---Advertisement---

Sudeep Darshan friendship: ದರ್ಶನ್ ಜೊತೆಗಿನ ಮುನಿಸಿನ ನಡುವೆಯೂ ದೋಸ್ತಿ ಮೆರೆದ ಸುದೀಪ್: ‘ಮ್ಯಾಂಗೋ ಪಚ್ಚ’ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಬಿಚ್ಚಿಟ್ಟ ರಹಸ್ಯ!

By Chandan Naik

June 7, 2026 4:43 AM

---Advertisement---

Sudeep Darshan friendship: ಕನ್ನಡ ಚಿತ್ರರಂಗದಲ್ಲಿ ದರ್ಶನ್ ಮತ್ತು ಸುದೀಪ್ ಸ್ನೇಹ ಹಾಗೂ ಅವರ ನಡುವಿನ ಮುನಿಸಿನ ಕಥೆ ಎಲ್ಲರಿಗೂ ಗೊತ್ತಿರುವಂತದ್ದೇ. ಒಂದು ಕಾಲದಲ್ಲಿ ಬಹಳ ಆತ್ಮೀಯರಾಗಿದ್ದ ಈ ಜೋಡಿ, ಆ ಬಳಿಕ ದೂರಾಯಿತು. ದರ್ಶನ್ ಅವರು ಸುದೀಪ್ ಬಗ್ಗೆ ಎಲ್ಲೂ ಮಾತನಾಡದಿದ್ದರೂ, ಕಿಚ್ಚ ಸುದೀಪ್ ಮಾತ್ರ ಇಂದಿಗೂ ದರ್ಶನ್ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಇದಕ್ಕೆ ಲೇಟೆಸ್ಟ್ ಉದಾಹರಣೆ, ಸುದೀಪ್ ಅವರ ‘ಮ್ಯಾಂಗೋ ಪಚ್ಚ’ ಸಿನಿಮಾ ಬ್ಯಾನರ್‌ನಲ್ಲಿ ದರ್ಶನ್ ಫೋಟೋ ರಾರಾಜಿಸುತ್ತಿರುವುದು.

ಸುದೀಪ್ ಅಕ್ಕನ ಮಗ ಸಂಚಿತ್ ನಟನೆಯ ‘ಮ್ಯಾಂಗೋ ಪಚ್ಚ’ ಸಿನಿಮಾ ತೆರೆಕಂಡು ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಿಲ್ಲ. ಅದನ್ನು ಪಕ್ಕಕ್ಕಿಟ್ಟರೆ, ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಜೊತೆ ಸೇರಿ ತಮ್ಮ ಸುಪ್ರಿಯಾನ್ವಿ ಬ್ಯಾನರ್ ಅಡಿಯಲ್ಲಿ ಸುದೀಪ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಸುದೀಪ್ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

Sudeep Darshan friendship: ‘ಮ್ಯಾಂಗೋ ಪಚ್ಚ’ ಬ್ಯಾನರ್‌ನಲ್ಲಿ ದರ್ಶನ್ ಫೋಟೋ ಸುದೀಪ್ ವಿವರಣೆ

ನಗರದ ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ‘ಮ್ಯಾಂಗೋ ಪಚ್ಚ’ ಸಿನಿಮಾ ಬಿಡುಗಡೆಯಾಗಿದೆ. ದೊಡ್ಡ ಬ್ಯಾನರ್ ಹಾಕಿ ಚಿತ್ರವನ್ನು ಅದ್ದೂರಿಯಾಗಿ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಚಿತ್ರಮಂದಿರದ ಮುಂಭಾಗದಲ್ಲಿ ಹಾಕಿದ್ದ ದೊಡ್ಡ ಬ್ಯಾನರ್‌ನಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಟರ ಫೋಟೋಗಳನ್ನು ಹಾಕಲಾಗಿತ್ತು. ಅದರಲ್ಲಿ ಸುದೀಪ್ ಫೋಟೋ ಪಕ್ಕದಲ್ಲೇ ದರ್ಶನ್ ಫೋಟೋ ಕೂಡ ಇತ್ತು.

