್ಲಿ ಅಮೂಲ್ಯ ನಟಿಸುತ್ತಿದ್ದು, ಈ ಸಿನಿಮಾವನ್ನು ಮಂಜು ಸ್ವರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಲುಕ್ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ನಲ್ಲಿ ಅಮೂಲ್ಯ ಜೊತೆಗೆ ನಾಯಕನ ಲುಕ್ನ ಪರಿಚಯವನ್ನೂ ಸಹ ಮಾಡಿಕೊಡಲಾಗಿದೆ. ನಟಿ ಅಮೂಲ್ಯಾಗೆ ಜೋಡಿಯಾಗಿ ನಟ ಶ್ರೀರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲಿಯೂ ನಟಿಸಿ ಅನುಭವ ಇರುವ ಶ್ರೀರಾಮ್ ‘ಪೀಕಬೂ’ ಸಿನಿಮಾ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

ನಟಿ ಅಮೂಲ್ಯಗೆ ಜೋಡಿಯಾಗಿ ಶ್ರೀರಸ್ತು ಶುಭಮಸ್ತು ಸೀರಿಯಲ್‌ ನಟ ಶ್ರೀರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲಿಯೂ ಖ್ಯಾತಿಗಳಿಸಿರುವ ಶ್ರೀರಾಮ್ ಇದೀಗ ಪೀಕಬೂ ಸಿನಿಮಾ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. 2008ರಲ್ಲಿ ʻರಿಷಭಪ್ರಿಯʼ ಕಿರುಚಿತ್ರದ ಮೂಲಕ ನಾಯಕ ನಟನಾಗಿ ಎಂಟ್ರಿ ಕೊಟ್ಟ ಶ್ರೀರಾಮ್, ಬಳಿಕ ಧಾರಾವಾಹಿಯಲ್ಲಿ ಬ್ಯುಸಿಯಾದರು. ಆನಂತರ ಇರುವುದೆಲ್ಲವ ಬಿಟ್ಟು ಸಿನಿಮಾ ಮೂಲಕ ನಾಯಕನಾಗಿ ದೊಡ್ಡ ಪರದೆ ಮೇಲೆ ಮಿಂಚಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಗಜಾನನ ಅಂಡ್ ಗ್ಯಾಂಗ್, ಹೊಂದಿಸಿ ಬರೆಯಿರಿ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದರು.

ಎರಡು ಲುಕ್‌ಗಳಲ್ಲಿ ಮಿಂಚಿದ ಶ್ರೀರಾಮ್
ಇದೀಗ ಅಮೂಲ್ಯ ಜೊತೆ ಶ್ರೀರಾಮ್ ಪೀಕಬೂ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಪೀಕಬೂ ಸಿನಿಮಾದ ಹೀರೋ ರಿವಿಲ್‌ ಟೀಸರ್‌ ರಿಲೀಸ್‌ ಆಗಿದ್ದು ಟೀಸರ್‌ ಇಂಟ್ರೆಸ್ಟಿಂಗ್‌ ಆಗಿದೆ. ಈ ಟೀಸರ್‌ನಲ್ಲಿ ಶ್ರೀರಾಮ್‌ ಎರಡು ಲುಕ್‌ಗಳಲ್ಲಿ ಮಿಂಚಿದ್ದಾರೆ. ಅಮೂಲ್ಯ ಹಾಗೂ ಶ್ರೀರಾಮ್‌ ಅವರದ್ದು ಹೊಸ ಕಾಂಬಿನೇಷನ್‌ ಆಗಿದ್ದು, ಮೊದಲ ಬಾರಿಗೆ ಇಬ್ಬರು ಒಟ್ಟಿಗೆ ಅಭಿನಯ ಮಾಡುತ್ತಿದ್ದಾರೆ.

ಪಿಕಬೂ ಜನಪ್ರಿಯ ಕಾರ್ಟೂನ್ ಕ್ಯಾರೆಕ್ಟರ್ ಆಗಿದೆ. ಮಕ್ಕಳಿಗೆ ಒಮ್ಮೊಮ್ಮೆ ಮುದ್ದಾಗಿ ಪಿಕಬೂ ಎಂದು ಸಹ ಕರೆಯುವುದುಂಟು. ಇದೇ ಹೆಸರನ್ನು ಸಿನಿಮಾಕ್ಕೆ ಇಡಲಾಗಿದೆ. ಸದ್ಯ ‘ಪೀಕಬೂ’ ಚಿತ್ರದ ಅರ್ಧದಷ್ಟು ಭಾಗ ಶೂಟಿಂಗ್ ಮುಗಿಸಿದೆ. ಚಿತ್ರಕ್ಕೆ ಸುರೇಶ್‌ ಬಾಬು ಸಿನಿಮಾಟೋಗ್ರಾಫರ್‌ ಆಗಿದ್ದು. ವೀರ್‌ ಸಮರ್ಥ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಶ್ರಾವಣಿ ಸುಬ್ರಮಣ್ಯ’ ಸಿನಿಮಾದ ನಂತ್ರ ಮತ್ತೆ ಅಮೂಲ್ಯ ಅವರಿಗೆ ಆಕ್ಷನ್‌ ಕಟ್‌ ಹೇಳ್ತಿದ್ದಾರೆ ನಿರ್ದೇಶಕ ಮಂಜು ಸ್ವರಾಜ್‌. ಶ್ರೀ ಕೆಂಚಾಂಬಾ ಫಿಲಂಸ್‌ ಅಡಿಯಲ್ಲಿ ಗಣೇಶ್‌ ಕೆಂಚಾಂಬಾ ಪೀಕಾಬೂ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

ನಟಿ ಅಮೂಲ್ಯ ಕೊನೆಯದಾಗಿ ಗಣೇಶ್ ನಟಿಸಿದ್ದ ‘ಮುಗುಳು ನಗೆ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದ ಬಳಿಕ ಇನ್ಯಾವ ಸಿನಿಮಾನಲ್ಲಿಯೂ ಅಮೂಲ್ಯ ಕಾಣಿಸಿಕೊಂಡಿಲ್ಲ. ಇದೀಗ ಒಂಬತ್ತು ವರ್ಷಗಳ ಬಳಿಕ ಮತ್ತೆ ಚಿತ್ರರಂಗದಲ್ಲಿ ನಾಯಕಿಯಾಗಿ ಮರು ಎಂಟ್ರಿ ನೀಡುತ್ತಿದ್ದಾರೆ ಅಮೂಲ್ಯ.

Chandan Naik

ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

Comments

Leave a Comment