---Advertisement---

ಮಿಂಚು- ಆಕಾಶ್ ಒಂದಾಗಿ ಗೌತಮ್, ಭೂಮಿಕಾನಾ ಒಂದು ಮಾಡ್ತಾರಾ!

By Chandan Naik

November 18, 2025 8:24 PM

---Advertisement---


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯು ಕುತೂಹಲ ಘಟ್ಟ ತಲುಪಿದೆ. ಭೂಮಿಕಾ ಹಾಗೂ ಗೌತಮ್ ಹತ್ತಿರವಾಗುವ ಘಳಿಗೆ ಬಂದೇ ಬಿಟ್ಟಿದೆ. ಇದೀಗ ಮಿಂಚು ಹಾಗೂ ಅಪ್ಪುನೇ ಇವರಿಬ್ಬರ ಪ್ರೀತಿಗೆ ಸೇತುವೆ ಆಗಲಿದ್ದಾರೆ. ಮನೆಯ ಕಪಾಟಿನ ಮೇಲಿರುವ ಸೂಟ್‌ಕೇಸ್ ತೆಗೆಯುವಾಗ, ಅಪ್ಪುಗೆ ಫೋಟೋ ಸಿಕ್ಕಿದೆ. ಇಷ್ಟು ದಿನ ತನ್ನ ಜೊತೆ ಸಲುಗೆಯಿಂದ ಇದ್ದ ಗೌತಮ್ ಯಾರೆನ್ನುವುದು ಅಪ್ಪುಗೆ ಗೊತ್ತಾಗಿದೆ.

ಗೌತಮ್‌ನನ್ನು ಕಂಡು ಅಪ್ಪಿಕೊಂಡ ಅಪ್ಪು
ಖುಷಿಯಿಂದ ಓಡಿ ಹೋಗಿರುವ ಆಕಾಶ್, ಗೌತಮ್‌ನನ್ನು ಕಂಡು ಅಪ್ಪಿಕೊಂಡಿದ್ದಾನೆ. ಅಪ್ಪ ಎಂದು ಕರೆದಿದ್ದಾನೆ. ಭೂಮಿಕಾಗೆ ಅಪ್ಪ ಮಗನನ್ನು ಕಂಡು ಖುಷಿಯಾಗಿದೆ. ಇದೇ ಸಮಯದಲ್ಲಿ ಮಿಂಚುಗೆ ಕೂಡ ಮನೆಯಲ್ಲಿ ಆಲ್ಬಂ ಸಿಕ್ಕಿದ್ದು ತನಗೆ ಸಿಕ್ಕ ಆಲ್ಬಂನಲ್ಲಿ ಗೌತಮ್ ಮತ್ತು ಆಕಾಶ್ ಜೊತೆಯಲ್ಲಿರುವ ಫೋಟೊಗಳನ್ನು ಕಂಡು ಮಿಂಚು ಆಶ್ರ‍್ಯಗೊಂಡಿದ್ದಾಳೆ. ಆದರೆ ಮಿಂಚು ಅಪ್ಪನಿಂದ ದೂರವಾಗ್ತಾಳೆ ಅಂದುಕೊಂಡಿದ್ದ ನೋಡಿ ವೀಕ್ಷಕರ ಅಭಿಪ್ರಾಯ ಉಲ್ಟಾ ಆಗಿದೆ.

ಒಂದು ಮಾಡಲು ಪಣ
ಹೌದು ಅಪ್ಪು ಹಾಗೂ ಮಿಂಚು ಇಬ್ಬರು ಸೇರಿ ಭೂಮಿಕಾ ಹಾಗೂ ಗೌತಮ್ ಅವರನ್ನು ಒಂದು ಮಾಡಲು ಪಣ ತೊಟ್ಟಿದ್ದಾರೆ. ಇವರಿಬ್ಬರದ್ದು ಮದುವೆ ಆಗಿದೆ ಎಂದು ಅಪ್ಪು ಹಾಗೂ ಮಿಂಚುಗೆ ಗೊತ್ತಾಗಿರೋ ವಿಚಾರ ಭೂಮಿಕಾ, ಗೌತಮ್‌ಗೆ ಗೊತ್ತಿಲ್ಲ.
ಕಳೆದ ವಾರದ ಎಪಿಸೋಡ್ ಗಳಲ್ಲಿ ಜ್ವರದಿಂದ ಪರ‍್ತಿಯಾಗಿ ಕಂಗಾಲಾಗಿ ಹಾಸಿಗೆ ಹಿಡಿದಿದ್ದ ಗೌತಮ್‌ನ ಭೂಮಿ ಆರೈಕೆ ಮಾಡಿ, ಮದ್ದು, ಊಟ ಕೊಟ್ಟು ಗುಣಮುಖರಾಗುವಂತೆ ಮಾಡಿದ್ದಾಳೆ. ಇನ್ನು ಮುಂದೆ ಪುಟಾಣಿಗಳ ಮುದ್ದಾದ ಕಸರತ್ತು ಶುರುವಾಗಲಿದೆ. ಅದಕ್ಕಾಗಿಯೇ ವೀಕ್ಷಕರು ಸಿಕ್ಕಾಪಟ್ಟೆ ಕುತೂಹಲದಿಂದ ಕಾಯುತ್ತಿದ್ದಾರೆ.
ಇನ್ನೊಂದು ಕಡೆ, ಮಲ್ಲಿಯನ್ನು ಆಸ್ತಿಗೆ ಸಹಿ ಹಾಕಲು ಮನೆಗೆ ಕರೆದ ಜೈದೇವ್‌ಗೆ ಮಲ್ಲಿ ಡಿವರ‍್ಸ್ ಶಾಕ್ ನೀಡಿದ್ದಾಳೆ. ತನ್ನ ಗಂಡನ ಮುಂದೆ ನಿಂತು ಮಾತನಾಡುವುದಕ್ಕೆ ಹೆದರುತ್ತಿದ್ದ ಮಲ್ಲಿಯ ಧರ‍್ಯಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ.
ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Chandan Naik

ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

Comments

Leave a Comment