Sudeep Darshan friendship

Sudeep Darshan friendship: ಮ್ಯಾಂಗೋ ಪಚ್ಚ’ ಸುದ್ದಿಗೋಷ್ಠಿಯಲ್ಲಿ ಕಿಚ್ಚನ ಮಾತು

ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಿಚ್ಚ, ಆ ಬ್ಯಾನರ್ ಹಾಕಿಸುವ ಐಡಿಯಾ ನನ್ನದೇ ಎಂದು ಹೇಳಿದ್ದಾರೆ. ಅದರ ಹಿಂದಿನ ಕಾರಣವನ್ನು ಅವರು ಹೀಗೆ ವಿವರಿಸಿದ್ದಾರೆ:

“ಹುಚ್ಚ ಸಿನಿಮಾ ಬಿಡುಗಡೆಯಾದಾಗ ಕಟೌಟ್ ಹಾಕುವ ಪದ್ಧತಿ ಇತ್ತು. ಮೊದಲ ವಾರ ಯಾವುದೇ ಕಟೌಟ್‌ಗೆ ಒಂದು ಹಾರ ಕೂಡ ಬಿದ್ದಿರಲಿಲ್ಲ. ಕಾರಣ ನಾವು ಯಾರು ಎಂದು ಯಾರಿಗೂ ಗೊತ್ತಿರಲಿಲ್ಲ. ‘ಮ್ಯಾಂಗೋ ಪಚ್ಚ’ ಕಟೌಟ್ ಹಾಕಿಸಿದ್ರೆ, ಖಾಲಿ ಬಿಡೋಕೆ ಆಗಲ್ಲ. ಹಾರ ಹಾಕಿದ್ರೆ, ಯಾರು ಹಾಕ್ಸಿದ್ರು ಅಂತ ಪ್ರಶ್ನೆ ಬರುತ್ತೆ. ಒಂದೇ ಹಾರ ಇದ್ರೆ ಅವಮಾನ, ಜಾಸ್ತಿ ಇದ್ರೆ, ನಾವು ಹಾಕ್ಸಿದ್ದು ಅಂತ ಗೊತ್ತಾಗತ್ತೆ. ಕಟೌಟ್ ಅಭಿಮಾನಿಗಳು ಮುಂದೊಂದು ದಿನ ಹಾಕಲಿ, ಇವತ್ತು ಅವರೆಲ್ಲರ ಆಶೀರ್ವಾದದ ಜೊತೆ ಹೋಗು ಎಂದು ಸಂಚಿತ್‌ಗೆ ಸಲಹೆ ನೀಡಿದ್ದೆ.”

Sudeep Darshan friendship: ಸ್ಟಾರ್ ವಾರ್ ನಿಲ್ಲಿಸಲು ಮಾಧ್ಯಮಗಳಿಗೆ ಕಿಚ್ಚನ ಮರುಪ್ರಶ್ನೆ

ನನ್ನ ಈ ಅಭಿಪ್ರಾಯ ಹೇಳಿದಾಗ ಚಿತ್ರತಂಡದ ಎಲ್ಲರೂ ಒಪ್ಪಿಕೊಂಡರು. ಅವರು ಮಾಡಿದ ಮೇಲೆ ಆ ಬ್ಯಾನರ್ ನೋಡಿ ನನಗೂ ಬಹಳ ತೃಪ್ತಿ ಆಯ್ತು ಎಂದು ಸುದೀಪ್ ಹೇಳಿದ್ದಾರೆ. ಇದೇ ವೇಳೆ, ಚಿತ್ರರಂಗದಲ್ಲಿರುವ ಸ್ಟಾರ್ ವಾರ್ ನಿಲ್ಲಿಸೋಕೆ ಏನಾದರೂ ಸಲಹೆ ಇದ್ದರೆ ಕೊಡಿ ಎಂದು ಸುದೀಪ್ ಮಾಧ್ಯಮಗಳಿಗೆ ಮರುಪ್ರಶ್ನೆ ಹಾಕಿದ್ದಾರೆ.

Sudeep Darshan friendship

Sudeep Darshan friendship: ಮುರಿಯದ ಕಿಚ್ಚನ ಸ್ನೇಹ

“ನಾನು-ಸುದೀಪ್ ಇನ್ಮುಂದೆ ಸ್ನೇಹಿತರಲ್ಲ” ಎಂದು ದರ್ಶನ್ ಅಂದು ಟ್ವೀಟ್ ಮಾಡಿದ್ದರು. ಆದರೆ ಆ ಬಳಿಕ ಕೂಡ ಬಹಳಷ್ಟು ದಿನಗಳ ಕಾಲ ಸುದೀಪ್ ತಮ್ಮ ಮನೆಯಲ್ಲಿ ದರ್ಶನ್ ಜೊತೆಗಿನ ಫೋಟೋ ಇಟ್ಟುಕೊಂಡಿದ್ದರು. ಸ್ನೇಹಿತನ ಬಗ್ಗೆ ಎಲ್ಲೂ ತಪ್ಪಾಗಿ ಮಾತನಾಡಲಿಲ್ಲ. ದರ್ಶನ್‌ಗೆ ಸಂಕಷ್ಟ ಎದುರಾದಾಗಲೆಲ್ಲಾ ಅವರು ಸ್ಪಂದಿಸಿದ್ದಾರೆ.


Sudeep Darshan friendship: ಸಂಕಷ್ಟದ ಸಮಯದಲ್ಲಿ ದರ್ಶನ್ ಪರ ನಿಂತಿದ್ದ ಸುದೀಪ್

ಕಾರು ಅಪಘಾತದಲ್ಲಿ ದರ್ಶನ್ ಗಾಯಗೊಂಡಾಗ ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದ್ದರು. ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ತೂರಿದ ಘಟನೆ ನಡೆದಾಗ ಸುದೀಪ್ ತಕ್ಷಣ ಪ್ರತಿಕ್ರಿಯಿಸಿದ್ದರು. “ಯಾವುದೇ ನಟನಿಗೆ ಹೀಗೆ ಅವಮಾನ ಮಾಡುವುದು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ದರ್ಶನ್ ಕೂಡ ಧನ್ಯವಾದ ತಿಳಿಸಿದ್ದರು.


Sudeep Darshan friendship: ಇಬ್ಬರೂ ಒಂದಾಗಲಿ ಎಂಬುದು ಅಭಿಮಾನಿಗಳ ಆಸೆ


ಕೆಲವು ದಿನಗಳ ಹಿಂದೆ ಸುಮಲತಾ ಅಂಬರೀಶ್ ಬರ್ತ್‌ಡೇ ಪಾರ್ಟಿಯಲ್ಲಿ ಇಬ್ಬರೂ ಭಾಗಿ ಆಗಿದ್ದರು. ಆದರೆ ಒಬ್ಬರ ಮುಖ ಮತ್ತೊಬ್ಬರು ನೋಡಿರಲಿಲ್ಲ. ಇಬ್ಬರನ್ನೂ ಒಟ್ಟಿಗೆ ನೋಡಬೇಕು, ಇಬ್ಬರೂ ಎಲ್ಲಾ ಭಿನ್ನಾಭಿಪ್ರಾಯ ಮರೆತು ಮತ್ತೆ ಸ್ನೇಹಿತರಾಗಬೇಕು ಎಂದು ಚಿತ್ರರಂಗದ ಸಾಕಷ್ಟು ಜನ ಮತ್ತು ಅಭಿಮಾನಿಗಳು ಇಂದಿಗೂ ಬಯಸುತ್ತಿದ್ದಾರೆ.

Also Read : Yash Alibaug Property: ಅಲಿಬಾಗ್‌ನಲ್ಲಿ ‘ರಾಕಿಂಗ್ ಸ್ಟಾರ್‌’ ಯಶ್ ಭಾರಿ ಹೂಡಿಕೆ? ವೈರಲ್ ಆಗ್ತಿದೆ ಹೊಸ ಆಸ್ತಿ ಖರೀದಿ ಸುದ್ದಿ!

Chandan Naik

ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

Comments

Leave a Comment